Slide
Slide
Slide
previous arrow
next arrow

ಯಕ್ಷಗಾನಕ್ಕೆ ಸಂಸ್ಕಾರ ಬಿತ್ತುವ ಶಕ್ತಿಯಿದೆ: ಉಪೇಂದ್ರ ಪೈ

300x250 AD

ಸಿದ್ದಾಪುರ : ಯಕ್ಷಗಾನ ಕಲೆ ಮತ್ತು ಕಲಾವಿದರ ಕುರಿತಾಗಿ ನಾಡು ಹೊರನಾಡುಗಳಲ್ಲಿ ಗೌರವ ಭಾವನೆ ಇದೆ. ಪೌರಾಣಿಕ ಮೌಲ್ಯಗಳನ್ನು ಜನಸಾಮಾನ್ಯರಿಗೂ ತಲುಪಿಸಿ ಅವರಲ್ಲಿ ಸಂಸ್ಕಾರವನ್ನು ಬಿತ್ತುವ ಶಕ್ತಿ ಯಕ್ಷಗಾನಕ್ಕಿದೆ. ಪಂಡಿತ ಪಾಮರರನ್ನು ಆಟ-ಕೂಟಗಳ ಮೂಲಕ ರಂಜಿಸುವ ಯಕ್ಷಗಾನ ಜನಮೆಚ್ಚಿದ ಕಲೆ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು ಅವರು ತಾಲೂಕಿನ ಹೆಮ್ಮನಬೈಲ ಯಕ್ಷ ದಕ್ಷ ಯಕ್ಷಗಾನ ಸಂಸ್ಥೆಯ ವತಿಯಿಂದ ಆಯೋಜಿಸಲಾದ ವಿದ್ಯಾರ್ಥಿಗಳಿಂದ ರಂಗಪ್ರವೇಶ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು 

ಯಕ್ಷಗಾನ ಸಮೂಹ ಕಲೆಯಾಗಿ, ಆರಾಧನೆ ಕಲೆಯಾಗಿ ಜಗತ್ತಿಗೆ ವಿಸ್ಮಯ ಹುಟ್ಟಿಸುವ ಶ್ರೇಷ್ಠ ಕಲಾ ಮಾಧ್ಯಮ. ಯಕ್ಷಗಾನ ಇರುವವರೆಗೂ ಕನ್ನಡ ಭಾಷೆ, ಸಂಸ್ಕೃತಿಗೆ ಯಾವುದೇ ಅಪಾಯವಿಲ್ಲ. ವೇದ, ಉಪನಿಷತ್ತು, ಭಗವದ್ಗೀತೆ ಹಾಗೂ ಭಾರತೀಯ ಮಹಾಕಾವ್ಯಗಳ ಸಂದೇಶವನ್ನು ಕಲಾವಿದರು ಸುಲಲಿತವಾಗಿ ತಮ್ಮ ಪ್ರೌಢ ಮಾತುಗಾರಿಕೆಯಿಂದ ಅನಾವರಣ ಗೊಳಿಸುವ ತಾಳಮದ್ದಳೆ ಒಂದು ನೈಜ ತತ್ವಾರ್ಥ ಗೋಷ್ಠಿ. ಅಂತಹ ಸರಣಿ ಯಕ್ಷಗಾನ ತಾಳಮದ್ದಳೆ ಕೂಟಗಳನ್ನು ವರ್ಷಂಪ್ರತಿ ನಡೆಸುವ ಯಕ್ಷ ದಕ್ಷ ಯಕ್ಷಗಾನ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ಯಕ್ಷಗಾನದ ಕುಣಿತದ ಹೆಜ್ಜೆಗಳನ್ನು ಕಲಿಯುವುದು ಮಕ್ಕಳ ಭಾಗ್ಯ. ಯಕ್ಷಗಾನವು ಅದರ ವೈಭವದ ವೇಷಭೂಷಣಗಳು, ಶಕ್ತಿಯುತ ಸಂಭಾಷಣೆಗಳು ಮತ್ತು ಶಕ್ತಿಯುತ ಸಂಗೀತ ಮತ್ತು ನೃತ್ಯವು ಯಕ್ಷಗಾನದ ಶಕ್ತಿ ವಿದ್ಯಾರ್ಥಿಗಳು ಚಿಕ್ಕವಯಸ್ಸಿನಲ್ಲಿ ಯಕ್ಷಗಾನ ಕಲಿಯುತ್ತಿದ್ದರಿಂದ ಅವರು ತಮ್ಮ ಜೀವನದುದ್ದಕ್ಕೂ ಈ ಕಲೆಯನ್ನು ಪ್ರೀತಿಸುತ್ತಾರೆ ಎಂದರು. ಈ ಕಾರ್ಯಕ್ರಮದಲ್ಲಿ ಉಪೇಂದ್ರ ಪೈ ಹಾಗೂ ಯಕ್ಷಗಾನದಲ್ಲಿ ಸಾಧನಗೈದ 3 ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು

300x250 AD

ಕಾರ್ಯಕ್ರಮದ ಅಧ್ಯಕ್ಷತೆ ದಿವಾಕರ್ ಆರ್‌ ನಾಯ್ಕ ಹೆಮ್ಮನಬೈಲ ವಹಿಸಿದರು. ಮುಖ್ಯ ಅತಿಥಿಗಳಾಗಿ ಮೋಹನ್ ಗೌಡ, ಗಜಾನನ ಹೆಗಡೆ, ಸುರೇಶ್ ಎಸ್ ಎನ್. ಹಾಗೂ ಊರ ಪ್ರಮುಖರು ಉಪಸ್ಥಿತರಿದ್ದರು 

Share This
300x250 AD
300x250 AD
300x250 AD
Back to top