ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ಧ ಇಡಗುಂಜಿ ಶ್ರೀವಿನಾಯಕ ದೇವಾಲಯದಲ್ಲಿ ಅಂಗಾರಕ ಸಂಕಷ್ಟಿಯ ಪ್ರಯುಕ್ತ ಮಂಗಳವಾರ ಸಹಸ್ರಾರು ಭಕ್ತರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಭಕ್ತರಿಗಾಗಿ ಬೆಳಿಗ್ಗೆ 5 ಗಂಟೆಯಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೆಳಿಗ್ಗೆ 7 ಗಂಟೆಗೆ ಪಂಚಾಮೃತಾಭಿಷೇಕದೊoದಿಗೆ ದೈನಂದಿನ ಸೇವೆಗಳು ನಡೆದವು. 10 ಗಂಟೆಯಿಂದ ಗಣಹೋಮ ಸಂಕಲ್ಪದೊಂದಿಗೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ದೇವರ ಸನ್ನಿಧಿಯಲ್ಲಿ ಗಣಹೋಮ, ಕುಂಕುಮಾರ್ಚನೆ, ಹಣ್ಣುಕಾಯಿ, ಪಂಚಕಜ್ಜಾಯ ಸೇವೆ, ಬಾಳೆಗೊನೆ ಸೇವೆ, ಅಭಿಷೇಕ, ಮಂಗಳಾರತಿ, ಸತ್ಯ ಗಣಪತಿ ವ್ರತ, ಸತ್ಯ ನಾರಾಯಣ ವ್ರತ, ಪಂಚಾಮೃತಾಭಿಷೇಕ, ದೂರ್ವಾರ್ಚನೆ, ಕುಂಕುಮಾರ್ಚನೆ, ಸೇರಿದಂತೆ ವಿವಿಧ ಸೇವೆ ಸಲ್ಲಿಸಿದರು.
ನಾಡಿನ ವಿವಿಧೆಡೆಯಿಂದ ಸಹಸ್ರಾರು ಭಕ್ತಗಣ ದೇವಾಲಯಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿ ಪುನೀತರಾದರು. ಈ ಬಾರಿ ಸಾವಿರಾರು ಸಂಖ್ಯೆಯಲ್ಲಿ ಅಯಪ್ಪ ಮಾಲಾಧಾರಿ ವೃತಧಾರಿಗಳು ಶಬರಿಮಲೆಗೆ ಹೋಗುವ ಮುಂಚೆ ದರ್ಶನದ ಹಿನ್ನಲೆ ಭಕ್ತರ ಸಂಖ್ಯೆಯು ಹೆಚ್ಚಳವಾಗಿತ್ತು. ಮಧ್ಯಾಹ್ನ ಭಕ್ತರಿಗೆ ಪ್ರಸಾದ ಭೋಜನದ ವ್ಯವಸ್ಥೆ ಸ್ವೀಕರಿಸಿದರು.