ಹಳಿಯಾಳ: ಶಾಸಕರ ಕಾರ್ಯಾಲಯದ ಆವರಣದಲ್ಲಿ ಹಳಿಯಾಳ, ದಾಂಡೇಲಿ ಹಾಗೂ ಜೊಯಿಡಾ ತಾಲೂಕಿನ ಆಯ್ದ 5 ವಿಶೇಷಚೇತನ ಫಲಾನುಭವಿಗಳಿಗೆ ಟಿವಿಎಸ್ ಕಂಪನಿಯ ವತಿಯಿಂದ ಕಂಪನಿಯ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ಯೋಜನೆಯಡಿ ಇಂಧನ ಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.
ಬಳಿಕ ಮಾತನಾಡಿದ ಅವರು, ವಿಶೇಷ ಚೇತನರು ಸಮಾಜದಲ್ಲಿ ಗೌರವಯುತವಾದ ಜೀವನ ನಡೆಸಬೇಕು. ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗವನ್ನು ಪಡೆಯುವುದು ಅವರ ಹಕ್ಕು. ಈ ನಿಟ್ಟಿನಲ್ಲಿ ಅವರು ಸ್ವಾವಲಂಬಿಯಾಗಿರುವುದು ಅತಿ ಅವಶ್ಯಕ. ವಿಶೇಷಚೆತನರು ಸ್ವ- ಉದ್ಯೋಗ ಕೈಗೊಂಡಲ್ಲಿ ಸಮಾಜದಲ್ಲಿ ಅವರು ಪರಾವಲಂಬಿಯಾಗಿರದೆ ಉತ್ತಮ ಜೀವನ ನಡೆಸಲಿಕ್ಕೆ ಸಹಾಯಕವಾಗುವುದು. ವಿಶೇಷ ಚೇತನರ ಶಿಕ್ಷಣಕ್ಕೆ, ಉದ್ಯೋಗಕ್ಕೆ ಅನೂಕೂಲವಾಗುವ ನಿಟ್ಟಿನಲ್ಲಿ ಟಿ.ವಿ.ಎಸ್. ಕಂಪನಿಯ ವತಿಯಿಂದ ಇಂಧನ ಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಲಾಗಿದೆ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ, ಕೆ.ಪಿ.ಸಿ.ಸಿ ಸದಸ್ಯ ಸುಭಾಸ ಕೋರ್ವೆಕರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ.ಲಕ್ಷೀದೇವಿ, ಟಿ.ವಿ.ಎಸ್. ಕಂಪನಿಯ ಅಧಿಕಾರಿಗಳು, ಪುರಸಭೆ ಸದಸ್ಯರು ಹಾಗೂ ಮುಖಂಡರು, ವಿ.ಆರ್.ಡಿ.ಎಮ್ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಎಲ್.ಪ್ರಭು ಇದ್ದರು.