Slide
Slide
Slide
previous arrow
next arrow

ಜನಮನಸೂರೆಗೊಂಡ ಹಿರೇಗುತ್ತಿ ಸಂಕ್ರಾಂತಿ ಕಳಸೋತ್ಸವ

300x250 AD

ಕುಮಟಾ: ಹಿರೇಗುತ್ತಿಯಲ್ಲಿ ಪ್ರತಿವರ್ಷ ಸಂಕ್ರಾಂತಿಯ ವೇಳೆಯಲ್ಲಿ ನಡೆಯುವ ಅವಲಹಬ್ಬ ಅತೀ ವಿಜೃಂಭಣೆಯಿಂದ ನಡೆಯಿತು.
ಹಿರೇಗುತ್ತಿಯ ಕಳಸದ ಮನೆ ದೇವಸ್ಥಾನದಲ್ಲಿ ಬಗೆಬಗೆಯ ಹೂವುಗಳಿಂದ ಅಲಂಕೃತಗೊಂಡ ಕಳಸಗಳನ್ನು 2 ಕಿ.ಮೀ. ದೂರವಿರುವ ಹೈವೆ ರಸ್ತೆ 66 ರಲ್ಲಿರುವ ಹಿರೇಗುತ್ತಿಯ ಗಡಿ ಮೊರಬಾ ಹತ್ತಿರದಲ್ಲಿರುವ ಹಳೆ ಕಳಸದ ಮನೆಯಲ್ಲಿ ಅಲಂಕೃತವಾದ ಕಳಸಗಳಿಗೆ ಪೂಜೆ ಸಲ್ಲಿಸಿ ಹೇಳಿಕೆ ಮಾಡಿಕೊಂಡು ಶ್ರೀ ಯಜಮಾನ ಬೊಮ್ಮಯ್ಯ ದೇವರು ಶ್ರೀ ಹಿರೇಹೊಸಬ ಶ್ರೀ ಸಣ್ಣಹೊಸಬ ಮೂರು ದೇವರ ಕಳಸಗಳನ್ನು ಅರ್ಚಕರು ಹೊತ್ತುಕೊಂಡು ಆವೇಶಭರಿತವಾಗಿ ಹೈವೆ ರಸ್ತೆಯಲ್ಲಿ ಕಳಸದ ಮನೆಯಿಂದ- ಹಿರೇಗುತ್ತಿಯತ್ತ ಮುಖ ಮಾಡಿದವು.
3 ಕಳಸಗಳು ಹೈವೆ ರಸ್ತೆಯಲ್ಲಿ ತಮ್ಮ ತಮ್ಮ ಗಾಂಭಿರ್ಯದ ನಡಿಗೆಯಲ್ಲಿ ಹೊರಟಾಗ ಭಕ್ತಾಧಿಗಳು ಮತ್ತು ಹಿರೇಗುತ್ತಿ ಜನಸ್ತೋಮ ದೇವರ ಕಳಸದ ಜೊತೆ ಹೆಜ್ಜೆ ಹಾಕಿದ ದೃಶ್ಯ ರೋಮಾಂಚನವಾಗಿತ್ತು ರಸ್ತೆಯ ಅಲ್ಲಲ್ಲಿ ಭಕ್ತರು ದೇವರಿಗೆ ಹಣ್ಣು- ಕಾಯಿ ಆರತಿ ಬೆಳಗಿ ಕಳಸೋತ್ಸವಕ್ಕೆ ಇನ್ನೂ ಹೆಚ್ಚಿನ ಮೆರಗನ್ನು ತಂದರು. ಕಳಸದ ಮನೆಯಿಂದ ಹೊರಟ 3 ಕಳಸಗಳು ಹಿರೇಗುತ್ತಿಯ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಪೂಜೆಯನ್ನು ಸಲ್ಲಿಸಿಕೊಂಡು ಅಪ್ಪಣೆ ನೀಡಿ ಅಲ್ಲಿಂದ ಶ್ರೀ ಯಜಮಾನ ಬೊಮ್ಮಯ್ಯ ದೇವಸ್ಥಾನಕ್ಕೆ ಹೊರಟವು. ಅಲ್ಲಿ ಬೊಮ್ಮಯ್ಯ ದೇವರು ತನ್ನ ಸ್ಥಾನದಲ್ಲಿ ಆಸೀನನಾಗುತ್ತಾನೆ ನಂತರ ಅಲ್ಲಿಂದ ಹಿರೇಹೊಸಬ, ಸಣ್ಣಹೊಸಬ ಕಳಸಗಳು ಬೋಳೆಕೇರಿ ಮಾರ್ಗವಾಗಿ ತನ್ನ ಸ್ಥಾನಕ್ಕೆ ಹೊರಟವು. ನಂತರ ಹಿರೇಹೊಸಬ, ಸಣ್ಣಹೊಸಬ ಸನ್ನಿಧಿಯಲ್ಲಿ ಅಪ್ಪಣೆ ನೀಡಿ ತಮ್ಮ ಸ್ಥಾನದಲ್ಲಿ ಆಸೀನರಾಗುತ್ತವೆ.
ನಂತರ ಸಂಜೆ 8 ಘಂಟೆ ಸಮಯಕ್ಕೆ ಪುನಃ ಬೊಮ್ಮಯ್ಯ ದೇವರ ಕಳಸವು ಸೋಮಾರ ಗದ್ದೆಯಲ್ಲಿ ತನ್ನ ತಮ್ಮಂದಿರ ಬರುವಿಕೆಗಾಗಿ ಕಾಯುತ್ತಿರುತ್ತದೆ ನಂತರ ಹಿರೇಹೊಸಬ-ಸಣ್ಣಹೊಸಬ ತನ್ನ ಸ್ಥಾನದಿಂದ ಪುನಃ ಬೊಮ್ಮಯ್ಯ ದೇವರನ್ನು ಸೇರಿಕೊಂಡು ಗೋಳಿಬೀರ ದೇವಸ್ಥಾನದಲ್ಲಿ ಪೂಜೆ ಪಡೆದುಕೊಂಡು ಬೊಳೆಕೇರಿಯ ಕಳಸದ ಮನೆಯಲ್ಲಿ ಪೂಜೆ ಸಲ್ಲಿಸಿಕೊಂಡು ಕಳಸೋತ್ಸವವು ಅಲ್ಲಿಗೆ ಸಮಾಪ್ತಿ ಆಯಿತು. ನೆರೆದ ಸಹಸ್ರಾರು ಸಾವಿರ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದು ಕೃತಾರ್ಥರಾದರು. ಅರ್ಚಕರು, ಮೊಕ್ತಸದಾರರು, ಗಾಂವಕರರು ಹಾಗೂ ಕಟಗದಾದರರು, ಪದಾತಿ ದಳ, ಊರನಾಗರಿಕರು ಇವರೆಲ್ಲರ ಸಹಕಾರದಿಂದ ಸಂಕ್ರಾಂತಿ ಹಬ್ಬ (ಅವಲ ಹಬ್ಬ) ಅತೀ ಅಚ್ಚುಕಟ್ಟಾಗಿ ಅತೀ ವಿಜೃಂಭಣೆಯಿಂದ ನಡೆಯಿತು.

300x250 AD
Share This
300x250 AD
300x250 AD
300x250 AD
Back to top