Slide
Slide
Slide
previous arrow
next arrow

ಮಡಿವಾಳ ಸಮಾಜವನ್ನ ಎಸ್‌ಟಿಗೆ ಸೇರಿಸಲು ಧ್ವನಿ ಎತ್ತುವೆ: ಶಾಸಕ ದಿನಕರ ಶೆಟ್ಟಿ

300x250 AD

ಕುಮಟಾ: ಮಡಿವಾಳ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಈ ಸಮಾಜಕ್ಕೆ ನ್ಯಾಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಮಡಿವಾಳ ಸಮಾಜವನ್ನು ಸೇರಿಸಲು ಅಧಿವೇಶನದಲ್ಲಿ ಧ್ವನಿ ಎತ್ತುವ ಕಾರ್ಯವನ್ನು ಮಾಡುತ್ತೇನೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಅವರು ಪಟ್ಟಣದ ನೆಲ್ಲಿಕೇರಿಯ ಶ್ರೀಮಹಾಸತಿ ಸಭಾಭವನದಲ್ಲಿ ನಡೆದ ಶ್ರೀಮಡಿವಾಳ ಸಂಘ ಹಾಗೂ ಸಮಾಜ ಸೇವಾ ಸಂಸ್ಥೆ ಕುಮಟಾ ಇವರ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಡಿವಾಳ ಸಂಘದ ಅಧ್ಯಕ್ಷ ಉದಯ ಎನ್.ಮಡಿವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಡಿವಾಳ ಸಮಾಜಕ್ಕೆ ಸಭಾಭವನದ ಅಗತ್ಯ ಇದ್ದು, ಆ ನಿಟ್ಟಿನಲ್ಲಿ ಮುಂಬರುವ ದಿನದಲ್ಲಿ ಕಾರ್ಯಪ್ರವೃತ್ತರಾಗುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಪಿಡಬ್ಲ್ಯೂಡಿ ಎಇಇ ಸುದರ್ಶನ್ ಎಸ್.ಹೊನ್ನಾವರ, ಹೆಸ್ಕಾಂ ಎಇಇ ರಾಜೇಶ ಮಡಿವಾಳ, ಧಾರವಾಡ ಮಹಾನಗರ ಪಾಲಿಕೆ ಗಣೇಶ ಮಡಿವಾಳ, ಪ್ರಮುಖರಾದ ಸಂದೇಶ ಬೋಮ್ಕರ್, ಭಾಸ್ಕರ್ ಚಂದಾವರ, ಕೇಶವ ಮಡಿವಾಳ, ಮಂಜುನಾಥ ಎನ್ ಮಡಿವಾಳ, ಗಜಾನನ ಮಡಿವಾಳ, ಜಟ್ಟಿ ಮಡಿವಾಳ, ಮಂಜುನಾಥ ಮಡಿವಾಳ, ರಮೇಶ ಮಡಿವಾಳ, ಬಾಲಕೃಷ್ಣ ಮಡಿವಾಳ ಹಾಗೂ ಇತರರು ಉಪಸ್ಥಿತರಿದ್ದರು. ಸಮಾಜ ಬಾಂಧವರಿಗಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮ ಜರುಗಿತು.

300x250 AD
Share This
300x250 AD
300x250 AD
300x250 AD
Back to top