Slide
Slide
Slide
previous arrow
next arrow

ಮೊಡರ್ನ್ ಎಜ್ಯುಕೇಶನ್ ಶಾಲೆಯಲ್ಲಿ ಆರ್ಟ್ಸ್ ಸರ್ಕಲ್

300x250 AD

ಗೋಕರ್ಣ: ಇಲ್ಲಿಯ ಸಮೀಪದ ಮೋಡರ್ನ ಎಜುಕೇಶನ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ರೀತಿಯ ಕಾರ್ಯಕ್ರಮವಾದ ಆರ್ಟ್ಸ್ ಸರ್ಕಲ್ ಅನ್ನು ಆಯೋಜಿಸಲಾಯಿತು.
ವಿದ್ಯಾರ್ಥಿಗಳಿಗಾಗಿ ಆರ್ಟ್ ಸರ್ಕಲ್ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ ನಾಯಕ ತೊರ್ಕೆ ಅವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮ್ಯಾನೇಜಿಂಗ್ ಟ್ರಸ್ಟಿ, ಡಾ.ಎಂ.ಡಿ.ನಾಯ್ಕ್, ಶಾಲೆಯ ಶೈಕ್ಷಣಿಕ ಮಾರ್ಗದರ್ಶಕ ಮಂಜು ಹಿತ್ತಲಮಕ್ಕಿ, ಮುಖ್ಯೋಪಾಧ್ಯಾಯ ರಾಜೇಶ್ ಗೊನ್ಸಾಲ್ವೀಸ್, ಹಿರಿಯ ಶಿಕ್ಷಕಿ ವೃಂದಾ ಗಾಂವ್ಕರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ 90ಕ್ಕಿಂತ ಹೆಚ್ಚು ಅಂಕ ಪಡೆದ ಹಾಗೂ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷರು ಮಾತನಾಡಿ, ಗೋಕರ್ಣ ಭಾಗದಲ್ಲಿ ಮೊದಲ ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಥಾಪಿಸಿದ್ದು ತಮ್ಮ ಹೆಮ್ಮೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈ ಆರ್ಟ್ಸ್ ಸರ್ಕಲ್ ಮಕ್ಕಳ ಪ್ರತಿಭೆಯನ್ನ ಹೊರಹಾಕಲು ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಇದು ಸೂಕ್ತ ವೇದಿಕೆ. ಇದರೊಂದಿಗೆ ಮಕ್ಕಳ ಪ್ರತಿಭೆ ವೃದ್ಧಿಯಾಗುತ್ತದೆ. ಶಾಲೆ ಹಿಂದಿನಿoದ ನಡೆದು ಬಂದ ರೀತಿ, ಪಟ್ಟ ಪರಿಶ್ರಮ, ಬೆಳವಣಿಗೆ ಹಾಗು ಇನ್ನೂ ಹೆಚ್ಚಿನ ಕನಸು ನಮ್ಮದಾಗಿದ್ದು, ಈ ಭಾಗದ ಶೈಕ್ಷಣಿಕ ಹಸಿವನ್ನು ನೀಗಿಸಲು ಪ್ರಯತ್ನಿಸುತ್ತೇವೆ ಎಂದರು.
ಮೊಡರ್ನ್ ಎಜುಕೇಶನ್ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ, ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಡಿ.ನಾಯ್ಕ್ ಇವರು ಉಪಸ್ಥಿತರಿದ್ದು ಮುಂದಿನ ಗುರಿ, ಆಶೋತ್ತರಗಳನ್ನು ವಿವರಿಸಿ ಸಂಸ್ಥೆಯ, ಅಧ್ಯಕ್ಷರ ಶಾಲೆಯ ಬಗೆಗಿನ ಕಾಳಜಿ ಕುರಿತು ಮಾತನಾಡಿ ಹೆಚ್ಚಿನ ಕಾರ್ಯ ವೈಕರಿಗಳು ಅವರಿಂದ ಸಿಗುವಂತಾಗಲಿ ಎಂದರು. ಶೈಕ್ಷಣಿಕ ಮಾರ್ಗದರ್ಶಕರಾದ ಮಂಜು ಹಿತ್ತಲಮಕ್ಕಿ ಮಾತನಾಡಿ, ಶಾಲೆಯಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು 90ಕ್ಕಿಂತ ಹೆಚ್ಚು ಅಂಕವನ್ನು ಪಡೆದು ಸನ್ಮಾನ ಪಡೆದುಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಗಣೇಶ್ ಮದನ ನಾಯಕ ,ರಶ್ಮಿತಾ ಈಶ್ವರ ಗೌಡ ಹಾಜಾರಿದ್ದರು. ಸುಷ್ಮಾ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಜುಬಿಯಾ ಸಯ್ಯದ್ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top