Slide
Slide
Slide
previous arrow
next arrow

ಸಾಲ್ಕಣಿ ಕ್ಲಸ್ಟರಿನಲ್ಲೊಂದು ಅದ್ದೂರಿ ‘ಶೈಕ್ಷಣಿಕ ಕಲಿಕಾ ಹಬ್ಬ’

300x250 AD

ಶಿರಸಿ:  ಸಮೂಹ ಸಂಪನ್ಮೂಲ ಕೇಂದ್ರ ಸಾಲ್ಕಣಿಯಲ್ಲಿ ಸಿಆರ್‌ಪಿ ನಾಗರತ್ನಮ್ಮ ಡಿ. ಮುಂದಾಳತ್ವದಲ್ಲಿ‌ ತಾಲೂಕಿನ ನೈಗಾರದ ಸರಕಾರಿ ಹಿರಿಯ  ಪ್ರಾಥಮಿಕ ಶಾಲೆಯಲ್ಲಿ  ಅದ್ದೂರಿಯಾಗಿ ‘ಶೈಕ್ಷಣಿಕ ಕಲಿಕಾ ಹಬ್ಬ’ವು ಜರುಗಿತು.

ಪ್ರಸ್ತುತ ವರ್ಷದ “ಕಲಿಕಾ ಚೇತರಿಕೆಗೆ ಹೊಸ ಸ್ಪರ್ಶ”  ನೀಡುವ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳ ಕರೋನಾ ಸಂಕಷ್ಟದಲ್ಲಿ ಕಲಿಕೆಯಲ್ಲಾದ ನಷ್ಟ ತುಂಬಲು ಈ ವರ್ಷ ನಾವೀನ್ಯತೆ ಚಟುವಟಿಕೆಗಳನ್ನು ಒಳಗೊಂಡ ಕಲಿಕಾ ಚೇತರಿಕೆ ಉಪಕ್ರಮ ಇದಾಗಿದ್ದು,  ಈ ಚಟುವಟಿಕೆಗಳ ಪ್ರದರ್ಶನವನ್ನು ಮಕ್ಕಳು ಹೊಸ ರೀತಿಯಲ್ಲಿ ನಡೆಸಿಕೊಟ್ಟು ಕಾರ್ಯಕ್ರಮವನ್ನು ಗೀಗಿ ಪದ, ರೂಪಕ, ನಾಟಕದ ಕತೆ ಕಟ್ಟುವ ಪ್ರದರ್ಶನದ ಮೂಲಕ ಚಂದಗಾಣಿಸಿದ್ದಾರೆ.  ಈ ಒಂದು ಹಬ್ಬವನ್ನು ಪಾಲಕ, ಪೋಷಕರು ಸಹ ಅನುಭವಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಪೂರ್ವದಲ್ಲಿ ಪಾಲಕ,ಪೋಷಕರಿಗೆ, ಶಿಕ್ಷಕರಿಗೆ  ವಿಜ್ಞಾನ ರಂಗೋಲಿ ಸ್ಪರ್ಧೆ, ಸಂಗೀತ ಕುರ್ಚಿ, ವೇಗದ ನಡಿಗೆ, ನಿಧಾನ ಬೈಕ್ ಓಡಿಸುವುದು, ಹಗ್ಗಾಜಗ್ಗಾಟ ಇನ್ನೂ ಮುಂತಾದ ಮೋಜಿನ ಆಟಗಳನ್ನು ಏರ್ಪಡಿಸಲಾಗಿತ್ತು.
ಅಡಿಗೆ ಸಿಬ್ಬಂದಿಗೆ ಇಂಧನ ರಹಿತ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿತ್ತು.  ಕಾರ್ಯಕ್ರಮದ ದಿನ ಅಧಿಕಾರಿಗಳನ್ನು ಬ್ಯಾಂಡ್ ಸೆಟ್ ಜೊತೆಗೆ ಯಕ್ಷಗಾನ ಕಲೆಯೊಂದಿಗೆ ಸ್ವಾಗತಿಸಲಾಯಿತು. ಜೊತೆಗೆ ‘ಕಲಿಕಾ ತೇರು’ ಎಳೆದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಪಿ. ಬಸವರಾಜ್ ಆಗಮಿಸಿ ಇಂತ ಕಾರ್ಯಕ್ರಮಗಳಿಂದ ಶಾಲೆ ಮತ್ತು ಸಮುದಾಯದ ಸಂಬಂಧ ಗಟ್ಟಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಎಸ್. ಹೆಗಡೆ ಆಗಮಿಸಿದ್ದು, ಈ ಕಾರ್ಯಕ್ರಮ ಇಷ್ಟು ಅದ್ದೂರಿಯಾಗಿ ನಡೆಯಲು ಈ ಭಾಗದ ಸಿಆರ್‌ಪಿಗಳ ಶ್ರಮ ತುಂಬಾ  ಇದೆ ಜೊತೆಗೆ ಇಲ್ಲಿಯ ಪಾಲಕ,ಪೋಷಕರ ಸಹಾಯ ಸಹಕಾರ ಕೂಡಾ ತುಂಬಾ ಇದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಶಾಂತ ಹೆಗಡೆ ವಹಿಸಿದ್ದರು. ಹಾಗೆಯೇ ಇಲಾಖೆಯಿಂದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ರವಿ ಬೆಂಚಳ್ಳಿ ಉಪನಿರ್ದೇಶಕರ ಕಛೇರಿಯ ಎಮ್.ಕೆ. ಮೊಗೇರ, ಬಿ.ಆರ್.ಸಿ ಸಮನ್ವಯ ಅಧಿಕಾರಿಗಳಾದ ದಿನೇಶ ಶೇಟ್, ಶಿಕ್ಷಣ ಸಂಯೋಜಕರಾದ ಎಮ್. ಕೆ. ನಾಯ್ಕ, ಸಾಲ್ಕಣಿ ಗ್ರಾಮ ಪಂಚಾಯತ ಅಧ್ಯಕ್ಷರಾದ  ಟಿ.ಎಮ್. ಹೆಗಡೆ, ಸ್ಥಳ ದಾನಿಗಳಾದ ಮಧುಕರ ಹೆಗಡೆ ಸಾಲ್ಕಣಿ, ಗ್ರಾಮ ಪಂಚಾಯತ ಸದಸ್ಯರುಗಳು ಉಪಸ್ಥಿತರಿದ್ದರು. ಕ್ಲಸ್ಟರಿನ ಎಲ್ಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರುಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಿಆರ್.ಪಿ ಶ್ರೀಮತಿ ನಾಗರತ್ನಮ್ಮ ಡಿ. ಅತಿಥಿಗಳನ್ನು ಸ್ವಾಗತಿಸಿದರು. ಎಸ್.ಕೆ. ನಾಯ್ಕ ನಿರೂಪಿಸಿದರು ಪೂರ್ಣಿಮಾ ಹೆಗಡೆ ವಂದನಾರ್ಪಣೆ ಮಾಡಿದರು.

300x250 AD
Share This
300x250 AD
300x250 AD
300x250 AD
Back to top