• first
  Slide
  Slide
  previous arrow
  next arrow
 • ಮೂಲಸೌಕರ್ಯ ಒದಗಿಸದೇ ಇದ್ದಲ್ಲಿ ರಸ್ತೆ ತಡೆದು ಪ್ರತಿಭಟನೆ

  300x250 AD

  ಜೊಯಿಡಾ: ತಾಲೂಕಿನ ಗಡಿ ಗ್ರಾಮ ಡಿಗ್ಗಿ ಮತ್ತು ಸುತ್ತಲಿನ ಗ್ರಾಮಗಳಿಗೆ ಮೂಲ ಭೂತ ಸೌಲಭ್ಯ ನೀಡಲು ಹಿಂದೇಟು ಹಾಕಲಾಗುತ್ತದೆ. ಸೌಲಭ್ಯ ನೀಡಲು ಆಗ್ರಹಿಸಿ ಜನವರಿ 11ರಂದು ರಾಜ್ಯ ಹೆದ್ದಾರಿ ಕಿರವತ್ತಿಯಲ್ಲಿ ತಡೆದು ಪ್ರತಿಭಟಿಸುವುದಾಗಿ ಅಜಿತ ಮಿರಾಶಿ ಅಧ್ಯಕ್ಷ ತಾಲೂಕ ಕುಣಬಿ ಸಮಾಜ ಹೇಳಿದ್ದಾರೆ.
  ಬಜಾರಕುಣಂಗ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ 25 ಕ್ಕೂ ಹೆಚ್ಚು ಗ್ರಾಮಗಳು ಹಾಗೂ ಕಾತೇಲಿ ಗ್ರಾಮ ಪಂಚಾಯತದ ಭಾಮಣೆ, ಪಾತಾಗೂಡಿ, ಸಿರವೋಳಿ, ತೇರಾಳಿ ಗ್ರಾಮಗಳಿಗೆ ರಸ್ತೆ ಸೇರಿದಂತೆ ಮೂಲ ಭೂತ ಸೌಲಭ್ಯ ನೀಡಲು ಅಸಾಧ್ಯವಾಗಿದೆ. ಜನರ ಸಂಪರ್ಕಕ್ಕೆ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ನಡುಗಡ್ಡೆಯಲ್ಲಿ ಬದುಕ ಬೇಕು. ಗೋವಾ ಗಡಿ ರಾಜ್ಯ ಹೆದ್ದಾರಿ ಡಾಂಬರಿಕರಣ, ತೆರಾಳಿ ಡಿಗ್ಗಿ ರಸ್ತೆ ಡಾಂಬರಿಕರಣ, ಘಡಾವಲಿ ಸೇತುವೆ, ಜೋಯಿಡಾದಿಂದ ಗವಳಾದೇವಿ ಹಾಗೂ ಭಾಮಣೆ ಬಸ್ ಪ್ರಾರಂಭಿಸಬೇಕು. ಇಲ್ಲದಿದ್ದರೆ ಜನವರಿ 11 ರಂದು ಸದಾಶಿವಗಡ ರಾಮನಗರ ರಾಜ್ಯ ಹೆದ್ದಾರಿ ಕಿರವತ್ತಿಯಲ್ಲಿ ತಡೆದು ಪ್ರತಿಭಟಿಸುವುದಾಗಿ ಹೇಳಿದರು.
  ಈ ಸಂದರ್ಭದಲ್ಲಿ ಪ್ರಕಾಶ ಮಿರಾಶಿ ಅಧ್ಯಕ್ಷರು ಮೂ. ಸೌ.ಸ, ತುಕಾರಾಮ ಗಾವಡಾ ಉಪಾಧ್ಯಕ್ಷ, ದೇವಿದಾಸ ಮಿರಾಶಿ ಕಾರ್ಯದರ್ಶಿ, ವಿನೋದ ದೇಸಾಯಿ ಅ ಗ್ರಾ.ಪಂ.ಬಜಾರಕುಣಗ, ಅಜಿತ ಮಿರಾಶಿ ಅ.ತಾ.ಕುಣಬಿ ಸಮಾಜ, ರತ್ನಾಕರ ದೇಸಾಯಿ ಗ್ರಾ.ಪಂ.ಕಾತೇಲಿ, ದತ್ತಾ ಮಿರಾಶಿ, ರವಿ ಮಿರಾಶಿ, ರವಿದಾಸ ಮಿರಾಶಿ, ರಮೇಶ ಗಾವಡಾ, ರತ್ನಾಕರ ಗಾವಡಾ, ಸುರೇಶ ಮಿರಾಶಿ, ಸಖಾರಾಮ ಮಿರಾಶಿ, ನಂದಾ ಗಾವಡಾ, ಸಂತೋಷ ವೆಳಿಪ ಕಾರಟೋಳಿ ಮುಂತಾದವರು ಇದ್ದರು.

  300x250 AD
  Share This
  300x250 AD
  300x250 AD
  300x250 AD
  Back to top