Slide
Slide
Slide
previous arrow
next arrow

ಟ್ರ್ಯಾಕ್ಟರ್ ದುರಂತದಲ್ಲಿ‌ ವಿದ್ಯಾರ್ಥಿನಿ ಕಾವ್ಯಾ ಮೃತ: ಧಾತ್ರಿ ಶ್ರೀನಿವಾಸ ಭಟ್ ಸಂತಾಪ

300x250 AD

ಮುಂಡಗೋಡ: ನಿನ್ನೆ ನಡೆದ ಟ್ರ್ಯಾಕ್ಟರ್ ಅಪಘಾತದಲ್ಲಿ ತಾಲೂಕಿನ ಮಳಗಿ ಭಾಗದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಬ್ಯಾಡಗಿ ಮೃತಪಟ್ಟಿದ್ದು ತುಂಬಾ ದುಃಖದ ವಿಷಯವಾಗಿದೆ ಎಂದು ಧಾತ್ರಿ ಫೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಭಟ್ ವಿಷಾದ ವ್ಯಕ್ತಪಡಿಸಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಯಿಸಿದ ಅವರು, ಪಿಕ್ನಿಕ್,ಪ್ರವಾಸಗಳಿಗೆ ಹೋದಾಗ ಎಷ್ಟು ಜಾಗೃತವಾಗಿದ್ದರೂ ಸಾಲದು. ಆದರೂ ಇದೊಂದು ವಿಧಿಯಾಟವೇ ಸರಿ. ಮೃತ ಬಾಲಕಿಯ ಆತ್ಮಕ್ಕೆ ಶಾಂತಿ ಸಿಗಲಿ. ತಂದೆ- ತಾಯಿ ಹಾಗೂ ಬಂಧುಗಳಿಗೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದರು.

300x250 AD

ಹಾಗೆಯೇ ಟ್ರಾಕ್ಟರ್ ಅಪಘಾತದಲ್ಲಿ ಗಾಯಗೊಂಡು ಸಿರಸಿಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಮತ್ತು ಪಾಲಕರನ್ನು ಭೇಟಿ ಮಾಡಿ ಅವರ ಯೋಗಕ್ಷೇಮವನ್ನು ವಿಚಾರಿಸಿದರು.

Share This
300x250 AD
300x250 AD
300x250 AD
Back to top