Slide
Slide
Slide
previous arrow
next arrow

ಶಿರಸಿಯ ಲಯನ್ಸ್ ಕ್ಲಬ್‌ನ ಸುವರ್ಣ ಮಹೋತ್ಸವ ಸಮಾರಂಭ ಯಶಸ್ವಿ

300x250 AD

ಶಿರಸಿ:ಶಿರಸಿ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ವರ್ಷದ ಅಂಗವಾಗಿ ಸುವರ್ಣ ಮಹೋತ್ಸವ ಸಮಾರಂಭವನ್ನು ಜ.5 ರಂದು ಆಚರಿಸಲಾಯಿತು. ಸುವರ್ಣ ಮಹೋತ್ಸವದ ನೆನಪಿಗಾಗಿ ಕಟ್ಟಿಸಿದ “ಲಯನ್ಸ್ ಸುವರ್ಣ ಸೇವಾ ಸೌಧ”ವನ್ನು ಲಯನ್ ಅಂತಾರಾಷ್ಟ್ರೀಯ ತೃತೀಯ ಉಪಾಧ್ಯಕ್ಷ ಲಯನ್ ಎ.ಪಿ. ಸಿಂಗ್ ಉದ್ಘಾಟಿಸಿದರು. ನಂತರ ನಡೆದ ಸಮಾರಂಭದ ಸಭಾ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವ ಮೂಲಕ ಲಯನ್ ಎ.ಪಿ. ಸಿಂಗ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ಸಮಾಜಮುಖಿ ಸೇವಾ ಕಾರ್ಯದ ಮಹತ್ವವನ್ನು ವಿವರಿಸಿ ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಮಟ್ಟದ ಧ್ಯೇಯೋದ್ದೇಶಗಳ ಸಂದೇಶಗಳನ್ನು ನೀಡಿದರು. ಶಿರಸಿ ಲಯನ್ಸ್ ಕ್ಲಬ್‌ನ ಕಾರ್ಯಚಟುವಟಿಕೆಗಳನ್ನೂ, ಸಾಧನೆಗಳನ್ನೂ ಶ್ಲಾಘಿಸಿ ಶುಭಕೋರಿದರು.

ಲಯನ್ ಅಂತಾರಾಷ್ಟ್ರೀಯ ನಿರ್ದೇಶಕರಾದ ಲಯನ್ ಕೆ. ವಂಶೀಧರಬಾಬು ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆ “ಲಯನ್ಸ್ ಸುವರ್ಣ ಸಂಭ್ರಮ”ವನ್ನು ಬಿಡುಗಡೆ ಮಾಡಿದರು. ಸ್ಮರಣ ಸಂಚಿಕೆಯ ಸಂಪಾದಕ ಲಯನ್ ವಿನಯ ಹೆಗಡೆ ಹಾಗೂ ಸಹ ಸಂಪಾದಕಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ರಮಾ ಪಟವರ್ಧನ ಸಹಕರಿಸಿದರು.

ಶಿರಸಿ ಲಯನ್ಸ್ ಕ್ಲಬ್‌ನ ಕಳೆದ 49 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರ ಭಾವಚಿತ್ರಗಳ ಫಲಕವನ್ನು ಲಯನ್ಸ್ ಅಂತಾರಾಷ್ಟ್ರೀಯ ಮಾಜಿ ನಿರ್ದೇಶಕ ಲಯನ್ ವಿ.ವಿ. ಕೃಷ್ಣರೆಡ್ಡಿ ಅನಾವರಣಗೊಳಿಸಿದರು. ಅತಿಥಿಗಳಾಗಿ ಆಗಮಿಸಿದ ಲಯನ್ಸ್ 317 ಮಲ್ಟಿಪಲ್ ಡಿಸ್ಟ್ರಿಕ್ಟ್ ಗ್ಲೋಬಲ್ ಆ್ಯಕ್ಷನ್ ಟೀಮ್ ಲೀಡರ್ ಲಯನ್ ಮೋನಿಕಾ ಸಾವಂತ, 317ಃ ಲಯನ್ಸ್ ಡಿಸ್ಟ್ರಿಕ್ಟ್ ವೈಸ್ ಗವರ್ನರುಗಳಾದ ಲಯನ್ ಅರ್ಲ ಬ್ರಿಟೋ, ಲಯನ್ ಮನೋಜ ಮನೇಕ್ ಇವರುಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಭಾಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಶಿರಸಿ ಲಯನ್ಸ್ ಕ್ಲಬ್ ಇದುವರೆಗೆ ನಡೆದು ಬಂದ ದಾರಿಯ ಸಂಕ್ಷಿಪ್ತ ವರದಿ ಇರುವ ವಿಡಿಯೋವನ್ನು ಸಭೆಯಲ್ಲಿ ಪ್ರದರ್ಶಿಸಲಾಯಿತು.
ಪ್ರಾರಂಭದಲ್ಲಿ ಲಯನ್ಸ್ ಶಾಲೆಯ ಶಿಕ್ಷಕರಾದ ನಾಗರಾಜ ಜೋಗಳೇಕರ ಅವರ ಮಾರ್ಗದರ್ಶನದಲ್ಲಿ ಲಿಯೋ ಸ್ತುತಿ ತುಂಬಾಡಿ, ಸ್ಕೌಟ ಧೀರಜ್, ಗೈಡ್ ಶ್ರೀ ಲಕ್ಷ್ಮಿಇವರುಗಳು ರಾಷ್ಟ್ರಧ್ವಜವನ್ನು ಗೌರವಪೂರ್ವಕವಾಗಿ ವೇದಿಕೆಗೆ ತಂದು ಪ್ರತಿಷ್ಠಾಪಿಸಿದರು. ಸುವರ್ಣ ಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಲಯನ್ ಉದಯ ಸ್ವಾದಿಯವರು ಸ್ವಾಗತಿಸಿದರು. ಲಯನ್ ಪ್ರತಿಭಾ ಹೆಗಡೆಯವರು ಧ್ವಜವಂದನೆ ಮಾಡಿದರು. ಸುವರ್ಣ ಮಹೋತ್ಸವ ಸಮಿತಿಯ ಸಲಹೆಗಾರರು ಹಾಗೂ ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ಲಯನ್ ರವಿ ಹೆಗಡೆ ಹೂವಿನಮನೆ ಇವರು ಲಯನ್ ಎ.ಪಿ. ಸಿಂಗ್ ಅವರನ್ನು ಸಭೆಗೆ ಪರಿಚಯಿಸಿದರು. ರೀಜನ್ ಚೇರ್‌ಪರ್ಸನ್ ಲಯನ್ ಜ್ಯೋತಿ ಭಟ್ ರವರು ಲಯನ್ ಕೆ. ವಂಶೀಧರಬಾಬು ಅವರನ್ನು ಪರಿಚಯಿಸಿದರು. ಲಯನ್ ಅಶೋಕ ಹೆಗಡೆ ಲಯನ್ ವಿ.ವಿ. ಕೃಷ್ಣರೆಡ್ಡಿ ಅವರನ್ನು ಪರಿಚಯಿಸಿದರು. ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರುಗಳ ಸೇವೆ ಸಾಧನೆಗಳನ್ನು ಗೌರವಿಸಿ ಎಲ್ಲ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು. 317ಃ ಲಯನ್ಸ್ ಡಿಸ್ಟಿಕ್ಟ್ನ ಮಾಜಿ ಗವರ್ನರ್‌ಗಳನ್ನು ಸನ್ಮಾನಿಸಲಾಯಿತು. ಲಯನ್ಸ್ ಮಾಜಿ ಗವರ್ನರುಗಳಾದ ಲಯನ್ ಡಾ|| ರವಿ ನಾಡಗೀರ ಹಾಗೂ ಲಯನ್ ನಿತಿನ್ ಮಗನ್‌ಲಾಲ್ ಅವರುಗಳು ಶುಭಾಶಯ ಕೋರಿದರು. ಲಯನ್ ಎ.ಪಿ. ಸಿಂಗ್ ರವರು ಶಿರಸಿ ಲಯನ್ಸ್ ಕ್ಲಬ್‌ನ ಹಾಗೂ ಲಿಯೋ ಕ್ಲಬ್‌ಗಳ ವಿಶೇಷ ಸಾಧನೆಗಳನ್ನು ಗುರುತಿಸಿ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.

300x250 AD

ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ತ್ರಿವಿಕ್ರಮ ಪಟವರ್ಧನ ಅಧ್ಯಕ್ಷೀಯ ಭಾಷಣ ಮಾಡಿದರು. ಕೊನೆಯಲ್ಲಿ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಲಯನ್ ರಮಾ ಪಟವರ್ಧನ ಆಭಾರ ಮನ್ನಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ತ್ರಿವಿಕ್ರಮ ಪಟವರ್ಧನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ರಮಾ ಪಟವರ್ಧನ್, ಕೋಶಾಧ್ಯಕ್ಷೆ ಲಯನ್ ರಾಜಲಕ್ಷ್ಮಿ ಹೆಗಡೆ ಲಿಯೋ ಕ್ಲಬ್ ಶ್ರೀನಿಕೇತನ ಅಧ್ಯಕ್ಷ ಲಿಯೋ ಹರ್ಷಿತ್ ಭಾಗವತ, ಲಿಯೋ ಕ್ಲಬ್ ಶಿರಸಿ ಅಧ್ಯಕ್ಷೆ ಲಿಯೋ ಅನನ್ಯ ಹೆಗಡೆ ಲಯನ್ಸ್ ರೀಜನ ಚೇರಪರ್ಸನ್ ಲಯನ್ ಜ್ಯೋತಿ ಭಟ್, ಲಯನ್ ರವಿ ಹೆಗಡೆ ಹೂವಿನಮನೆ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಅಲ್ಲದೇ ಕರ್ನಾಟಕ ಹಾಗೂ ಗೋವಾದಿಂದ ಬಂದ ಅನೇಕ ಲಯನ್ಸ್ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು. ಲಯನ್ ಎಂ.ಐ. ಹೆಗಡೆ, ಲಯನ್ ವಿ.ಎಂ. ಭಟ್, ಹಾಗೂ ಲಯನ್ ವಿನಯ ಹೆಗಡೆಯವರು ಕಾರ್ಯಕ್ರಮ ನಿರೂಪಿಸಿದರು.

Share This
300x250 AD
300x250 AD
300x250 AD
Back to top