Slide
Slide
Slide
previous arrow
next arrow

ಬೆಂಗಳೂರಿನಲ್ಲಿ ನಾರಾಯಣ್ ಭಾಗ್ವತ್’ರಿಗೆ ‘ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ’ ಪ್ರದಾನ

300x250 AD

ಶಿರಸಿ: ಬೆಂಗಳೂರಿನಲ್ಲಿ‌ ನಡೆದ ರಾಷ್ಟ್ರಮಟ್ಟದ‌ ವಿಜ್ಞಾನ ನಾಟಕೋತ್ಸವದಲ್ಲಿ ನಗರದ ಮಾರಿಕಾಂಬಾ ಪ್ರೌಢಶಾಲೆಯು ದಕ್ಷಿಣ ಭಾರತದ ಪ್ರಾತಿನಿಧ್ಯ ವಹಿಸಿ ಪ್ರದರ್ಶಿಸಿದ ‘ಒಂದು ಲಸಿಕೆಯ ಕಥೆ’ ನಾಟಕವು ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಈ ನಾಟಕವನ್ನು ನಿರ್ದೇಶಿಸಿದ ಮಾರಿಕಾಂಬಾ ಪ್ರೌಢಶಾಲೆಯ ಕನ್ನಡ ಶಿಕ್ಷಕ ನಾರಾಯಣ ಭಾಗ್ವತ ಇವರು ರಾಷ್ಟ್ರ ಮಟ್ಟದ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂ ಸಭಾಂಗಣದಲ್ಲಿ ನಡೆದ ಎರಡು ದಿನಗಳ ನಾಟಕೋತ್ಸವದಲ್ಲಿ ಮೆಚ್ಚುಗೆ ಪಡೆದ ‘ಒಂದು ಲಸಿಕೆ‌ ಕಥೆ ನಾಟಕ’ದ ನಿರ್ದೇಶನಕ್ಕೆ ಈ ಪ್ರಶಸ್ತಿ ಅರಸಿ ಬಂದಿದ್ದು, ಚಿತ್ರನಟ ಅನಿರುದ್ಧ ಪ್ರಶಸ್ತಿ ಪ್ರದಾನ ‌ಮಾಡಿ ಅಭಿನಂದಿಸಿದರು.

300x250 AD
Share This
300x250 AD
300x250 AD
300x250 AD
Back to top