Slide
Slide
Slide
previous arrow
next arrow

ಪಿಕ್ನಿಕ್’ಗೆ ತೆರಳಿದ್ದ ವಿದ್ಯಾರ್ಥಿನಿಯರ ಟ್ರ್ಯಾಕ್ಟರ್ ಪಲ್ಟಿ: ಗಂಭೀರ ಗಾಯ

300x250 AD

ಮುಂಡಗೋಡು:-ತಾಲೂಕಿನ ಕೊಳಗಿ ಬಳಿ ಪಿಕ್ನಿಕ್ ಗೆ ತೆರಳಿದ್ದ ಕಾಲೇಜು ವಿದ್ಯಾರ್ಥಿನಿಯರ ಟ್ರ್ಯಾಕ್ಟರ್ ಪಲ್ಟಿಯಾಗಿ 26 ವಿದ್ಯಾರ್ಥಿನಿಯರಿಗೆ ಗಾಯವಾಗಿದ್ದು 8 ಜನ ವಿದ್ಯಾರ್ಥಿನಿಯರಿಗೆ ಗಂಭೀರವಾಗಿ ಗಾಯವಾದ ಘಟನೆ ನಡೆದಿದೆ.

ಗಾಯಾಳುಗಳನ್ನು ಶಿರಸಿ ಪಂಡಿತ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ನಾಲ್ಕು ವಿದ್ಯಾರ್ಥಿನಿಯರನ್ನು ಹುಬ್ಬಳ್ಳಿಗೆ ಕಳುಹಿಸಲಾಗಿದೆ.

300x250 AD

ಮಳಗಿಯಿಂದ ಸಮೀಪದ ಕೊಳಗಿಗೆ ಎರಡು ಟ್ಯಾಕ್ಟರ್ ನಲ್ಲಿ 90 ಜನ ಮಳಗಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ತೆರಳಿದ್ದು, ಟ್ಯಾಕ್ಟರ್ ಅತೀ ವೇಗದ ಚಾಲನೆಯಿಂದ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ಮುಂಡಗೋಡು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top