ಶಿರಸಿ: ವಿದ್ಯಾರ್ಥಿಯು ಮಾವಿನ ಮರದಂತೆ ಮುಂದಿನ ಜೀವನದ ಬಗ್ಗೆ ಅತಿಯಾಗಿ ಯೋಚಿಸದೆ ಇಂದಿನ ಜೀವನವನ್ನು ಕುರಿತು ಯೋಚಿಸಿ ಕೆಲಸ ಮಾಡಬೇಕು.ಮಾವಿನ ಮರ ಸಿಹಿ, ಹುಳಿ ಎರಡು ರೀತಿಯ ಹಣ್ಣನ್ನು ಬಿಡುತ್ತದೆ ಹಾಗೆ ಜೀವನದಲ್ಲಿ ಕಷ್ಟವೂ ಇರುತ್ತದೆ, ಸಂತೋಷವೂ ಇರುತ್ತದೆ. ಎಲ್ಲವನ್ನೂ ಗೆದ್ದು ಮುಂದೆ ಸಾಗಬೇಕು. ಆಯಾ ಸಂದರ್ಭಕ್ಕೆ ಅನುಗುಣವಾಗಿ ಕ್ರಿಯೇಟಿವ್ ಆಗಿ ಕೆಲಸವನ್ನು ಮಾಡಬೇಕು ಎಂದು ನಟ ನಿರ್ದೇಶಕ ನಟೇಶ್ ಹೆಗಡೆ ಹೇಳಿದರು.
ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜನೆಯಲ್ಲಿ ರಸಾಯನಶಾಸ್ತ್ರ ವಿಭಾಗವು ಆಯೋಜಿಸಿದ್ದ ಸೃಜನ ಶೀಲ ಕ್ಷೇತ್ರದಲ್ಲಿನ ಅವಕಾಶಗಳು ಎಂಬ ವಿಷಯದ ಕುರಿತ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಒಬ್ಬ ಕಥೆ ಬರಹರಾಗಲು ಮೊದಲು ಕ್ರಿಯೇಟಿವ್ ಆಗಿ ವಿಚಾರ ಮಾಡುವ ಬುದ್ಧಿಶಕ್ತಿ ಬೇಕು. ಅದನ್ನು ಅಭಿವ್ಯಕ್ತ ಪಡಿಸುವ ಸಾಮರ್ಥ್ಯ ಬೇಕು.ಜನರಿಗೆ ಮನಮುಟ್ಟುವಂತಿರಬೇಕು ಎಂದು ಹೇಳಿದರು. ತಾನು ಸಹ ಮೊದಲು ಸಣ್ಣ ಕ್ಯಾಮೆರಾ ಮೂಲಕ ವಿಡಿಯೋ ಮಾಡಿ ಮೊಬೈಲ್ನಿಂದ ವಾಯ್ಸ್ ರೆಕಾರ್ಡ್ ಮಾಡಿ ಯೂಟ್ಯೂಬ್ ಮೂಲ ಎಡಿಟ್ ಮಾಡುವುದನ್ನು ಕಲಿತು ನನ್ನ ಮೊದಲ ಸಿನೆಮಾ ಮಾಡಿದ್ದು ಎಂದು ವಿಷಯ ಹಂಚಿಕೊಂಡರು. ಜಗತ್ತಿನಲ್ಲಿ ಯಾವುದೇ ಕೆಲಸ ಮಾಡುವುದಾದರು ನಿಮ್ಮಲ್ಲಿನ ಕ್ರಿಯೇಟಿವಿಟಿ ಇದ್ದರೆ ನಿಮ್ಮ ಕೆಲಸದಲ್ಲಿ ಶ್ರಮ ಇದ್ದರೆ ಸಾಧನೆ ಯಾರು ಬೇಕಾದರೂ ಮಾಡಲು ಸಾಧ್ಯ ಎಂದರು.ಹಾಗೂ ನಿಮ್ಮೊಳಗಿನ ಕ್ರಿಯೇಟಿವಿಟಿಯನ್ನು ಎಲ್ಲರಿಗೂ ತೋರಿಸಿ. ಎಲ್ಲ ಕೆಲಸವನ್ನು ಕ್ರಿಯೇಟಿವ್ ಆಗಿ ಮಾಡಿ ಎಂದರು. ಹಾಗೂ ತಮ್ಮ ಸಿನೆಮಾ ಬಗೆಗೆ ಅನೇಕ ವಿಚಾರ ಹಂಚಿಕೊಂಡರು.
ಕನ್ನಡ ವಿಭಾಗ ಮುಖ್ಯಸ್ಥ ಡಾ ಆರ್. ಆರ್ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರೊ.ಕೆ.ಎನ್. ರೆಡ್ಡಿ ಉಪಸ್ಥಿತರಿದ್ದರು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಗಣೇಶ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.