Slide
Slide
Slide
previous arrow
next arrow

ಕಾರ್ಮಿಕ ಭವನದ ನಿರ್ವಹಣೆ ಖಾಸಗಿಯವರಿಗೆ ನೀಡದಿರಲು ಆಗ್ರಹ

300x250 AD

ದಾಂಡೇಲಿ: ಕಾರ್ಮಿಕರ ಅನುಕೂಲಕ್ಕಾಗಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಾರ್ಮಿಕ ಭವನದ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡುವ ನಿಟ್ಟಿನಲ್ಲಿ ಸರಕಾರ ಹುನ್ನಾರ ನಡೆಸಿದ್ದು, ಇದರಿಂದ ಕಾರ್ಮಿಕರಿಗೆ ಅನ್ಯಾಯವಾಗಲಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಭವನದ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡುವುದನ್ನು ಕೈಬಿಟ್ಟು ಕಾರ್ಮಿಕ ಇಲಾಖೆಯೆ ನಿರ್ವಹಣೆ ಮಾಡಬೇಕೆಂದು ಆಗ್ರಹಿಸಿ ನಗರದ ಸಿಐಟಿಯು ವತಿಯಿಂದ ತಹಶೀಲ್ದಾರ್ ಆರ್.ವಿ.ಕಟ್ಟಿಯವರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಕಾರ್ಮಿಕ ಸಚಿವರಿಗೆ, ಶಾಸಕರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ರವಾನಿಸಲಾಯಿತು.
ಮನವಿಯಲ್ಲಿ, ಕಾರ್ಮಿಕ ಭವನವನ್ನು ಕಾರ್ಮಿಕ ಇಲಾಖೆಯೆ ನಿರ್ವಹಣೆ ಮಾಡಬೇಕು ಮತ್ತು ಅದಕ್ಕಾಗಿ ಪ್ರಜಾಸತ್ತಾತ್ಮಕ ಕ್ರಮವನ್ನು ಅನುಸರಿಸಲಿ. ಪ್ರಜಾಸತ್ತಾತ್ಮಕ ಸಮಿತಿಯನ್ನು ರಚಿಸಿಕೊಂಡು, ಆ ಸಮಿತಿಯ ನಿರ್ಣಯದಂತೆ ಕಾರ್ಮಿಕರಿಗೆ ಮೊದಲ ಆಧ್ಯತೆಯನ್ನು ನೀಡಿ, ಕಾರ್ಮಿಕ ಭವನವನ್ನು ಬಳಕೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಈಗಾಗಲೆ ಕರೆದಿರುವ ಟೆಂಡರ್ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಈ ಜಿಲ್ಲೆಯನ್ನು ಒಳಗೊಂಡು ರಾಜ್ಯದಲ್ಲಿರುವ ಯಾವುದೇ ಕಾರ್ಮಿಕ ಭವನದ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಬಾರದೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಿಐಟಿಯು ತಾಲೂಕು ಸಮಿತಿಯ ಸಂಚಾಲಕ ಸಲೀಂ ಸೈಯದ್, ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್, ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಡಿ.ಸ್ಯಾಮಸನ್, ಮುಖಂಡರುಗಳಾದ ಭವರ್ ಸಿಂಗ್, ಜಗದೀಶ್ ನಾಯ್ಕ, ಇಮ್ರಾನ್ ಖಾನ್, ರತ್ನದೀಪಾ ಎನ್.ಎಂ., ಅಂಗನವಾಡಿ ನೌಕರರ ಸಂಘಟನೆಯ ಸೇವಂತಿ ದಬಾಲಿ, ಪದ್ಮಾ ಕಾಳೆ, ಮಂಜುಳಾ ನಾಯರ್ ಮೊದಲಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top