Slide
Slide
Slide
previous arrow
next arrow

ಅಂತಿಮ ಮತದಾರರ ಪಟ್ಟಿ ಪ್ರಕಟ

300x250 AD

ಕಾರವಾರ: ಜಿಲ್ಲೆಯ ಮತದಾರರಿಗೆ ಸಂಬಂಧಿಸಿದಂತೆ ಜನವರಿ 01ನ್ನು ಅರ್ಹಾತಾ ದಿನವನ್ನಾಗಿಟ್ಟುಕೊಂಡು ಅಂತಿಮ ಮತದಾರರ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗಿದೆ.
ಜಿಲ್ಲೆಯ ಎಲ್ಲಾ ಮತದಾರ ನೋಂದಣಾಧಿಕಾರಿಗಳ ಕಛೇರಿ (ಉಪವಿಭಾಗಾಧಿಕಾರಿಗಳ ಕಛೇರಿ), ಸಹಾಯಕ ಮತದಾರ ನೋಂದಣಾಧಿಕಾರಿಗಳ ಕಚೇರಿ (ತಹಶೀಲ್ದಾರ ಕಛೇರಿ) ಹಾಗೂ ಆಯಾ ಮತಗಟ್ಟೆಗಳಲ್ಲಿ ಈ ಪಟ್ಟಿಯನ್ನ ಪ್ರಕಟಿಸಲಾಗಿದೆ. ಜಿಲ್ಲೆಯ ಮತದಾರರು ತಮ್ಮ ಹೆಸರು ಮತ್ತು ವಿವರಗಳು ಸರಿ ಇವೆಯೇ ಎಂಬ ಬಗ್ಗೆ ಸಂಬAಧಪಟ್ಟ ಮತಗಟ್ಟೆಯ ಬೂತ್ ಲೆವಲ್ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವುದು ಅಥವಾ https://ceo.karnataka.gov.in ನಲ್ಲಿ ಸಹ ಪಡೆದುಕೊಳ್ಳಬಹುದಾಗಿದೆ.
2023ರ ವಿಧಾನಸಭೆ ಚುನಾವಣೆ ಸಂಬoಧ ಜಿಲ್ಲೆಗೆ ಒಟ್ಟೂ 2693-ಕಂಟ್ರೋಲ್ ಯುನಿಟ್, 1891-ಬ್ಯಾಲೆಟ್ ಯುನಿಟ್ ಹಾಗೂ 2043-ವಿವಿಪ್ಯಾಟ್‌ಗಳು ಹಂಚಿಕೆಯಾಗಿದ್ದು, ಇಸಿಐಎಲ್ ಹೈದರಾಬಾದ್ ಸಂಸ್ಥೆಯ ತಂತ್ರಜ್ಞರಿoದ ಜನವರಿ 2ನೇ ವಾರದಲ್ಲಿ ಪ್ರಥಮ ಹಂತದ ಪರಿಶೀಲನೆಯನ್ನು ಮಾಡಿ ಚುನಾವಣೆಗೆ ಮತಯಂತ್ರಗಳ ತಯಾರಿಯನ್ನು ಮಾಡಿಕೊಳ್ಳಲಾಗುವುದು ಹಾಗೂ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆಯ ಸಿಬ್ಬಂದಿಗಳ ಮಾಹಿತಿಯನ್ನು ಪಡೆಯಲು ಈಗಾಗಲೇ ಕ್ರಮ ವಹಿಸುವಂತೆ ಮಟ್ಟದ ಅಧಿಕಾರಿ, ಕಛೇರಿ ಮುಖ್ಯಸ್ಥರಿಗೆ ನಿರ್ದೇಶನವನ್ನು ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

14,599 ಹೆಚ್ಚುವರಿ ಮತದಾರರು!!
2022ರ ನ.09ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 11,61,687 ಮತದಾರರಿದ್ದು, ಜನವರಿ 05ರಂದು ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 11,76,286 ಮತದಾರರಿದ್ದಾರೆ. ಒಟ್ಟೂ 14,599 ನಿವ್ವಳ ಮತದಾರರ ಸಂಖ್ಯೆ ಹೆಚ್ಚಾಗಿದೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿಗೆ ಸಂಬAಧಿಸಿದAತೆ, ಅಂತಿಮ ಮತದಾರರ ಪಟ್ಟಿಯಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದಿಂದ 89,503 ಪುರುಷ ಹಾಗೂ 88,008 ಮಹಿಳಾ ಒಟ್ಟು 1,77,511 ಮತದಾರರಿದ್ದಾರೆ. ಕಾರವಾರ ವಿಧಾನಸಭಾ ಕ್ಷೇತ್ರದಿಂದ 1,06,746 ಪುರುಷÀ ಹಾಗೂ 1,09,392 ಮಹಿಳಾ ಒಟ್ಟು 2,16,138 ಮತದಾರರಿದ್ದಾರೆ. ಕುಮಟಾ ವಿಧಾನಸಭಾ ಕ್ಷೇತ್ರದಿಂದ 92,899 ಪುರುಷ ಹಾಗೂ 92.901 ಮಹಿಳಾ ಒಟ್ಟು 1,85,800 ಮತದಾರರಿದ್ದಾರೆ.ಭಟ್ಕಳ್ ವಿಧಾನಸಭಾ ಕ್ಷೇತ್ರದಿಂದ 1,11,740 ಪುರುಷ ಹಾಗೂ 1,08,136 ಮಹಿಳಾ ಒಟ್ಟು 2,19876 ಮತದಾರರಿದ್ದಾರೆ. ಶಿರಿಸಿ ವಿಧಾನಸಭಾ ಕ್ಷೇತ್ರದಿಂದ 99,276 ಪುರುಷ ಹಾಗೂ 98,211 ಮಹಿಳಾ ಒಟ್ಟು 1,97,487 ಮತದಾರರಿದ್ದಾರೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ 90,937 ಪುರುಷ ಹಾಗೂ 88,537 ಮಹಿಳಾ ಒಟ್ಟು 1,79,474 ಮತದಾರರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top