Slide
Slide
Slide
previous arrow
next arrow

ಲಯನ್ಸ್ ಶಾಲೆಯಲ್ಲಿ ಶಿಕ್ಷಕರಿಗಾಗಿ ಸಂವಾದ ಕಾರ್ಯಕ್ರಮ: ಡಾ. ಹರಿಪ್ರಸಾದ್ ಜಿ.ವಿ. ಭಾಗಿ

300x250 AD

ಶಿರಸಿ: ಹೊಸ ಶಿಕ್ಷಣ ನೀತಿಯ ಬಗ್ಗೆ ಶಿಕ್ಷಣ ಮಂತ್ರಾಲಯ ನವದೆಹಲಿಯ ರಾಷ್ಟ್ರೀಯ ಸಮಾಲೋಚಕ ಡಾ. ಹರಿಪ್ರಸಾದ್ ಜಿ.ವಿ. ಇವರಿಂದ ಜ. 5 ರಂದು ನಗರದ ಶಿರಸಿ ಲಯನ್ಸ್ ಶಾಲೆಯಲ್ಲಿ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಡಾ. ಹರಿಪ್ರಸಾದ್ ಜಿ.ವಿ.,ಹೊಸ ಶಿಕ್ಷಣ ನೀತಿಯ ಬಗ್ಗೆ ಶಿಕ್ಷಕರ ಮನದಲ್ಲಿದ್ದ ಹಲವಾರು ಗೊಂದಲಗಳು, ಕುತೂಹಲಗಳು, ನಿರೀಕ್ಷೆಗಳಿಗೆಲ್ಲ ಉತ್ತಮ ರೀತಿಯಲ್ಲಿ ಸದುಪಯೋಗಿ ಮಾಹಿತಿ ಒದಗಿಸಿದರು. ಅನ್ವಯಿಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಬೋಧಿಸುವಲ್ಲಿ ಹೊಸ ಶಿಕ್ಷಣ ನೀತಿಯು ಹೇಗೆ ಸಹಾಯಕವಾಗಲಿದೆ ಮತ್ತು ಶಿಶು ಕೇಂದ್ರಿತ ಶಿಕ್ಷಣ ವ್ಯವಸ್ಥೆಯು ವೃತ್ತಿಪರ ಕೌಶಲ್ಯಗಳ ಕುರಿತಾದ ಹಲವು ಆಯಾಮಗಳೆಡೆಗೆ ವಿದ್ಯಾರ್ಥಿಗಳಿಗೆ ಅವರ ಆಸಕ್ತಿ ಗಳಿಗನುಗುಣವಾಗಿ ವ್ಯವಸ್ಥೆಯನ್ನು ರೂಪಿಸುವಲ್ಲಿ ಹೊಸ ಶಿಕ್ಷಣ ನೀತಿಯು ಹೇಗೆ ಸಹಕಾರಿಯಾಗಲಿದೆ ಎನ್ನುವ ಹಲವಾರು ಮಾಹಿತಿಗಳನ್ನು ಕೆಲವೊಂದು ಉದಾಹರಣೆಗಳ ಮೂಲಕ ಅತ್ಯಂತ ಸರಳವಾಗಿ ವಿವರಿಸಿದರು.

ಡಾ.ಹರಿಪ್ರಸಾದ್ ಜೊತೆಗಿನ ಸಂವಾದವು ಶಿಕ್ಷಕರ ಬಹಳಷ್ಟು ಗೊಂದಲಗಳಿಗೆ ಉತ್ತರ ನೀಡಿತು. ಡಾ. ಹರಿಪ್ರಸಾದ್ ರವರ ನಿರರ್ಗಳ ಸಂವಹನ ವೈಖರಿಯು, ಅವರಿಂದ ಹೆಚ್ಚು ಹೆಚ್ಚು ಉಪಯುಕ್ತ ಮಾಹಿತಿಗಳನ್ನು ಕಲೆ ಹಾಕಲು ಶಿಕ್ಷಕರನ್ನು ಉತ್ಸುಕರನ್ನಾಗಿಸಿತು. ಲಯನ್ಸ ಶಾಲಾ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಅತಿಥಿಗಳನ್ನು ಪರಿಚಯಿಸಿದರು. ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಲಯನ್ ಪ್ರೊ.ರವಿ ನಾಯಕ್ ಗೌರವಾರ್ಪಣೆ ನಡೆಸಿಕೊಟ್ಟರು.ಒಟ್ಟಾರೆ ಸಂವಾದ ಕಾರ್ಯಕ್ರಮವು ಶಿಕ್ಷಕ ವೃಂದಕ್ಕೆ ತೃಪ್ತಿ ಮತ್ತು ಸಂತಸವನ್ನು ನೀಡಿತು.

300x250 AD
Share This
300x250 AD
300x250 AD
300x250 AD
Back to top