ಸಿದ್ದಾಪುರ: ಗುರುರಾವ್ ದೇಶಪಾಂಡೆ ಸಂಗೀತಸಭಾ ಬೆಂಗಳೂರು ಮತ್ತು ಶ್ರೀ ಮಹಾಗಣಪತಿ ಪ್ರೌಢಶಾಲಾ ಹಳೆ ವಿದ್ಯಾರ್ಥಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಜ.7, ಶನಿವಾರ ಸಾಯಂಕಾಲ 4:00ಗೆ ಶ್ರೀ ಮಹಾಗಣಪತಿ ಪ್ರೌಢಶಾಲೆಯ ಸಭಾಭವನದಲ್ಲಿ ‘ಗ್ರಾಮ ಸಂಗೀತ ಯಾತ್ರಾ’ ಸಂಗೀತ ಕಾರ್ಯಕ್ರಮ ಜರುಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾಗಣಪತಿ ಶಿಕ್ಷಣ ಸಮಿತಿಯ ಅಧ್ಯಕ್ಷ ನಾಗಪತಿ ಭಟ್ ಮಿಳಗಾರ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಶೃಂಗೇರಿ ಶಂಕರಮಠ ಸಿದ್ದಾಪುರದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ . ಹಾಗೂ ಖ್ಯಾತ ಅಂತರಾಷ್ಟ್ರೀಯ ಹಿಂದುಸ್ತಾನಿ ಸಂಗೀತ ಕಲಾವಿದರಾದ ವಿನಾಯಕ ತೊರವಿ ಹಾಗೂ ಮಾಬ್ಲೇಶ್ವರ ಪ. ಹೆಗಡೆ ಹೆಗ್ನೂರು ಆಗಮಿಸಲಿದ್ದು,ಅದೇ ದಿನ ನಿವೃತ್ತ ಸಂಸ್ಕೃತ ಅಧ್ಯಾಪಕ ಹಾಗೂ ರಂಗ ಕಲಾವಿದರಾದ ಸತ್ಯನಾರಾಯಣ ಎಸ್. ಭಟ್ ಇವರಿಗೆ ಗೌರವ ಸನ್ಮಾನವು ನಡೆಯಲಿದೆ .ನಂತರದ ಸಂಗೀತ ಕಾರ್ಯಕ್ರಮದಲ್ಲಿ ಶ್ರೀಮತಿ ಅರ್ಚನಾ ಶೆಣೈ ಬೆಂಗಳೂರು ಹಾಗೂ ಚಿನ್ಮಯ್ ಜೋಶಿ ಕಂಪ್ಲಿ ಇವರಿಂದ ಗಾಯನ ಹಾಗು ಚಿನ್ಮಯ್ ಜೋಶಿ ಮಂಗಳೂರು ಇವರಿಂದ ಸಿತಾರ್ ವಾದನ ನಡೆಯಲಿದೆ. ತಬಲಾದಲ್ಲಿ ವಿಘ್ನೇಶ್ ಕಾಮತ್ ಕೋಟೇಶ್ವರ ಹಾಗೂ ಗುರುರಾಜ್ ಆಡುಕಳ ಹಾರ್ಮೋನಿಯಂನಲ್ಲಿ ಪಂ.ಪ್ರಕಾಶ್ ಹೆಗಡೆ ಯಡಳ್ಳಿ, ಭರತ ಹೆಬ್ಬಲಸು ಸಾಥ್ ನೀಡಲಿದ್ದಾರೆ ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.