ಶಿರಸಿ:-ಕಸ್ತೂರಿ ಸಿರಿಗನ್ನಡ ವೇದಿಕೆ ಬೆಳಗಾವಿ ವತಿಯಿಂದ ಕೊಡುವ ಪ್ರಸ್ತುತ ವರ್ಷದ ರಾಷ್ಟ್ರ ಮಟ್ಟದ “ಕವಿ ವಿಭೂಷಣ” ಪ್ರಶಸ್ತಿಗೆ ಡಾ. ನವೀನ್ ಕುಮಾರ್ ಎ.ಜಿ ಉತ್ತರ ಕನ್ನಡ ಜಿಲ್ಲೆಯಿಂದ ಸ್ಪರ್ಧಿಸಿ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಸೇವೆಗೆ ಸಂದ ಪ್ರಶಸ್ತಿ ಇದಾಗಿದೆ. ಇವರು “ಇಂಗಿತ” ಕವನ ಸಂಕಲನ ಮತ್ತು “ಪರಮ ನವೀನ” ಎಂಬ ಸಮಗ್ರ ಸಾಹಿತ್ಯದ ಸಂಪಾದಕರಾಗಿ ಪುಸ್ತಕಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿರುತ್ತಾರೆ. ಇವರ ಸಾಹಿತ್ಯ ಸೇವೆಗೆ ಈ ಮೊದಲು ಇವರಿಗೆ ಮಂಡ್ಯದ ಸಿರಿಗನ್ನಡ ವೇದಿಕೆಯ ರಾಜ್ಯ ಮಟ್ಟದ “ಕಸ್ತೂರಿ ಕೌಸ್ತುಭ” ಮತ್ತು “ಕಸ್ತೂರಿ ಧ್ರುವತಾರೆ” ಪ್ರಶಸ್ತಿ ಅಖಿಲ ಕರ್ನಾಟಕ ತೃತೀಯ ಕವಿಕಾವ್ಯ ಸಮ್ಮೇಳನ, ಕೇಳದ್ರಕನ್ನಡ ಸಾಹಿತ್ಯ ವೇದಿಕೆ, ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯ ಮಟ್ಟದ ಕಾವ್ಯ ವಾಚನದಿಂದ ಹತ್ತಾರು ಪ್ರಶಸ್ತಿಗಳು ಲಭಿಸಿವೆ.ಶಿಕ್ಷಣದ ಸೇವೆಯನ್ನು ಪರಿಗಣಿಸಿ ಇವರಿಗೆ “ರಾಜ್ಯಮಟ್ಟದ ಶಿಕ್ಷಣ ಸಿರಿ” ಪ್ರಶಸ್ತಿ ರಾಜ್ಯ ಮಟ್ಟದ ಪಠ್ಯಪುಸ್ತಕ ತರಬೇತಿಯಿಂದ “ಸಕ್ರಿಯಾ ಸಂಪನ್ಮೂಲ ವ್ಯಕ್ತಿ” ಪ್ರಶಸ್ತಿ ದೊರಕಿದೆ. ಸಾಮಾಜಿಕ ಸೇವೆಗಾಗಿ 130ನೇ ಅಂಬೇಡ್ಕರ ಜಯಂತಿಯಲ್ಲಿ ಸಮ್ಮಾನ ಮಾಡಿ ಗೌರವಿಸಲಾಗಿದೆ. ಜೊತೆಗೆ ಭಾರತ್ ಸ್ಕೌಟ್ಸ್ ಗೈಡ್ ನಲ್ಲಿ ಕೂಡ ಸಕ್ರಿಯರಾಗಿರು ಇವರು ಹತ್ತಾರು ಮಕ್ಕಳಿಗೆ ರಾಜ್ಯಪುರಸ್ಕಾರ ತಂದುಕೊಡುವಲ್ಲಿ ಶ್ರಮಿಸಿದ್ದಾರೆ.
ಪ್ರಸ್ತುತ ಇವರು ಯಲ್ಲಾಪುರದ ವಿಶ್ವದರ್ಶನ ಪ್ರೌಢ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.