Slide
Slide
Slide
previous arrow
next arrow

ಆಧಾರ್‌ ಕಾರ್ಡ್‌ನಲ್ಲಿ ವಿಳಾಸ ಬದಲಾವಣೆಯನ್ನು ಸರಳಗೊಳಿಸಿದ UIDAI

300x250 AD

ನವದೆಹಲಿ: ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ಯುಐಡಿಎಐ  ಆಧಾರ್‌ನಲ್ಲಿ ವಿಳಾಸ ಬದಲಾಯಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಕುಟುಂಬದ ಮುಖ್ಯಸ್ಥರ ಒಪ್ಪಿಗೆಯೊಂದಿಗೆ ಜನರು ತಮ್ಮ ವಿಳಾಸವನ್ನು ಆನ್‌ಲೈನ್‌ ಮೂಲಕ ತಮ್ಮ ಆಧಾರ್‌ನಲ್ಲಿ ನವೀಕರಿಸಲು ಸಹಾಯ ಮಾಡುವ ಜನಸ್ನೇಹಿ ಸೌಲಭ್ಯವನ್ನು ಜಾರಿಗೆ ತಂದಿದೆ.

ಈ ಸೌಲಭ್ಯದಿಂದಾಗಿ ಇನ್ನು ಮುಂದೆ ಯಾವುದೇ ವಿಳಾಸದ ಪುರಾವೆ ಇಲ್ಲ ಎಂಬ ಕಾರಣಕ್ಕೆ ಆನ್‌ಲೈನ್‌ನಲ್ಲಿ ಆಧಾರ್‌ ವಿಳಾಸ ಬದಲಾವಣೆ ಮಾಡಲು ಒದ್ದಾಡಬೇಕಾಗಿಲ್ಲ. ಕುಟುಂಬದ ಯಾವುದಾದರೂ ಒಬ್ಬ ಸದಸ್ಯರ ಹೆಸರಿನಲ್ಲಿ ವಿಳಾಸ ಪುರಾವೆ ಇದ್ದರೆ, ಅವರನ್ನೇ ‘ಕುಟುಂಬದ ಮುಖ್ಯಸ್ಥ’ ಎಂದು ತೋರಿಸಿ ವಿಳಾಸ ಬದಲಿಸಬಹುದಾದ ಆಯ್ಕೆಯನ್ನು ಯುಐಡಿಎಐ ನೀಡಿದೆ.

ಪಡಿತರ ಚೀಟಿ, ಅಂಕಪಟ್ಟಿ, ವಿವಾಹ ಪ್ರಮಾಣಪತ್ರ, ಪಾಸ್‌ಪೋರ್ಟ್‌ನಂತಹ ದಾಖಲೆಗಳನ್ನು ನೀಡುವ ಮೂಲಕ ಕುಟುಂಬದ ಮುಖ್ಯಸ್ಥರ ಜತೆಗಿನ ತನ್ನ ಸಂಬಂಧವನ್ನು ನಿರೂಪಿಸಿ ಅರ್ಜಿದಾರರು ಆನ್‌ಲೈನ್‌ನಲ್ಲಿ ವಿಳಾಸ ಬದಲಿಸಬಹುದು. ಒಂದು ವೇಳೆ, ಸಂಬಂಧ ಸಾಬೀತುಪಡಿಸುವ ದಾಖಲೆ ಲಭ್ಯವಿಲ್ಲದಿದ್ದರೆ ನಿಗದಿತ ನಮೂನೆಯಲ್ಲಿ ಕುಟುಂಬ ಮುಖ್ಯಸ್ಥನ ಸ್ವಯಂ-ಘೋಷಣೆಯನ್ನು ಸಲ್ಲಿಸಲು UIDAI ಜನರಿಗೆ ಅವಕಾಶ ಒದಗಿಸುತ್ತದೆ.

18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ನಿವಾಸಿಯನ್ನು ಇಲ್ಲಿ ಕುಟುಂಬ ಮುಖ್ಯಸ್ಥ ಎಂದು ತೋರಿಸಬಹುದು ಮತ್ತು ಈ ಪ್ರಕ್ರಿಯೆಯ ಮೂಲಕ ಅವರ ಸಂಬಂಧಿಕರೊಂದಿಗೆ ಅವರ ವಿಳಾಸವನ್ನು ಹಂಚಿಕೊಳ್ಳಬಹುದು.

300x250 AD

ಕೃಪೆ: http://news13.in

Share This
300x250 AD
300x250 AD
300x250 AD
Back to top