Slide
Slide
Slide
previous arrow
next arrow

ಪಿಎಸೈ ಜಿ.ವೆಂಕಟೇಶ್ ನಿಧನ

300x250 AD

ದಾಂಡೇಲಿ: ನಗರದ ಟೌನ್‌ಶಿಪ್ ನಿವಾಸಿ ಹಾಗೂ ಕಾರವಾರದ ಸಿಸ್ತಂತು ಘಟಕದ ಪಿಎಸೈ ಜಿ.ವೆಂಕಟೇಶ್ ಅವರು ಮಂಗಳೂರಿನಲ್ಲಿ ನಿಧನರಾದರು. ಮೃತರಿಗೆ 49 ವರ್ಷ ವಯಸ್ಸಾಗಿತ್ತು.
ಕಳೆದ ಹಲವಾರು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಅನುಮಮ ಸೇವೆ ಸಲ್ಲಿಸಿದ ಹೆಗ್ಗಳಿಕೆಯನ್ನು ಹೊಂದಿದ್ದ ಜಿ.ವೆಂಕಟೇಶ್ ಅವರು ಇತ್ತೀಚಿನ ಕೆಲಸ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆ ಪಡೆಯಲೆಂದು ಮಂಗಳೂರಿಗೆ ಹೋಗಿದ್ದ ವೇಳೆ ಮೃತಪಟ್ಟಿದ್ದಾರೆ. ಮೃತರು ಮಡದಿ, ಒಂದು ಗಂಡು, ಒಂದು ಹೆಣ್ಣು, ಮೂವರು ಸಹೋದರಿಯರನ್ನು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ.
ದಾಂಡೇಲಿಯಲ್ಲೆ ತನ್ನ ಶಿಕ್ಷಣವನ್ನು ಪಡೆದಿದ್ದ ಜಿ.ವೆಂಕಟೇಶ್ ಅವರು ವಿದ್ಯಾರ್ಥಿ ಜೀವನದಲ್ಲೆ ಚುರುಕುತನ ಮತ್ತು ಬುದ್ದಿವಂತಿಕೆಯ ಮೂಲಕ ಗಮನ ಸೆಳೆದಿದ್ದರು. ಮೃತರ ಸಹೋದರಿ ರೇಣುಕಾ ಬಂದ ಅವರು ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾಗಿದ್ದಾರೆ. ಮೃತರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.
ಪೊಲೀಸ್ ಗೌರವ ವಂದನೆ ಸಲ್ಲಿಕೆ: ಕಾರವಾರದ ಸಿಸ್ತಂತು ಘಟಕದ ಪಿಎಸೈಯಾಗಿ ಸೇವೆಯಲ್ಲಿದ್ದು ಅಗಲಿದ ಜಿ.ವೆಂಕಟೇಶ್ ಅವರಿಗೆ ಅವರ ಟೌನಶಿಪ್ ನಲ್ಲಿರುವ ಸ್ವಗೃಹದ ಮುಂಭಾಗದಲ್ಲಿ ಮಂಗಳವಾರ ಬೆಳಿಗ್ಗೆ ಪೊಲೀಸ್ ಗೌರವ ವಂದನೆಯನ್ನು ಸಲ್ಲಿಸಿ, ಮೃತರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಶಿವಾನಂದ ಕಟಗಿ, ಕಾರವಾರದ ನಿಸ್ತಂತು ಘಟಕದ ಸಿಪಿಐ ಸಂತೋಷ್, ಪಿಎಸೈಗಳಾದ ಐ.ಆರ್.ಗಡ್ಡೇಕರ್, ಯಲ್ಲಪ್ಪ ಎಸ್., ಕೃಷ್ಣೆ ಗೌಡ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದು, ಮೃತರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.

300x250 AD
Share This
300x250 AD
300x250 AD
300x250 AD
Back to top