• first
  Slide
  Slide
  previous arrow
  next arrow
 • ಬೂತ್ ವಿಜಯ್ ಅಭಿಯಾನ; ಕಾರ್ಯಕರ್ತರ ಶ್ರಮಕ್ಕೆ ಶ್ಲಾಘನೆ

  300x250 AD

  ಕಾರವಾರ: ರಾಜ್ಯಾದ್ಯಂತ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮ ಅಂಗವಾಗಿ ಬಿಜೆಪಿ ನಗರ ಮಂಡಲ ವತಿಯಿಂದ ಬೂತ್ ಸಂಖ್ಯೆ 110ರ ಬ್ರಾಹ್ಮಣಗಲ್ಲಿಯಲ್ಲಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮ ನಗರ ಮಂಡಲ ಅಧ್ಯಕ್ಷ ನಾಗೇಶ್ ಕುರುಡೇಕರ್ ಅವರ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರಿಂದ ಚಾಲನೆ ನೀಡಲಾಯಿತು.
  ಕಾರ್ಯಕ್ರಮದಲ್ಲಿ ಗಣಪತಿ ಉಳ್ವೇಕರ್ ಹಾಗೂ ಮಂಡಲ ಪ್ರಭಾರಿ ಆರತಿ ಗೌಡ ಅವರು ಬೂತ್ ಅಧ್ಯಕ್ಷರು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಪಕ್ಷದ ಕಾರ್ಯಕರ್ತರು ಕೇವಲ ಚುನಾವಣೆಯ ವೇಳೆಯಲ್ಲಿ ಮಾತ್ರ ಬಳಕೆಯಾಗುತ್ತಾರೆ ಎಂಬ ಭಾವನೆ ಯಾರಲ್ಲೂ ಬರಬಾರದು. ಹೀಗಾಗಿ ಪಕ್ಷ ನಿರಂತರವಾಗಿ ಕಾರ್ಯಕರ್ತರು, ಜನಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳ ನಡುವೆ ಸಂವಹನದ ಪ್ರಕ್ರಿಯೆಯನ್ನು ನಡೆಸುತ್ತಲೇ ಇರಬೇಕು.
  ಬಿಜೆಪಿಯ ಕಾರ್ಯಕರ್ತರು ಪಕ್ಷದ ಬೇರುಗಳಿದ್ದ ಹಾಗೆ ಕಾರ್ಯಕರ್ತರು ಗಟ್ಟಿಯಾದರೆ ಪಕ್ಷ ಅಧಿಕಾರಕ್ಕೆ ಬರಬಹುದು. ಪಕ್ಷದ ನಾಯಕರನ್ನು ತಯಾರಿಸುವ ನಮ್ಮ ಮೂಲ ಮಂತ್ರವೇ ಕಾರ್ಯಕರ್ತರು. ಎಲ್ಲಾ ಪಕ್ಷದ ನಾಯಕರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರ ಶ್ರಮದ ಫಲವಾಗಿಯೇ ಇಂದು ಈ ಹುದ್ದೆಗಳಿಗೆ ಬಂದು ತಲುಪಿದ್ದೇವೆ. ಹೀಗಾಗಿ ಕಾರ್ಯಕರ್ತರನ್ನು ಒನ್ ಟು ಒನ್ ಭೇಟಿಯಾಗಲು ಇದೊಂದು ಅತ್ಯಂತ ಉತ್ತಮ ಅವಕಾಶ ಎಂಬುದು ನನ್ನ ಭಾವನೆಯಾಗಿದೆ ಎಂದರು.
  ಇನ್ನು ಕೇವಲ 3 ತಿಂಗಳಲ್ಲಿ ಪಕ್ಷ ವಿಧಾನಸಭೆಯ ಚುನಾವಣೆಯನ್ನು ರಾಜ್ಯದಲ್ಲಿ ಎದುರಿಸಲಿದೆ. ಮತ್ತೆ ಒಂದು ವರ್ಷದ ನಂತರ ಲೋಕಸಭೆಯ ಚುನಾವಣೆ ಬರಲಿದ್ದು, ಪಕ್ಷ ಈ ಎರಡು ಚುನಾವಣೆಗಳಿಗಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಮೇಲಿದ್ದು, ಅದಕ್ಕೆ ನಾವು ಜನಪ್ರತಿನಿಧಿಗಳು ಸಂಪೂರ್ಣವಾದ ಬೆಂಬಲವನ್ನು ನೀಡುತ್ತಿದ್ದೇವೆ. ಇವತ್ತಿನ ಕಾರ್ಯಕ್ರಮ ಬೂತ್ ವಿಜಯ ಅಭಿವೃದ್ಧಿ. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮತದಾರರ 50 ಲಕ್ಷ ಮನೆಗಳ ಮೇಲೆ ಪಕ್ಷದ ಬಾವುಟವನ್ನು ಹಾರಿಸಲಾಗುತ್ತಿದೆ ಎಂದರು.
  ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದ ಆ್ಯಪ್ ಮೂಲಕ 60 ಸಾವಿರಕ್ಕೂ ಹೆಚ್ಚು ಗುಂಪುಗಳಲ್ಲಿ ಡೌನ್‌ಲೋಡ್ ಮಾಡುವಂತೆ ಪ್ರೇರಣೆ ನೀಡಲಾಗುತ್ತಿದೆ. ಪಕ್ಷದ 39 ಸಂಘಟನಾತ್ಮಕ ಜಿಲ್ಲೆಗಳು, 312 ಮಂಡಲಗಳು, 11642 ಶಕ್ತಿ ಕೇಂದ್ರಗಳು, 58156 ಬೂತ್‌ಗಳಲ್ಲಿ ಈ ಬೂತ್ ವಿಜಯ ಅಭಿಯಾನ ದೊಡ್ಡ ಆಂದೋಲನದ ರೀತಿಯಲ್ಲಿ ನಡೆಯಲಿದೆ ಎಂದು ಹೇಳಿದರು.
  ಇಂದು ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಮತ್ತು ಗುಜರಾತ್‌ನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುವುದಕ್ಕೆ ಪಕ್ಷದ ಕಾರ್ಯಕರ್ತರ ಪರಿಶ್ರಮ ಹಾಗೂ ಬೂತ್ ಕಮಿಟಿಗಳ ಶಕ್ತಿಯೇ ಕಾರಣ ಎಂಬುದನ್ನು ನಾನು ಮತ್ತೊಮ್ಮೆ ಒತ್ತಿ ಹೇಳುತ್ತಿದ್ದೇನೆ. ಹೀಗಾಗಿ ಬರುವ ಚುನಾವಣೆ ಎಂಬ ಯುದ್ಧಕ್ಕಾಗಿ ನಾವೆಲ್ಲ ಸನ್ನದ್ಧರಾಗಿ ಪಕ್ಷವನ್ನು ಒಗ್ಗೂಡಿಸಿಕೊಂಡು ಹೋರಾಟ ನಡೆಸೋಣ. ಈ ಬಾರಿ ಉತ್ತರ ಕನ್ನಡ ಜಿಲ್ಲೆಯ 6 ವಿಧಾನಸಭಾ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಆಯ್ಕೆಯಾಗಬೇಕು. ಸದ್ಯದಲ್ಲೇ ಬರಲಿರುವ ಚುನಾವಣೆಗೆ ಈ ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳೇ ಜಯ ಗಳಿಸಬೇಕು. ಅದಕ್ಕಾಗಿ ನಾವು ಸಾಕಷ್ಟು ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗಿದೆ. ನಿಮ್ಮ ಸಹಕಾರ ಪಕ್ಷದ ಸಂಘಟನೆಗೆ ಅಗತ್ಯ. ನಾನು ಸದಾ ನಿಮ್ಮ ಜೊತೆಗಿದ್ದು, ಪಕ್ಷವನ್ನು ಸಂಘಟಿಸಲು ಪಣ ತೊಟ್ಟಿದ್ದೇನೆ ಎಂದು ಹೇಳಿದರು.
  ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ ಪ್ರಭಾರಿ ಹಾಗೂ ಬೂತ್ ಅಧ್ಯಕ್ಷರು, ಸದಸ್ಯರು, ಹಾಗೂ ಕಾರ್ಯಕರ್ತರು ಇದ್ದರು.

  300x250 AD
  Share This
  300x250 AD
  300x250 AD
  300x250 AD
  Back to top