Slide
Slide
Slide
previous arrow
next arrow

ವಿಜ್ಞಾನ ಕೇಂದ್ರದಿಂದ ಉತ್ತಮ ಆಡಳಿತ ಮಾಸಾಚರಣೆ

300x250 AD

ಕಾರವಾರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಜಿಲ್ಲಾಡಳಿತ ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಉತ್ತಮ ಆಡಳಿತ ಮಾಸ ಅಂಗವಾಗಿ ಡಿಸೆಂಬರ್ ತಿಂಗಳಿನಲ್ಲಿ ವಿಜ್ಞಾನ ಹಾಗೂ ಗಣಿತ ಶಿಕ್ಷಕರಿಗೆ ಕಾರ್ಯಾಗಾರ, ಆಕಾಶ ವೀಕ್ಷಣೆ, ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಸಾಗರ ಹಾಗೂ ಕಾಂಡ್ಲಾ ಸಸ್ಯಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಡಿ.1, 2ರಂದು ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕಿನ ಪ್ರೌಢಶಾಲಾ ವಿಜ್ಞಾನ ಹಾಗೂ ಗಣಿತ ಶಿಕ್ಷಕರಿಗಾಗಿ ಪ್ರೌಢಶಾಲಾ ಹಂತದ ಪಠ್ಯಕ್ರಮದಲ್ಲಿ ಬರುವ ಕ್ಲಿಷ್ಟಕರ ವಿಷಯದ ಬಗ್ಗೆ ಕಾರ್ಯಾಗಾರವನ್ನು ವಿಶ್ವದರ್ಶನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಡಿ.10ರಂದು ದೂರದರ್ಶಕದ ಮೂಲಕ ಕಾರವಾರ ಕೋಡಿಬಾಗದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಕ್ಷತ್ರಪುಂಜಗಳ ಬಗ್ಗೆ ಚಟುವಟಿಕೆ, ನಂತರ ಅಲ್ಲಿನ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಚಂದ್ರ ಹಾಗೂ ಗುರು, ಶನಿ ಮತ್ತು ಮಂಗಳ ಗ್ರಹಗಳನ್ನು ವೀಕ್ಷಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಡಿ.17ರಂದು ಕಾರವಾರದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಯನ್ನು ಮತ್ತು ದಿನಾಂಕ ಡಿ.24ರಂದು ಆಶಾನಿಕೇತನ ವಸತಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ಡಿ.30 ಹಾಗೂ 31ರಂದು ಕಾರವಾರದ ಸಾಗರ ವಿಜ್ಞಾನ ಅಧ್ಯಯನ ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಾಗರ ಹಾಗೂ ಕಾಂಡ್ಲಾ ಸಸ್ಯಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

300x250 AD
Share This
300x250 AD
300x250 AD
300x250 AD
Back to top