Slide
Slide
Slide
previous arrow
next arrow

ಅರಣ್ಯ ಭೂಮಿ ಹಕ್ಕು ಹೋರಾಟ: 2022 ಹೋರಾಟದ ವರ್ಷ

300x250 AD

ಶಿರಸಿ: ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟಗಾರರ ವೇದಿಕೆಯ ಪರ ಮೂವತ್ತೇರಡನೇ ವರ್ಷವಾದ 2022ರಲ್ಲಿ ಹೋರಾಟದ ಇತಿಹಾಸದಲ್ಲಿಯೇ ವಿಭಿನ್ನ ಹೋರಾಟದ ಮೂಲಕ 2022 ಹೋರಾಟದ ವರ್ಷವಾಗಿ ಹೋರಾಟಗಾರರ ವೇದಿಕೆಯಿಂದ ಉಲ್ಲೇಖಿಸಲ್ಪಟ್ಟಿದೆ ಎಂದು ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

2022ರಲ್ಲಿ ಹೋರಾಟಗಾರರ ವೇದಿಕೆಯಿಂದ ಸಾಂಘೀಕ ಮತ್ತು ಕಾನೂನಾತ್ಮಕ, ಕಾನೂನು ತಿಳುವಳಿಕೆ, ಉರುಳು ಸೇವೆ, ಅರಣ್ಯವಾಸಿಗಳನ್ನ ಉಳಿಸಿ, ಭೂಮಿ ಹಕ್ಕಿಗಾಗಿ ಹಳ್ಳಿ ಕಡೆ ನಡಿಗೆ, ಅರಣ್ಯ ಸಿಬ್ಬಂದಿಗಳ ದೌರ್ಜನ್ಯಕ್ಕೆ ತೀವ್ರ ಪ್ರತಿಭಟನೆ, ಪಾದಯಾತ್ರೆ, ಉಚಿತವಾಗಿ ಜಿಪಿಎಸ್ ಮೇಲ್ಮನವಿ ಅಭಿಯಾನ, ಸರಕಾರದೊಂದಿಗೆ ಸಮಾಲೋಚನೆ, ಕಾನೂನಾತ್ಮಕ ಅಂಶಗಳನ್ನ ಒಳಗೊಂಡಿರುವ ಮೂವತ್ತು ವರ್ಷ ಹೋರಾಟದ ಸ್ಮರಣ ಸಂಚಿಕೆ ಬಿಡುಗಡೆ, ಅರಣ್ಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಹಾಗೂ ಅರಣ್ಯವಾಸಿಗಳಿಗೆ ಜಾಗೃತೆ ಮೂಡಿಸುವ ಉದ್ದೇಶದಿಂದ ಹೋರಾಟದ ವಾಹಿನಿ ಮೂಲಕ ಜಾಗೃತ ಕಾರ್ಯಕ್ರಮ ಮುಂತಾದ ವಿಭಿನ್ನ ರೀತಿಯ ಹೋರಾಟಗಳು 2022 ನೇ ಇಸವಿಯ ಹೋರಾಟದ ಪುಟಗಳಿಗೆ ಇಂದು ಸೇರಲ್ಪಟ್ಟಿದೆ ಎಂದು ಅವರು ಹೇಳಿದರು.

ಸರಕಾರದ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೋರತೆಯಿಂದ ಸಮಸ್ಯೆಗೆ ಪರಿಹಾರ ದೊರಕದೇ ಇರುವುದು ವಿಷಾದಕರ. ಸುಪ್ರೀಂ ಕೋರ್ಟಿನಲ್ಲಿ ರಾಜ್ಯ ಸರಕಾರ ಅರಣ್ಯವಾಸಿಗಳ ಪರ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾಗಿರುವ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವುದಾಗಿ ಸಲ್ಲಿಸಿದ ಪ್ರಮಾಣ ಪತ್ರ ಅರಣ್ಯ ಅತಿಕ್ರಮಣದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸುಪ್ರೀಂ ಕೋರ್ಟಿನಲ್ಲಿ ಸರಕಾರ ಅರಣ್ಯವಾಸಿಗಳ ಪರ ನಿಲುವನ್ನು ಪ್ರಕಟಿಸಬೇಕೆಂದು ರವೀಂದ್ರ ನಾಯ್ಕ ಆಗ್ರಹಿಸಿದರು.

300x250 AD

163 ಗ್ರಾ.ಪಂ.ಯಲ್ಲಿ ಜಾಗೃತೆ:
ಅರಣ್ಯವಾಸಿಗಳ ವ್ಯಾಪಕ ಹೋರಾಟದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ 163 ಗ್ರಾಮ ಪಂಚಾಯತದಲ್ಲಿ ಹೋರಾಟಗಾರರ ವೇದಿಕೆಯ ನಿಯೋಗವು ಸಂಚರಿಸಿ ಅರಣ್ಯವಾಸಿಗಳಲ್ಲಿ ಅರಣ್ಯ ಭೂಮಿ ಹಕ್ಕಿಗೆ ಕುರಿತು ಜಾಗೃತೆ ಉಂಟುಮಾಡಿರುವುದು 2022ರ ಹೋರಾಟದ ವಿಶೇಷತೆಯಲ್ಲಿ ಒಂದಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.

Share This
300x250 AD
300x250 AD
300x250 AD
Back to top