Slide
Slide
Slide
previous arrow
next arrow

ವಸ್ತುಗಳನ್ನು ಕೊಳ್ಳುವಾಗ ಎಚ್ಚರಿಕೆ ವಹಿಸಿ: ನ್ಯಾ.ವಿಜಯಕುಮಾರ

300x250 AD

ಕಾರವಾರ: ನಗರದ ಪ್ರೀಮಿಯರ್ ವಿಜ್ಞಾನ & ವಾಣಿಜ್ಯ ಪದವಿ ಪೂರ್ವ ಕಾಲೇಜನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಅಧ್ಯಕ್ಷ ಡಿ.ಎಸ್.ವಿಜಯಕುಮಾರಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ವಸ್ತುಗಳನ್ನು ಕೊಳ್ಳುವಾಗ ತುಂಬಾ ಎಚ್ಚರಿಕೆಯನ್ನು ವಹಿಸಿ ವಸ್ತುಗಳನ್ನು ಕೊಳ್ಳಬೇಕು. ಗ್ರಾಹಕ ತನ್ನ ದಿನ ನಿತ್ಯ ಜೀವನದಲ್ಲಿ ಯಾವ ರೀತಿ ಎಚ್ಚರಿಕೆ ವಹಿಸಬೇಕು ಪ್ರತಿ ವಸ್ತುವಿನ ಖರೀದಿಯಲ್ಲಿ ರಶೀದಿ ತುಂಬಾ ಮುಖ್ಯವಾಗಿರುತ್ತದೆ, ಅಮಾಯಕ ಗ್ರಾಹಕರಿಗೆ ಸಾಕಷ್ಟು ಮೋಸವಾಗುತ್ತಿದೆ. ಗ್ರಾಹಕರ ವೇದಿಕೆ ಇರುವುದು ಪ್ರತಿಯೊಬ್ಬರಿಗೂ ಗೊತ್ತಾಗುವಂತಾಗಬೇಕು ಎಂದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಮಾರುಕಟ್ಟೆಯಲ್ಲಿ ಗ್ರಾಹಕರು ಯಾವ ರೀತಿ ಎಚ್ಚೆತ್ತುಕೊಳ್ಳಬೇಕು, ದಿನನಿತ್ಯ ಗ್ರಾಹಕ ಈ-ಕನ್ಸ್ಯುಮರ್’ನಲ್ಲಿ ಜೀವನವನ್ನು ತೊಡಗಿಸಿಕೊಂಡಿರುತ್ತಾನೆ. ಇದರ ಸಾಧಕ ಬಾಧಕ ಗ್ರಾಹಕನಿಗೆ ಗೊತ್ತಿರಬೇಕು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ರೇಣುಕಾ ಡಿ.ರಾಯ್ಕರ್ ಮಾತನಾಡಿ, ಜನಸಾಮಾನ್ಯರು ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುವಾಗ ತುಂಬಾ ಎಚ್ಚರಿಕೆಯನ್ನು ವಹಿಸಿ ಖರೀದಿಸಬೇಕಾಗುತ್ತದೆ. ಏಕೆಂದರೆ ಅವಧಿ ಮುಗಿದಂಥ ವಸ್ತುಗಳನ್ನು ಉಪಯೋಗಿಸುವುದರಿಂದ ಆರೋಗ್ಯದ ಮೇಲೆ ವ್ಯತರಿಕ್ತವಾದ ಪರಿಣಾಮ ಬೀರುತ್ತದೆ. ಈ ಬಗ್ಗೆ ಗಮನಹರಿಸಿ ವಸ್ತುವಿನ ಅವಧಿಯು ಮುಗಿದಿದೆಯೋ ಅಥವಾ ಮುಗಿದಿಲ್ಲದಿರುವುದರ ಬಗ್ಗೆ ಖಾತ್ರಿಪಡಿಸಿಕೊಂಡು ಉಪಯೋಗಿಸಬೇಕು ಎಂದರು. ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಹಳ್ಳಿಯ ಜನರಿಗೆ ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷ ಕೆ.ವಿ.ಸುರೇಂದ್ರಕುಮಾರ್ ಮಾತನಾಡಿ, ಗ್ರಾಹಕರ ದಿನಾಚರಣೆಯ ಕುರಿತಂತೆ ಅದು ನಡೆದ ಬಂದ ಹಾದಿಯನ್ನು ತಿಳಿಸಿದರು.
ಕಾರ್ಯಕ್ರಮಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ನಜೀರ್ ಅಹ್ಮದ್ ಯು.ಶೇಖ್, ಪ್ರಾಂಶುಪಾಲರು ಗೋವಿಂದಪ್ಪ ಆರ್., ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ಇಲಾಖೆಯ ಉಪನಿರ್ದೇಶಕ ಮಂಜುನಾಥ ರೇವಣಕರ್, ಸಹಾಯಕ ನಿಯಂತ್ರಕ ರಾಮಚಂದ್ರ ಶರ್ಮಾ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top