Slide
Slide
Slide
previous arrow
next arrow

ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿ: ಕರಾವಳಿಯಲ್ಲಿ ಆಪಲ್ ಬೇರ್ ಹಣ್ಣು ಯಶಸ್ವಿ ಕೃಷಿ

300x250 AD

ಅಂಕೋಲಾ: ಸೇಬಿನಂತೆ ಫಳಫಳನೆ ಹೊಳೆಯುವ ಆಪಲ್ ಬೇರ್ ಹಣ್ಣು ಈಗ ಕರಾವಳಿ ಭಾಗದ ಅಂಕೋಲಾದಲ್ಲಿ ಬೆಳೆಯುವುದರ ಮೂಲಕ ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ.
ಇತ್ತೀಚಿನ ದಿನದಲ್ಲಿ ಕರಾವಳಿ ಮಣ್ಣಿನಲ್ಲಿ ಬೆಳೆದದ್ದೆಲ್ಲಾ ಬಂಗಾರವಾಗುತ್ತೆ ಅನ್ನೋ ಮಾತುಗಳು ಕೆಳಿಬರುತ್ತಿದ್ದು ಅದಕ್ಕೆ ಸಾಟಿ ಎನ್ನುವಂತೆ ಕಳೆದ ಕೆಲವು ವರ್ಷಗಳ ಹಿಂದೆ ಕರಾವಳಿಯ ಅಂಕೋಲಾ ದ್ರಾಕ್ಷಿಯನ್ನು ಬೆಳೆದು ಸುದ್ದಿಯಲ್ಲಿದ್ದು, ಈಗ ಮತ್ತೆ ಆಪಲ್ ಬೇರ್ ಹಣ್ಣನ್ನು ಕರಾವಳಿಯ ಮಣ್ಣಿನಲ್ಲಿ ಬೆಳೆದು ಮತ್ತೆ ಅಂಕೋಲಾ ತಾಲೂಕು ಸುದ್ದಿಯಾಗಿದೆ.
ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿಯ ಪತಿ, ವಿಜಯ ನಾಡಕರ್ಣಿ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಅರುಣ ನಾಡಕರ್ಣಿಯವರು ತಮ್ಮ ಮನೆಯ ತೋಟದಲ್ಲಿಯೇ ಆಪಲ್ ಬೇರ್ ಹಣ್ಣನ್ನು ಬೆಳೆದಿದ್ದಾರೆ. ಅರುಣ ನಾಡಕರ್ಣಿ ಕುಟುಂಬವು ರಾಜಕೀಯದಲ್ಲಿದ್ದರು ಅದರ ಹೊರತಾಗಿಯು ಕೃಷಿಯಲ್ಲಿ ಎತ್ತಿದ ಕೈಯಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿಯೇ ತಮ್ಮ ಮನೆಯಿದ್ದರು ಅಲ್ಲಿಯೇ ಹಲವಾರು ಕೃಷಿ ಚಟುವಟಿಕೆಯನ್ನು ನಡೆಸಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ತೋಟದಲ್ಲಿ ಅನೇಕಾರು ತೋಟಗಾರಿಕೆ ಬೆಳೆಯನ್ನು ಬೆಳೆಯುವುದರ ಜೊತೆಗೆ ಹಲವಾರು ಆವಿಷ್ಕಾರಗಳಿಗೂ ಕೈ ಹಾಕಿ ಯಸಸ್ಸು ಕಂಡಿದ್ದಾರೆ. ಹಾಗೆಯೇ ಆಪಲ್ ಬೇರ್ ಹಣ್ಣನ್ನು ತಮ್ಮ ತೋಟದಲ್ಲಿ ಸಾಂಗ್ಲಿಯಿoದ ಕೆಲವು ಗಿಡಗಳನ್ನು ತಂದು ನೆಡುವುದರ ಮೂಲಕ ಯಶಸ್ಸು ಕಂಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಆಪಲ್ ಬೇರ್ ಹಣ್ಣಿನ ಗಿಡವನ್ನು ತಮ್ಮ ತೋಟದಲ್ಲಿ ಹಾಕಿದ್ದಾರೆ. ಸಾಮಾನ್ಯ ಗೊಬ್ಬರ ಮತ್ತು ಹೆಚ್ಚಿನದಾಗಿ ನೀರನ್ನು ಹಾಕುವುದ ಮೂಲಕ ಅದರ ಪೋಷಣೆ ಮಾಡಿ ಈ ವರ್ಷ ಸರಿ ಸುಮಾರು ನೂರಕ್ಕು ಅಧಿಕ ಕಾಯಿಗಳು ಬಂದಿರುವುದು ಅವರ ಶ್ರಮಕ್ಕೆ ಫಲ ಸಿಕ್ಕಂತಾಗಿದೆ.
ಕೋಟ್…
ಕರಾವಳಿ ಬಾಗದಲ್ಲಿ ಈ ಬೆಳೆ ಆಗುತ್ತಿರುವುದರಿಂದ ಸಣ್ಣ ರೈತರು ಇದನ್ನು ತಮ್ಮ ತೋಟದಲ್ಲಿ ಹಾಕಬಹುದು. ಇದು ವರ್ಷದಲ್ಲಿ ಅಧಿಕ ಇಳುವರಿ ನೀಡುತ್ತಿರುವುದರಿಂದ ಆದಾಯವು ಸಿಗುತ್ತದೆ. ತೋಟಗಾರಿಕೆ ಇಲಾಖೆಯು ಆಶಕ್ತಿ ತೋರಿ ರೈತರಿಗೆ ಉತ್ತೇಜನ ನೀಡಬೇಕು. ಹಾಗೆ ನಮ್ಮ ಟ್ರಸ್ಟ್ನಿಂದಲು ಗಿಡಗಳನ್ನು ಉಚಿತವಾಗಿ ನೀಡಲು ಸಿದ್ಧರಿದ್ದೇವೆ.
• ಅರುಣ ನಾಡಕರ್ಣಿ, ವಿಜಯ ನಾಡಕರ್ಣಿ ಟ್ರಸ್ಟ್ ಅಧ್ಯಕ್ಷ

300x250 AD
Share This
300x250 AD
300x250 AD
300x250 AD
Back to top