ಕಾರವಾರ: ಹೊಸ ವರ್ಷಾಚರಣೆಗಾಗಿ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಾಂತರ ರೂ.ಮೌಲ್ಯದ ಗೋವಾ ಮದ್ಯವನ್ನು ಮಾಜಾಳಿ ಚೆಕ್ ಪೋಸ್ಟ್ ಬಳಿ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ತಪಾಸಣೆ ಪ್ರಾರಂಭಿಸಿದ ಅಧಿಕಾರಿಗಳು ಗೋವಾದಿಂದ ಬರುತ್ತಿದ್ದ ಲಾರಿಯನ್ನು ತಪಾಸಣೆ ಮಾಡುವ ವೇಳೆ ಅಕ್ರಮ ಸಾಗಾಟದ ಪ್ರಕರಣ ಬೆಳಕಿಗೆ ಬಂದಿದೆ.
ಲಾರಿಯಲ್ಲಿ 400 ಬಾಕ್ಸಿನಲ್ಲಿದ್ದ 4800 ಬಾಟಲ್ ವಿಸ್ಕಿ, 9 ಬಾಕ್ಸಿನಲ್ಲಿದ್ದ 108 ಬ್ರಾಂಡಿ ಬಾಟಲ್ ಸೇರಿ ಒಟ್ಟೂ 3681 ಲೀ. ಅಕ್ರಮ ಮದ್ಯ ಪತ್ತೆಯಾಗಿದೆ. ಮದ್ಯದ ಒಟ್ಟೂ ಮೌಲ್ಯ 1.7 ಕೋಟಿ ರೂ.ಗಳಾಗಿದ್ದು, ವಶಕ್ಕೆ ಪಡೆದ ವಾಹನ ಮೌಲ್ಯ 19.5 ಲಕ್ಷ ರೂ.ಗಳ ಜೊತೆ ಆರೋಪಿ ಚಾಲಕ ಬೆಂಗಳೂರಿನ ನರಸಿಂಹರಾಜು ಎಲ್.ಡಿ .ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.