ಕಾರವಾರ: ಪ್ರತಿಭೆಯಿಂದ ಎತ್ತರಕ್ಕೆ ಬೆಳೆದರೆ ಸಾಲದು, ಅದು ಸ್ಥಿರವಾಗಿ ಇರಬೇಕಾದರೆ ಒಳ್ಳೆಯ ಗುಣವಿರುವುದು ಅಷ್ಟೇ ಮುಖ್ಯ ಎಂದು ಫೈನ್ ಆರ್ಟ್ ಕಲಾಕಾರ ಹಾಗೂ ಬಾಲಮಂದಿರ ಪ್ರೌಢಶಾಲೆಯ ಮಾಜಿ ವಿದ್ಯಾರ್ಥಿಯೂ ಆಗಿರುವ ದೀಪೇಶ್ ಡಿ.ನಾಯ್ಕ ಹೇಳಿದರು.
ಅವರು ನಗರದ ಹಿಂದೂ ಪ್ರೌಢಶಾಲೆಯ 125ನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ಕರಿರ‍್ಸ್ & ಯು ವಿಚಾರಗೋಷ್ಠಿಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಕಾರವಾರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಅನಿರುದ್ಧ ಹಳದಿಪುರಕರ ಮಾತನಾಡಿದರು. ಬಾಲಮಂದಿರ ಪ್ರೌಢಶಾಲೆಯ ಶಿಕ್ಷಕಿ ಭಾರತಿ ಐಸಾಕ್ ಸ್ವಾಗತ ಕೋರಿದರು. ಹಿಂದೂ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಅರುಣ ರಾಣೆ ವಂದಿಸಿದರು. ಸುಮತಿದಾಮ್ಲೆ ಪ್ರೌಢಶಾಲೆಯ ಶಿಕ್ಷಕ ಸಂತೋಷ ಎಂ.ಶೇಟ್ ಕಾರ್ಯಕ್ರಮ ನಿರ್ವಹಿಸಿದರು.
ಈ ಕಾರ್ಯಕ್ರಮದಲ್ಲಿ ದೀಪೇಶ್ ನಾಯ್ಕ ಹಾಗೂ ತಾಯಿ ಬೃಂದಾ ನಾಯ್ಕ, ಸುಮತಿದಾಮ್ಲೆ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಗಿರಿಜಾ ಎನ್.ಬಂಟ, ಮೂರೂ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಪ್ರಯೋಜನ ಪಡೆದರು.