Slide
Slide
Slide
previous arrow
next arrow

‘ಕರಾವಳಿ ದರ್ಶನ’ಕ್ಕೆ NWKRTC ವಿಶೇಷ ಪ್ಯಾಕೇಜ್

300x250 AD

ಕಾರವಾರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಉತ್ತರಕನ್ನಡ ವಿಭಾಗದ ಕುಮಟಾ ಘಟಕದಿಂದ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಒಂದು ದಿನದ ವಿಶೇಷ ಪ್ಯಾಕೇಜ್ ಟೂರ್‌ನ್ನು ವಯಸ್ಕರಿಗೆ ರೂ.300, ಮಕ್ಕಳಿಗೆ ರೂ.250ಗಳ ರಿಯಾಯಿತಿ ದರದಲ್ಲಿ ಪ್ರಾರಂಭಿಸಲಾಗಿದೆ.
ಈ ವಿಶೇಷ ವಾಹನವು ‘ಕರಾವಳಿ ದರ್ಶನ’ ಎಂಬ ನಾಮಫಲಕದೊಂದಿಗೆ ಕುಮಟಾ ಬಸ್ ನಿಲ್ದಾಣದಿಂದ ಬೆಳಗ್ಗೆ 7:30ಕ್ಕೆ ಹೊರಟು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ, ಮಿರ್ಜಾನ ಕೋಟೆ, ಅಪ್ಸರಕೊಂಡ, ಇಡಗುಂಜಿ ಮಹಾಗಣಪತಿ ದೇವಸ್ಥಾನ, ಮುರಡೇಶ್ವರ ದೇವಸ್ಥಾನ, ಇಕೋ ಬೀಚ್ ಮತ್ತು ಶರಾವತಿ ಕಾಂಡ್ಲಾ ಮ್ಯಾಂಗ್ರೋವ್ ಬೋರ್ಡ್ ಪಾರ್ಕ್ ಈ ಎಲ್ಲ ಪ್ರವಾಸಿ ತಾಣಗಳನ್ನು ಸಂದರ್ಶಿಸಿ, ಮರಳಿ ರಾತ್ರಿ 7 ಗಂಟೆಗೆ ಗೋಕರ್ಣ ತಲಪುತ್ತದೆ. ಕೇವಲ ಒಂದು ದಿನದ ಅವಧಿಯಲ್ಲಿ 7ರಿಂದ 8 ಪ್ರವಾಸಿ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ.
ಈ ವಿಶೇಷ ಪ್ಯಾಕೆಜ್ ಟೂರ್‌ನ್ನು ಪ್ರತಿ ಶನಿವಾರ, ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳಂದು ಕುಮಟಾ ಬಸ್ ನಿಲ್ದಾಣದಿಂದ ಕಾರ್ಯಾಚರಣೆಗೊಳಿಸಲಾಗುವುದು. ಪ್ರಯಾಣಿಕರು http://www.ksrtc.inನ ಮೂಲಕ ಮುಂಗಡವಾಗಿ ತಮ್ಮ ಆಸನಗಳನ್ನು ಕಾಯ್ದಿರಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7760991726 ಗೆ ಸಂಪರ್ಕಿಸಬಹುದು ಎಂದು ವಾಕರಸಾ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top