Slide
Slide
Slide
previous arrow
next arrow

ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿ ಗಂಗಾವಳಿ ನದಿಪಾಲು: ಮುಂದುವರೆದ ಶೋಧಕಾರ್ಯ

300x250 AD

ಅಂಕೋಲಾ: ಪ್ರವಾಸಕ್ಕೆಂದು ಸಹಪಾಠಿಗಳ ಜೊತೆ ಬಂದಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಯೋರ್ವ ಗಂಗಾವಳಿ ನದಿಯಲ್ಲಿ ಕಣ್ಮರೆಯಾಗಿದ‌ ಘಟನೆ ನಡೆದಿದೆ. ಗುಳ್ಳಾಪುರದ ಹೈಸ್ಕೂಲ್ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಉದ್ದೇಶದಿಂದ ಶಾಲೆಯವರು ಮಕ್ಕಳನ್ನು ಹತ್ತಿರದ ಗಂಗಾವಳಿ ನದಿ ತೀರದ ಬಳಿ ಕರೆತಂದಿದ್ದು, ಕೆಲ ಹೊತ್ತಿನಲ್ಲೇ ವಿದ್ಯಾರ್ಥಿಯೋರ್ವ ಗುಂಪಿನಿಂದ ಬೇರ್ಪಟ್ಟು ನದಿ ತೀರದ ಬಳಿ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿ ಬಂದಿದೆ.
ಯಲ್ಲಾಪುರದ ತೆಂಕನಗೇರಿಯ ಪ್ರಕಾಶ್ ವಿಟ್ಟು ಪಟ್ಕರೆ (16) ನೀರಿನಲ್ಲಿ ಕಣ್ಮರೆಯಾದ ದುರ್ದೈವಿ ಬಾಲಕ ಎನ್ನಲಾಗಿದ್ದು , ಈತ ಹಾಸ್ಟೆಲ್ ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ. ಸ್ಥಳೀಯ ಮೀನುಗಾರರು , ಅಗ್ನಿಶಾಮಕ ದಳದವರು ಬಾಲಕನ ಪತ್ತೆಗೆ ಮುಂದಾಗಿದ್ದು, ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು ಶೋಧ ಕಾರ್ಯಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ.

300x250 AD
Share This
300x250 AD
300x250 AD
300x250 AD
Back to top