Slide
Slide
Slide
previous arrow
next arrow

ಓಝೋನ್ ಪದರ ನಾಶದಿಂದಾಗಿ ಮನುಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ: ನಾಗೇಶ್ ಹೆಗಡೆ

300x250 AD

ಶಿರಸಿ: ನಮ್ಮ ಸುಂದರ ಜಗತ್ತು  ಅಪಾಯದ ಸುಳಿಯಲ್ಲಿ ಸಿಲುಕಿದೆ.  ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬದಲಾಗುತ್ತಿರುವ ಹವಾಮಾನದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಾಯುಪದರ ಹಾಗೂ ಓಝೋನ್ ಪದರದ ನಾಶದಿಂದಾಗಿ ಮುಂದಿನ ಐವತ್ತು ವರ್ಷಗಳಲ್ಲಿ  ಮನುಕುಲಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ಹಿರಿಯ ಪತ್ರಕರ್ತ, ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ ಹೇಳಿದರು. 

 ಅವರು ಎಂಇಎಸ್ ನ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐ.ಕ್ಯು.ಎ.ಸಿ ಸಂಯೋಜನೆಯಲ್ಲಿ ಪತ್ರಿಕೋದ್ಯಮ ಹಾಗೂ ರಸಾಯನ ಶಾಸ್ತ್ರ ವಿಭಾಗವು ಆಯೋಜಿಸಿದ್ದ  ವಿದ್ಯಾರ್ಥಿಗಳಿಗೆ ಭವಿಷ್ಯದ ಸಾಧ್ಯತೆಗಳು ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

           ಮನುಷ್ಯನ ಅತಿಯಾದ ಕೊಳ್ಳುಬಾಕತನದಿಂದ ಪರಿಸರ ನಾಶವಾಗುತ್ತಾ ಇದೆ . ಬಾಂಬ್ ಸೈಕ್ಲೋನ್ ಗೆ ತತ್ತರಿಸಿದ  ಅಮೆರಿಕಾ ಸ್ತಬ್ಧವಾಗಿದೆ. ಇಪ್ಪತ್ತು ಕೋಟಿಗೂ ಅಧಿಕ ಜನಜೀವನ ಅಸ್ತವ್ಯಸ್ಥವಾಗಿಬಿಟ್ಟಿದೆ. ಹಾಗೆಯೇ ಮೂರು ಬಗೆಯ ದೊಡ್ಡ ಅಪಾಯಗಳು ಭೂಮಿಗೆ ಬರುತ್ತಿವೆ. ಮೊದಲನೆಯದು ಕೊರಾನಾ , ಎರಡನೆಯದು ಜಾಗತಿಕ ಹವಾಮಾನ ಬದಲಾವಣೆ, ಮೂರನೆಯದು ಅಭಿವೃದ್ಧಿಯ ಅಲೆ. ವಾಯುಗುಣದ ಬದಲಾವಣೆಯ ಬಗ್ಗೆ ತಿಳಿಸುತ್ತಾ  ಭೂಮಿಯು ಸೌರವ್ಯೂಹದ ಅತ್ಯಂತ ಸುರಕ್ಷಿತ ಗ್ರಹವಾಗಿದ್ದು ಇಲ್ಲಿ ಉಷ್ಣಾಂಶವು 15 ಡಿಗ್ರಿ ಸೆಲ್ಸಿಯಸ್ ಇರುತ್ತದೆ 1 ಡಿಗ್ರಿ ಹೆಚ್ಚು ಅಥವಾ ಕಡಿಮೆ ಆಗಬಹುದು. ಈ 1 ಡಿಗ್ರಿ ಹೆಚ್ಚಿದ ಪರಿಣಾಮ ನಾನಾ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ ಎಂದು ಹೇಳಿದರು. ಜನಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವ ಬಗ್ಗೆ ತಿಳಿಸಿ ಭೂಮಿ ಬಿಸಿಯಾಗಲು  ಪೆಟ್ರೋಲ್ ಡೀಸೆಲ್ ಕಾರಣವಲ್ಲ ಬಂಡವಾಳಶಾಹಿ ಅರ್ಥವ್ಯವಸ್ಥೆಯೇ ಕಾರಣ ಎಂಬುದನ್ನು ತಿಳಿಸಿದರು. ಭೂಮಿಯ ತಾಪಮಾನ ತಡೆಯಲು ಪರಿಹಾರವಾಗಿ  ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳ  ಸಮರ್ಪಕ ಬಳಕೆ, ಹಸಿರು ಕಟ್ಟಡಗಳು, ಎಲ್ಲಾ ತ್ಯಾಜ್ಯಗಳ ಮರುಬಳಕೆ ಹಾಗೂ  ಸಮರ್ಪಕವಾದ ನೀರಿನ ಬಳಕೆಯ ಕುರಿತು ಹೇಳಿದರು.

ಕಾರ್ಯಕ್ರಮದ ಅಥಿತಿಗಳಾಗಿ ಆಗಮಿಸಿದ್ದ. ವಿಜ್ಞಾನಿ ಶ್ರೀಕಾಂತ್ ಭಟ್ ಮಾತನಾಡಿ ನಮ್ಮ ಸಮಾಜದಲ್ಲಿ ವಿಜ್ಞಾನದ ಬಗ್ಗೆ ದಿವ್ಯ ನಿರ್ಲ್ಯಕ್ಷವಿದೆ. ಸೀಮಿತ ಪರಿಧಿಯಿಲ್ಲದೆ ಕೆಲಸ ಮಾಡುವವನು ವಿಜ್ಞಾನಿ. ನೀವು ಹೊಂದಿರುವ ಗುರಿಯ ಒಳಗೆ ಹೊಕ್ಕಿ ಅದನ್ನು ಕಂಡುಹಿಡಿಯುವ, ಹೊಸದನ್ನು ಹುಡುಕುವ ಯೋಚನೆಗೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.

300x250 AD

 ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೆಜು ಉಪಸಮಿತಿ ಅಧ್ಯಕ್ಷರಾದ ಎಸ್.ಕೆ.ಭಾಗವತ, ಜಗತ್ತು ಬಹಳ ದೊಡ್ಡದಿದ್ದು ಅದರಲ್ಲಿ ಕಲಿಯಬೇಕಾದ ಸಂಗತಿಗಳು ಬಹಳಷ್ಟಿವೆ. ಈ ದಿಸೆಯಲ್ಲಿ ನಾಗೇಶ್ ಹೆಗಡೆಯವರ ಉಪನ್ಯಾಸವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಸ್ವಾಗತಿಸಿ ಮಾತನಾಡಿದ ಪ್ರಾಚಾರ್ಯ ಟಿ.ಎಸ್. ಹಳೆಮನೆ , ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಬಹಳಷ್ಟು ಪ್ರಶ್ನೆ, ಸವಾಲುಗಳು ದಿನದಿಂದ ದಿನಕ್ಕೆ ಎದುರಾಗುತ್ತಿದ್ದು, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಏನು ಮಾಡಬೇಕು ಎಂಬುದನ್ನು  ನಾಗೇಶ್ ಹೆಗಡೆಯವರ ಉಪನ್ಯಾಸದ ಮೂಲಕ ಅರಿತುಕೊಳ್ಳಬೇಕು ಎಂದರು.

ಐಕ್ಯುಎಸಿ ಸಂಯೋಜಕ ಡಾ.ಎಸ್. ಎಸ್. ಭಟ್ ಉಪಸ್ಥಿತರಿದ್ದರು. ಪತ್ರಿಕೋದ್ಯಮ ಮುಖ್ಯಸ್ಥರಾದ ಪ್ರೊ.ರಾಘವೇಂದ್ರ ಜಾಜಿಗುಡ್ಡೆ ನಿರೂಪಿಸಿದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಗಣೇಶ್ ಹೆಗಡೆ ವಂದಿಸಿದರು.

Share This
300x250 AD
300x250 AD
300x250 AD
Back to top