ಜೋಯಿಡಾ: ತಾಲೂಕಿನಲ್ಲಿ ಮಹಾಮಾರಿ ಚರ್ಮಗಂಟು ರೋಗ ಕೊರೋನಾದಂತೆ ಗ್ರಾಮದಿಂದ ಗ್ರಾಮಕ್ಕೆ ಹರಡುತ್ತಿದೆ. ರೋಗದ ಈ ಅಲೆ ದನಗಳ ಸಾವಿಗೆ ಕಾರಣವಾಗುತ್ತಿದ್ದು, ಅಘಾತಕಾರಿಯಾಗಿದೆ. ನಿಯಂತ್ರಣವೇ ಪಶುಸಂಗೋಪನೆ ಇಲಾಖೆಗೆ ಸವಾಲಾಗಿದೆ. ಇಲಾಖೆಯಿಂದ ಕೈಗೊಂಡ ವ್ಯಾಕ್ಸಿನೇಶನ್ ತಡವಾಗಿದೆ.
ದನಗಣತಿಯ ಪ್ರಕಾರ ತಾಲೂಕಿನಲ್ಲಿ 27469 ದನಗಳಿವೆ. ಪಶುಸಂಗೋಪನೆ ಇಲಾಖೆಯ ಮಾಹಿತಿಯಂತೆ 34 ಗ್ರಾಮಗಳಲ್ಲಿ ಈ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಇಡೀ ತಾಲೂಕಿನ ಮೂಲೆ ಮೂಲೆಗೂ ಈ ರೋಗ ಆವರಿಸಿದ ಮಾಹಿತಿ ಇದೆ. ಈಗಾಗಲೆ 259 ಜಾನುವಾರುಗಳುಗೆ ಈ ರೋಗ ಭಾದೆಯಾಗಿದ್ದು ಇದರಲ್ಲಿ 8 ಮರಣ ಹೊಂದಿದ ಬಗ್ಗೆ ದಾಖಲಾಗಿದೆ. 63 ಗುಣ ಮುಖವಾಗಿದೆ.
ದನಗಣತಿಯಂತೆ 27469 ವ್ಯಾಕ್ಸಿನ್ ಬೇಡಿಕೆ ಇದೆ. ಆದರೆ ಕೇವಲ 10 ಸಾವಿರ ಡೋಸ್ ಮಾತ್ರ ತಾಲೂಕಿಗೆ ಬಿಡುಗಡೆಯಾಗಿದೆ. ಇದರಲ್ಲಿ 6558 ಡೋಸ್ ದನಗಳಿಗೆ ನೀಡಲಾಗಿದೆ. ಇನ್ನೂ ಕೊಡುವುದು ಬಾಕಿಯಿದೆ.
ಎಚ್ಚೆತ್ತುಕೊಳ್ಳದ ಇಲಾಖೆ: ಈಗಾಗಲೇ ಸರಕಾರದಿಂದ ಚರ್ಮಗಂಟು ರೋಗ ಭಾದಿತ ಜಾನುವಾರುಗಳಿಗೆ ಕೊಡ ಮಾಡುವ ಇಂಜೆಕ್ಷನ್. ಇದು ರೋಗದ ಲಕ್ಷಣ ಕಾಣಿಸಿಕೊಂಡಾಗಲೇ ಕೊಡಬೇಕಾಗಿತ್ತು. ಆದರೆ ಇಡೀ ತಾಲೂಕಿನಲ್ಲಿ ಆವರಿಸಿದ ಈ ರೋಗ ಡಿ.3ರ ನಂತರ ಹೆಚ್ಚು ಉಲ್ಬಣವಾಗಿದೆ. ಈಗ ಹತೋಟಿ ಕಷ್ಟದ ಕೆಲಸವಾಗಿದ್ದು, ದನಗಳ ಸಾಕಾಣಿಕೆ ಮಾಡಿದ ರೈತರ ಕುಟುಂಬ ಸ್ಥಿತಿ ಚಿಂತಾಜನಕವಾಗಿದೆ.
ಕೋಟ್…
ತಾಲೂಕಿಗೆ ಅಗತ್ಯ ಬೇಡಿಕೆ ಇರುವ ಲಸಿಕೆ ಪೂರೈಕೆ ಇದೆ. ಜಿಲ್ಲಾ ಕೇಂದ್ರದಿoದ ಹಂತ ಹಂತವಾಗಿ ತರಲಾಗುತ್ತದೆ. ರೋಗ ಚೇತರಿಕೆಯಾಗುತ್ತಿದೆ. ಎಲ್ಲ ರೈತರು ದನಗಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು.
• ಮಂಜಪ್ಪಾ ಎ., ಪಶುಸಂಗೊಪನೆ ಇಲಾಖೆಯ ಸಹಾಯಕ ನಿರ್ದೇಶಕ