Slide
Slide
Slide
previous arrow
next arrow

ಕಾರು, ಬಸ್,ಬೈಕ್ ನಡುವೆ ಅಪಘಾತ: ಬೈಕ್ ಸವಾರನ ದುರ್ಮರಣ

300x250 AD

ಕಾರವಾರ: ಕಾರು, ಬಸ್‌ ಹಾಗೂ ಬೈಕ್ ನಡುವೆ ನಡೆದ ಸರಣಿ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದು, ಇನ್ನಿಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ‌ ತಾಲೂಕಿನ ಮಲ್ಲಾಪುರ ಬಳಿ ನಡೆದಿದೆ. ಬಾಳ್ನಿಯ ಸತ್ಯಂ ಗೋವಿಂದ ನಾಯ್ಕ(19) ಮೃತಪಟ್ಟ ಯುವಕನಾಗಿದ್ದು, ಈತ ಮಕ್ಕಳನ್ನು ಶಾಲೆಗೆ ಬಿಡಲು ಬಂದ ವೇಳೆ ಬೈಕ್, ಬಸ್ ಹಾಗೂ ಕಾರಿನ ನಡುವೆ ಸರಣಿ ಅಪಘಾತವಾಗಿದೆ.

ಅಪಘಾತದ ರಭಸಕ್ಕೆ  ಬೈಕ್ ಸವಾರ ಬಸ್ ಅಡಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನು ಈತನ ಜೊತೆ ಇದ್ದ ಇಬ್ಬರು ಮಕ್ಕಳು ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕಾರು ಕೂಡ ಬಸ್ ಗೆ ಗುದ್ದಿದ ಕಾರಣ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕದ್ರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top