Slide
Slide
Slide
previous arrow
next arrow

ಬೆಡಸಗಾಂವಿನಲ್ಲಿ ಟಿ.ಎಸ್.ಎಸ್.ಮಿನಿ ಸುಪರ್ ಮಾರ್ಕೆಟ್‌ ಘಟಕ ಶುಭಾರಂಭ

300x250 AD

ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಹಾಗೂ ಬೆಡಸಗಾಂವ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಿ., ಬೆಡಸಗಾಂವ ಇವರ ಸಹಯೋಗದೊಂದಿಗೆ ಟಿ.ಎಸ್.ಎಸ್. ಮಿನಿ ಸುಪರ್ ಮಾರ್ಕೆಟ್‌ನ ಘಟಕವನ್ನು ಬೆಡಸಗಾಂವ ಸೇವಾ ಸಹಕಾರಿ ಸಂಘದ ಆವಾರದಲ್ಲಿ ಡಿ. 21,ಬುಧವಾರದಂದು ದೀಪ ಬೆಳಗಿಸುವುದರ ಮೂಲಕವಾಗಿ ಟಿ.ಎಸ್.ಎಸ್. ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಟಿ.ಎಸ್.ಎಸ್. ನಿರ್ದೇಶಕರು, ಸಿಬ್ಬಂದಿಗಳು ಹಾಗೂ ಬೆಡಸಗಾಂವ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಮಚಂದ್ರ ಜಟ್ಟಯ್ಯ ಜೈನ್ ಹಾಗೂ ನಿರ್ದೇಶಕರುಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೆಡಸಗಾಂವ ಟಿ.ಎಸ್.ಎಸ್. ಮಿನಿ ಸುಪರ್ ಮಾರ್ಕೆಟ್‌ನಲ್ಲಿ ದಿನಸಿಗಳು, ಗೃಹಬಳಕೆ ಉತ್ಪನ್ನಗಳು, ಶಾಲಾ ಸಾಮಗ್ರಿಗಳು, ಇಲೆಕ್ಟ್ರಿಕಲ್ ಉಪಕರಣಗಳು, ಪಶು ಆಹಾರ ಹಾಗೂ ಸಮಗ್ರ ಕೃಷಿ ಅಗತ್ಯತೆಗಳು ಲಭ್ಯವಿರಲಿದೆ. ಶುಭಾರಂಭದ ಕೊಡುಗೆಯಾಗಿ 21.12.2022 ರಿಂದ 25.12.2022ರ ವರೆಗೆ ರೂ.499ಕ್ಕೂ ಹೆಚ್ಚಿನ ಖರೀದಿಗೆ ಖಚಿತ ಉಡುಗೊರೆ ಪಡೆಯಬಹುದಾಗಿದೆ. ಸದಸ್ಯರು ಹಾಗೂ ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top