Slide
Slide
Slide
previous arrow
next arrow

ದೇವನಳ್ಳಿಯಲ್ಲಿ ಯಶಸ್ವಿಯಾದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ

300x250 AD

ಶಿರಸಿ: ತಾಲೂಕಿನ ದೇವನಳ್ಳಿ ಪಂಚಾಯತದ ಸಭಾಭವನದಲ್ಲಿ ಇತ್ತೀಚಿಗೆ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ ನಡೆಯಿತು. ಮಕ್ಕಳ ಪರವಾಗಿ ಬೆಣಗಾಂವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕು. ಗಣೇಶ ಶಂಕರ ಗೌಡ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಮಾರ ವಾಸನ್‌ರವರು ಈ ಸಭೆಯ ಮಹತ್ವವನ್ನು ವಿವರಿಸಿ ಇದರಲ್ಲಿ ಮಕ್ಕಳಿಗೆ ಚರ್ಚಿಸಲು ಅವಕಾಶ ನೀಡಿದರು. ಬೇರೆ ಬೇರೆ ಶಾಲೆಯ ಹಾಗೂ ಅಂಗನವಾಡಿ ಮಕ್ಕಳು ತಮ್ಮ ತಮ್ಮ ಶಾಲೆಯ ಅವಶ್ಯಕತೆಯನ್ನು ವಿವರಿಸಿದರು.
ಕಿ.ಪ್ರಾ. ಶಾಲೆ ಸಣ್ಣಜೋಗಿನಕೇರಿ ಮೇಲ್ಚಾವಣಿ ರಿಪೇರಿ, ಬೆಣಗಾಂವ್ ಶಾಲೆಯ ಮೇಲ್ಚಾವಣಿ ರಿಪೇರಿ, ಬಾವಿಯ ಹೂಳು ತೆಗೆದು ಶುದ್ಧ ನೀರು ಪೂರೈಕೆ ಹಾಗೂ ಮಕ್ಕಳಿಗೆ ಕುಳಿತುಕೊಳ್ಳಲು ಬೇಂಚ್ ಅಲ್ಲದೇ ಕಂಪೌಂಡಿಗೆ ಹೊಸದಾಗಿ ಬೇಲಿ ನಿರ್ಮಾಣ,ಕಿ.ಪ್ರಾ. ಶಾಲೆ ಹಲಸಿನಕಟ್ಟಾದ ಕಂಪೌಂಡನ್ನು ಶೀಘ್ರವಾಗಿ ಮುಗಿಸುವುದು, ಮುಂಡಗನಮನೆ ಹಿ.ಪ್ರಾ. ಶಾಲೆ ಮೇಲ್ಚಾವಣಿೆ ನಿರ್ಮಾಣ, ಕಿ.ಪ್ರಾ. ಶಾಲೆ ಕರೂರು ಇದಕ್ಕೆ ಕುಡಿಯುವ ನೀರಿನ ಪೂರೈಕೆ,ಬೆಣಗಾಂವ ಶಾಲೆ ಆಟದ ಸಾಮಗ್ರಿ ಬೇಡಿಕೆ ಹೀಗೆ ಹಲವು ಬೇಡಿಕೆಗಳನ್ನು ಮಕ್ಕಳು ಇಟ್ಟಾಗ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಇದಕ್ಕೆ ಪ್ರತ್ಯೇಕ ಅನುದಾನ ಬಂದಿಲ್ಲ, ಬಂದರೆ ಒದಗಿಸುತ್ತೇವೆ ಎಂದರು.

ಅದೇ ಸ್ಥಳದಲ್ಲಿ ಅಭಿವೃದ್ಧಿ ಮುನ್ನೋಟ ಮತ್ತು ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಗ್ರಾಮಸಭೆ ನಡೆಯಿತು. ಪಂಚಾಯತ್ ಅಭಿವೃದ್ಧಿ ಅದಿಕಾರಿಗಳು ಈ ಯೋಜನೆಯಲ್ಲಿ ಯಾವ ಯಾವ ಕಾಮಗಾರಿಗಳನ್ನು ಮಾಡಬಹುದು ಎಂದು ವಿವರಿಸಿದರು. ಅಲ್ಲದೇ ಹಿಂದಿನ ವರ್ಷ ಈ ಯೋಜನೆಯಲ್ಲಿ ನಮ್ಮ ಪಂಚಾಯತಕ್ಕೆ 15 ಕೋಟಿರೂಗಳನ್ನು ಮೀಸಲಾಗಿರಿಸಿದ್ದರೂ ಪ್ರತಿಶತ 10ರ ಮೊತ್ತವೂ ಅನುಷ್ಠಾನ ಅಗಿಲ್ಲವೆಂದು ವಿಷಾದಿಸಿ ಹೆಚ್ಚಿನ ಕಾಮಗಾರಿಗಳನ್ನು ಈ ಯೋಜನೆಯನ್ನು ಹಮ್ಮಿಕೊಳ್ಳಬಹುದು ಎಂದರು.
ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಅಶೋಕ ರೊಟ್ಟಿಯವರು ನೋಡಲ್ ಅಧಿಕಾರಿಗಳಾಗಿ ಅಗಮಿಸಿದ್ದರು. ಪಂಚಾಯತ ಅಧ್ಯಕ್ಷೆ ಶ್ರೀಮತಿ ಮಾದೇವಿ ಗೌಡ, ಉಪಾಧ್ಯಕ್ಷೆ ಶ್ರೀಮತಿ ಪಾರ್ವತಿ ಚೆನ್ನಯ್ಯ ಹಾಗೂ ಪಂಚಾಯತದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮತ್ತು ಶಾಲೆಗಳಿಗೆ ಸ್ವಚ್ಛಭಾರತಯೋಜನೆ ಬಕೇಟುಗಳನ್ನು ವಿತರಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top