• Slide
  Slide
  Slide
  Slide
  previous arrow
  next arrow
 • NPS ರದ್ದುಗೊಳಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ

  300x250 AD

  ಶಿರಸಿ: ರಾಜ್ಯ ಸರಕಾರಿ ನೌಕರರಿಗೆ ಏ.1 2006 ರಲ್ಲಿ ಹಳೆಯ ಪಿಂಚಿಣಿ ವ್ಯವಸ್ಥೆಯನ್ನು ರದ್ದುಗೊಳಿಸಿ ನಿಶ್ಚಿತ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಿಂದ ಸರಕಾರಿ ನೌಕರರ ಸೇವಾ ಭದ್ರತೆ ಇಲ್ಲದಂತಾಗಿದೆ. ತಕ್ಷಣ‌ ಸರಕಾರ ಇದನ್ನು ರದ್ದುಗೊಳಿಸುವಂತೆ ಆಗ್ರಹಿಸಿ ನಡೆಸಲಾಗುತ್ತಿರುವ ಬೆಂಗಳೂರಿನ ಪ್ರೀಡಂ ಪಾರ್ಕ  ಪ್ರತಿಭಟನೆಗೆ ಶಿರಸಿಯಿಂದಲೂ ಸರಕಾರಿ ನೌಕರರು, ಹೆಸ್ಕಾಂ ನೌಕರರು ಪಾಲ್ಗೊಂಡಿದ್ದಾರೆ.

  ಶೈಕ್ಷಣಿಕ ಜಿಲ್ಲೆಯ ಜಿಲ್ಲಾಧ್ಯಕ್ಷ ಪ್ರಕಾಶ ಪೂಜಾರಿ, ಕಾರ್ಯದರ್ಶಿ ದೀಪಕ್ ಗೋಕರ್ಣ, ತಾಲೂಕು ಘಟಕದ ಅಧ್ಯಕ್ಷ ಧರ್ಮಾನಂದ ಭಟ್ಟ, ಕಾರ್ಯದರ್ಶಿ ಗಣೇಶ ಹೆಗಡೆ ಬಾಳಗಾರ, ಜನಾರ್ಧನ ಮೊಗೇರ್ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

  300x250 AD

  ಫ್ರೀಡಂ ಪಾರ್ಕ್ ನಲ್ಲಿ  ಅನಿರ್ಧಿಷ್ಟಾವಧಿಗೆ ಮುಷ್ಕರದಲ್ಲಿ‌ ಪಾಲ್ಗೊಂಡು  ಈ ಎನ್ ಪಿ ಎಸ್ ನಿಂದ ಸರಕಾರಿ ನೌಕರರ ಜೀವನಕ್ಕೆ ಭದ್ರತೆ ಇಲ್ಲದಂತಾಗಿದೆ. ಹೀಗಾಗಿ ಫಲಿತಾಂಶ ದೊರೆಯುವ ತನಕ ಹೋರಾಟ ನಡೆಸುವ ಘೋಷಣೆ‌ ಕೂಗಿದರು. ಶಿರಸಿ ತಾಲೂಕಿನಿಂದ 250 ನೌಕರರು ಭಾಗಿಯಾಗಿದ್ದು, ಮಹಿಳಾ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

  Share This
  300x250 AD
  300x250 AD
  300x250 AD
  Back to top