Slide
Slide
Slide
previous arrow
next arrow

ನಾಗಯಕ್ಷೇ ಚೌಡೇಶ್ವರಿ ಪರಿವಾರ ದೇವರ ವಾರ್ಷಿಕ ವರ್ಧಂತಿ ಸಂಪನ್ನ

300x250 AD

ಹೊನ್ನಾವರ: ತಾಲೂಕಿನ ಕುದ್ರಿಗಿ ಗ್ರಾಮದ ತೆಂಗಾರಿನ ಶ್ರೀಆಧಿಶಕ್ತಿ ಜಗನ್ಮಾತೆ ನಾಗಯಕ್ಷೇ ಚೌಡೇಶ್ವರಿ ಪರಿವಾರ ದೇವರ 13ನೇ ವರ್ಷದ ವಾರ್ಷಿಕ ವರ್ಧಂತಿ ಉತ್ಸವ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನದೊಂದಿಗೆ ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಂಕಾಳ ವೈದ್ಯ ಪಾಲ್ಗೊಂಡು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ನಂತರ ಮಾತನಾಡಿ, ಪ್ರಥಮವಾಗಿ ಈ ಸ್ಥಳಕ್ಕೆ ಭೇಟಿಯಾಗಿದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಸಕಲ ರೀತಿಯಲ್ಲೂ ಸಹಕಾರ ನೀಡುವ ಭರವಸೆ ನೀಡಿದರು. ಇದೇ ವೇಳೆ ಆಡಳಿತ ಮಂಡಳಿಯವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ತಾಲೂಕಾ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ನಾಯ್ಕ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ರಾಘವೇಂದ್ರ ನಾಯ್ಕ, ಕುದ್ರಿಗಿ ಪಂಚಾಯತ್ ಅಧ್ಯಕ್ಷೆ ಮಂಗಲಾ ನಾಯ್ಕ, ವಿ.ಎಸ್.ಎಸ್. ನಿರ್ದೇಶಕರು ಇದ್ದರು.

300x250 AD
Share This
300x250 AD
300x250 AD
300x250 AD
Back to top