Slide
Slide
Slide
previous arrow
next arrow

ಸ್ಕೌಟ್ಸ್ & ಗೈಡ್ಸ್ ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ಲಯನ್ಸ್ ವಿದ್ಯಾರ್ಥಿಗಳು

300x250 AD

ಶಿರಸಿ: ಭಾರತ ಸ್ಕೌಟ್ಸ್ & ಗೈಡ್ಸ್ ಕರ್ನಾಟಕ ರಾಜ್ಯದ ಸಂಸ್ಥೆಯಿಂದ ವಿಶ್ವದಲ್ಲಿಯೇ ಪ್ರಥಮ ಬಾರಿಗೆ ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದರೆಯ ಆಳ್ವಾಸ್ ವಿದ್ಯಾಗಿರಿಯಲ್ಲಿ ಆಯೋಜನೆಗೊಳ್ಳುತ್ತಿರುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯು ಡಿಸೆಂಬರ್ 21 ರಿಂದ 27ರವರೆಗೆ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಮಕ್ಕಳ ವ್ಯಕ್ತಿ ವಿಕಸನ, ಪ್ರತಿಭಾ ಪ್ರದರ್ಶನ, ಕೌಶಲ್ಯ ಪ್ರದರ್ಶನದ ಚಟುವಟಿಕೆಗಳ ಕಾರ್ಯಕ್ರಮವು ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದೆ.
ಈ ಜಾಂಬೂರಿ ಕಾರ್ಯಕ್ರಮದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿಯೇ ಅತಿ ದೊಡ್ಡ ತಂಡವಾಗಿ ಶಿರಸಿ ಲಯನ್ಸ್ ಶಾಲೆಯ 17 ಸ್ಕೌಟ್ ವಿದ್ಯಾರ್ಥಿಗಳು & 20 ಗೈಡ್ಸ್ ವಿದ್ಯಾರ್ಥಿಗಳು ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರು ಹಾಗೂ ಗೈಡ್ ಕ್ಯಾಪ್ಟನ್ ಶ್ರೀಮತಿ ಚೇತನಾ ಪಾವಸ್ಕರ್ ನೇತೃತ್ವದಲ್ಲಿ ಭಾಗವಹಿಸಲಿದ್ದಾರೆ.
ಶಾಲೆಯ ಸಂಗೀತ ಶಿಕ್ಷಕಿ ಶ್ರೀಮತಿ ದೀಪಾ ಶಶಾಂಕ ಹೆಗಡೆ ಹಾಗೂ ಸಹಶಿಕ್ಷಕಿ ಸೀತಾ ಭಟ್‌ ಮಾರ್ಗದರ್ಶನದಲ್ಲಿ ಗೈಡ್ಸ್ ವಿದ್ಯಾರ್ಥಿನಿಯರು ಹವ್ಯಕ ಶೈಲಿಯ ವಿವಾಹ ಪದ್ಧತಿಯ ಪ್ರಾತ್ಯಕ್ಷಿಕೆ, ಹವ್ಯಕರ ಸವಿಯಾದ ಆಹಾರ ಪದಾರ್ಥಗಳು, ಶಿರಸಿ ನೆಲದ ವಿಶಿಷ್ಟಪೂರ್ಣ ಬೇಡರ ವೇಷ ನೃತ್ಯ ಪ್ರದರ್ಶನ, ವಿಜ್ಞಾನ ಮಾದರಿ ತಯಾರಿಕೆಯ ಹ್ಯಾಕಥಾನ್ ಹಾಗೂ ಕರಕುಶಲ ಕಲೆಯನ್ನು ಜಾಂಬೂರಿಯಲ್ಲಿ ಪ್ರದರ್ಶಿಸಲಿದ್ದಾರೆ. ಜಾಂಬೂರಿಯಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಿ ಪಾಲ್ಗೊಂಡು ಶಿರಸಿ ನೆಲದ ಸಂಸ್ಕೃತಿಯನ್ನು ಪ್ರಸ್ತುತಪಡಿಸಲಿ ಎಂದು, ಶಿರಸಿ ಲಯನ್ಸ್ ಕ್ಲಬ್ ಬಳಗ, ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಿರಸಿ ಲಯನ್ಸ ಶಾಲಾ ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ಬಾಂಧವರು ಮತ್ತು ಪಾಲಕರ ವೃಂದ ಶುಭ ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top