Slide
Slide
Slide
previous arrow
next arrow

ಜಿಲ್ಲಾ ಕಾರಾಗೃಕ್ಕೆ ಕಾರವಾರ ರೋಟರಿ ಸಂಸ್ಥೆಯ ಸದಸ್ಯರ ಭೇಟಿ

300x250 AD

ಕಾರವಾರ: ರೋಟರಿ ಕ್ಲಬ್ ಸದಸ್ಯರು ಉತ್ತರ ಕನ್ನಡ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದರು. ಕಾರ್ಯಕ್ರಮಕ್ಕೆ ರಾಮಕೃಷ್ಣ ಆಶ್ರಮದ ಭಾವೇಶಾನಂದ ಸ್ವಾಮೀಜಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮನಸ್ಸು ಪರಿವರ್ತನಾ ಕೇಂದ್ರದ ಸದಸ್ಯರನ್ನು ಉದ್ದೇಶಿಸಿ, ಕೆಲವೊಂದು ಕೆಟ್ಟ ಘಳಿಗೆಯಲ್ಲಿ ಅರಿವಿಲ್ಲದೇ ಮಾಡಿದ ತಪ್ಪಿನಿಂದ ತಾವೆಲ್ಲರೂ ಇಲ್ಲಿಗೆ ಬಂದಿರುವಿರಿ, ಇಲ್ಲಿ ಇರುವಷ್ಟು ದಿನ ನಿಮ್ಮ ನಿಮ್ಮ ಮನಸ್ಸಿಗೆ ಶಾಂತಿ, ಸೌಹರ್ದತೆಯ ಪಾಠವನ್ನು ಕಲಿತು ನಿಮ್ಮ ಮುಂದಿನ ಜೀವನದಲ್ಲಿ ಒಳ್ಳೆಯ ನಾಗರಿಕರಾಗಿ ಬಾಳಿರಿ ಎಂದು ಆಶೀರ್ವದಿಸಿದರು.
ಪ್ರಾರಂಭದಲ್ಲಿ ಕಾರಾಗೃಹದ ಸಿಬ್ಬಂದಿ ರಾಘವೇಂದ್ರ ಶಾನಭಾಗರವರು ಎಲ್ಲರನ್ನು ಸ್ವಾಗತಿಸಿ ಕಾರಾಗೃಹದ ವ್ಯವಸ್ಥೆಯನ್ನು ವಿವರಿಸುತ್ತ ಕರ್ನಾಟಕದ ಮೊಟ್ಟಮೊದಲ ಆರು ಸಾವಿರಕ್ಕಿಂತ ಹೆಚ್ಚಿನ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ ಹಾಗೂ ಎರಡು ಕಂಪ್ಯೂಟರಗಳಿoದ ಕೂಡಿದ ಡಿಜಿಟಲ್ ಲೈಬ್ರರಿ ಹೊಂದಿರುವ ಕಾರಾಗೃಹವಿದು, ಇಲ್ಲಿರುವವರಿಗೆ ನಾವು ಕೈದಿಗಳೆಂದು ಪರಿಗಣಿಸಿದೇ ‘ಮನಪರಿರ್ತನಾ ಕೇಂದ್ರದ ಸದಸ್ಯರು’ ಎಂದು ಭಾವಿಸಿಕೊಳ್ಳುತ್ತೇವೆ. ಇಲ್ಲಿರುವವರೆಲ್ಲರೂ ಶಾಂತಿ ಸೌಹಾರ್ದದಿಂದ ಬಾಳುತ್ತಾರೆ. ಇದಕ್ಕೆ ನಮ್ಮ ಜೈಲಿನ ಮುಖ್ಯಸ್ಥರಾದ ಈರಣ್ಣ ರಂಗಾಪುರ ರವರ ಪಾತ್ರ ಬಹುಮುಖ್ಯವಾದದ್ದು ಎಂದರು.
ಸಂಸ್ಥೆಯ ಕಾರ್ಯದರ್ಶಿ ಗುರುದತ್ತ ಬಂಟ ಸಭಿಕರನ್ನು ಉದ್ದೇಶಿಸಿ, ಹಿಂದಿನ ಘಟನೆಗಳನ್ನು ಮರೆತು ಒಳ್ಳೆಯ ನಡತೆಯಿಂದ ಇದ್ದು ನಿಮ್ಮ ನಿಮ್ಮ ಶಿಕ್ಷೆಯನ್ನು ಕಡಿತಗೊಳಿಸಿಕೊಂಡು ಆದಷ್ಟು ಬೇಗ ಹೊರಜಗತ್ತಿಗೆ ಬರಲು ಪ್ರಯತ್ನಿಸಿ ಎಂದರು. ಅಧ್ಯಕ್ಷ ರಾಘವೆಂದ್ರ ಜಿ.ಪ್ರಭು ಅವರು ಈ ಕಾರ್ಯಕ್ರಮ ಆಯೋಜಿಸಲು ಅನುವು ಮಾಡಿಕೊಟ್ಟ ಜೈಲ್ ಅಧೀಕ್ಷ ಈರಣ್ಣ ರಂಗಾಪುರ ಅವರಿಗೂ ಹಾಗೂ ದಾನಿಗಳನ್ನು ಅಭಿನಂದಿಸುತ್ತ, ಕ್ಷಣಿಕ ಗಳಿಗೆಯಲ್ಲಿ ಅರಿತೇ-ಅರಿಯದೇ ಮಾಡಿರುವ ತಪ್ಪಿನಿಂದ ತಾವೆಲ್ಲರೂ ಇಲ್ಲಿಗೆ ಬಂದಿರಬಹುದು ಅವುಗಳನ್ನು ಮರೆತು ಮುಂದೆ ನಿಮ್ಮ ಜೀವನ ಒಳ್ಳೆಯ ರೀತಿಯಿಂದ ರೂಪಿಸಿಕೊಳ್ಳಬೇಕು ಎಂದರು.
ಜೈಲ್ ಅಧೀಕ್ಷಕ ಈರಣ್ಣ ರಂಗಾಪುರರವರು ತಾಯಿ ಹೃದಯಿ ರೋಟರಿ ಸದಸ್ಯರು ನಮ್ಮಲಿಗೆ ಬಂದಿರುವುದು ನಮ್ಮೆಲ್ಲರ ಸೌಭಾಗ್ಯ. ನಮ್ಮ ಮನಪರಿವರ್ತನಾ ಕೇಂದ್ರ ಸದಸ್ಯರು ಒಳ್ಳೆಯ ನಡತೆಯಿಂದ ವರ್ತಿಸುತ್ತಾರೆ. ಇವರೆಲ್ಲ ಸಾಮಾನ್ಯರಲ್ಲ, ಓದು ಬರಹ ಬಲ್ಲವರು, ಕೆಲವರು ಪದವೀಧರರೂ, ಸ್ನಾತಕೋತ್ತರ ಪದವಿಧರರೂ ಇದ್ದಾರೆ. ಅವರಿಗೆ ಯಾವುದೇ ತೊಂದರೆಯಾಗದoತೆ ನಾವು ನೋಡಿಕೊಳ್ಳುತ್ತಿದ್ದೇವೆ ಎಂದು ಪ್ರೀತಿಯಿಂದ ಹೇಳಿದರು.
ಈ ಸದಸ್ಯರಲ್ಲಿಯೇ ಇಬ್ಬರು ತಾಯಿ ಕುರಿತಾಗಿ ತುಂಬಾ ಭಾವನಾತ್ಮಕವಾಗಿ ಮಾತನಾಡಿದರು. ಮತ್ತಿಬ್ಬರು ಒಳ್ಳೆಯ ಹಾಡುಗಳನ್ನು ಹೇಳಿದರು. ಈ ನಾಲ್ಕೂ ಸದಸ್ಯರಿಗೂ ರೋಟರಿ ಸಂಸ್ಥೆ ವತಿಯಿಂದ ಟೀಶರ್ಟ್ ನೀಡಲಾಯಿತು ಹಾಗೂ ಎಲ್ಲರಿಗೂ ಹಣ್ಣು- ಹಂಪಲುಗಳನ್ನು ನೀಡಲಾಯಿತು. ಹಣ್ಣು- ಹಂಪಲುಗಳನ್ನು ಅನುಪ ಪ್ರಭುರವರು ಪ್ರಾಯೋಜಿಸಿದ್ದರು.
ಸಂಸ್ಥೆ ವತಿಯಿಂದ ನೀರು ಶೇಖರಣೆ ವ್ಯವಸ್ಥೆಗಾಗಿ 500 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನೀಡಲಾಯಿತು. ಸದ್ರಿ ನೀರಿನ ಟ್ಯಾಂಕ್‌ನ್ನು ಗಣಪತಿ ವೆರ್ಣೇಕರರವರು ಪ್ರಾಯೋಜಿಸಿದ್ದರು. ಈ ಸಂದರ್ಭದಲ್ಲಿ ಭಾವೇಶಾನಂದ ಸ್ವಾಮೀಜಿಯವರನ್ನು ಹಾಗೂ ಜೈಲ್ ಅಧೀಕ್ಷ ಈರಣ್ಣ ರಂಗಾಪುರ ರವನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರಾದ ಕೆ.ಡಿ.ಪೆಡ್ನೇಕರ, ಪ್ರಸನ್ನ ತೆಂಡೂಲ್ಕರ, ಮಿನಿನ ಪುಡ್ತಾಡೊ, ಶೈಲೇಶ ಹಳದಿಪೂರಕರ, ಅಮರನಾಥ ಶೆಟ್ಟಿ, ಸುನೀಲ ಸೋನಿ, ಮಾರುತಿ ಕಾಮತ, ಸುರೇಶ ನಾಯ್ಕ, ರಾಮಚಂದ್ರ ಪಡವಳಕರ, ಗಣೇಶ ಪೈಗರಡಿ, ಮಾಧವ ನೆವರೇಕರ, ಗೋವಿಂದ್ರಾಯ ಮಾಂಜ್ರೇಕರ, ರೋರ‍್ಯಾಕ್ಟರ್ ನಿತೀನ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ.ಸಮೀರಕುಮಾರ ನಾಯಕ ನಡೆಸಿಕೊಟ್ಟರು.

300x250 AD
Share This
300x250 AD
300x250 AD
300x250 AD
Back to top