ಶಿರಸಿ: ಆಳ್ವಾ ಫೌಂಡೇಶನ್ ವತಿಯಿಂದ ನಂದನ ನಿಲೇಕಣಿ ಕುಟುಂಬದ ಪ್ರಾಯೋಜಕತ್ವದಲ್ಲಿ ತಾಲೂಕಿನ ಬಂಡಲ ಮತ್ತು ಕೋಳಗಿಬಿಸ ಸರ್ಕಾರಿ ಪ್ರಾಥಮಿಕ ಶಾಲೆಗೆ ಕೊಡುಗೆಯಾಗಿ ನೀಡಿದ ಆಟದ ಪರಿಕರಗಳನ್ನು ಆಳ್ವಾ ಫೌಂಡೇಶನ್ ಟ್ರಸ್ಟಿ ನಿವೇದಿತ್ ಆಳ್ವಾ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಿಗೆ, ಅದರಲ್ಲಿಯೂ ಗ್ರಾಮೀಣ ಶಾಲೆಗಳಿಗೆ ಆಟೋಪಕರಣಗಳನ್ನು ನೀಡಿದ್ದು ಆ ಶಾಲೆಯ ಮಕ್ಕಳ ಮುಖದಲ್ಲಿ ನೋಡಲು ಸಿಗುವ ಖುಷಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆ ಮಕ್ಕಳ ಮುಖದಲ್ಲಿ ಖುಷಿಯನ್ನು ನೋಡಿ ನನಗೆ ಆತ್ಮಕ್ಕೆ ಸಂತೋಷ ಸಿಗುತ್ತದೆ. ಇಂದಿನ ದಿನಗಳಲ್ಲಿ ಮಕ್ಕಳಿಗೆ ಕಲಿಕೆಯ ಜೊತೆಯಲ್ಲಿ ಆಟೋಪಕರಣಗಳ ಆಟವು ಪ್ರಮುಖವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಕೀಲರಾದ ಸತೀಶ ನಾಯ್ಕ, ದೇವರಾಜ ಮರಾಠಿ, ಕಿರಣ ಮರಾಠಿ, ಪ್ರವೀಣ ಗೌಡ, ನಾಗರಾಜ ಮಡಿವಾಳ, ಸುದೀರ ಗೌಡ, ಚಂದ್ರು ಮಡಿವಾಳ, ಡಿ.ವಿ. ಹೆಗಡೆ ಮತ್ತು ಊರ ಹಿರಿಯರು, ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷರು, ಶಾಲಾ ಶಿಕ್ಷಕ ವೃಂದ ಹಾಗೂ ಮಕ್ಕಳು ಇದ್ದರು.