Slide
Slide
Slide
previous arrow
next arrow

ವಿಜಯ ದಿವಸ ಆಚರಣೆ: ಸೈನಿಕರ ತ್ಯಾಗದ ಸ್ಮರಣೆ

300x250 AD

ಕಾರವಾರ: ಪಾಕಿಸ್ತಾನಿ ಸೈನಿಕರನ್ನ ಶರಣಾಗಿಸಿ, ಯುದ್ಧದಲ್ಲಿ ಭಾರತ ಗೆಲುವು ದಾಖಲಿಸುವ ಮೂಲಕ ಬಾಂಗ್ಲಾದೇಶದ ಉಗಮಕ್ಕೆ ಸಾಕ್ಷಿಯಾದ ವಿಜಯ ದಿವಸವನ್ನು ನಗರದಲ್ಲಿ ಆಚರಿಸಲಾಯಿತು.
ನಗರದ ವಾರ್‌ಶಿಪ್ ಮ್ಯೂಸಿಯಂ ಆವರಣದಲ್ಲಿ ನೌಕಾನೆಲೆಯ ಮಟೇರಿಯಲ್ ಅಸೋಸಿಯೇಷನ್ ಹಾಗೂ ಸೈನಿಕ ಬೋರ್ಡ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಮಟೇರಿಯಲ್ ಕಮೋಡೋರ್ ವಿಜು ಸ್ಯಾಮ್ಯುಯೆಲ್ ಹಾಗೂ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮಕ್ಕೂ ಮುನ್ನ ವಾರ್‌ಶಿಪ್ ಮ್ಯೂಸಿಯಂ ಆವರಣದಲ್ಲಿ ಸ್ಥಾಪಿಸಲಾಗಿರುವ ಪರಮವೀರ ಚಕ್ರ ಪುರಸ್ಕೃತ ಮೇಜರ್ ರಾಮಾ ರಾಘೋಬಾ ರಾಣೆ ಅವರ ಪುತ್ಥಳಿಗೆ ಪುಷ್ಪನಮನ ಅರ್ಪಿಸಲಾಯಿತು. ಹುತಾತ್ಮರಾದ ಸೈನಿಕರ ಸಂಬಂಧಿಗಳಾದ ಮನೋರತಿಭಾಯಿ ಹಣಕೋಣ, ರೇಷ್ಮಾ ಜಗನಕೊಪ್ಪ ಹಳಿಯಾಳ, ಸುಕೇರಿ ಕಠಿಣಕೋಣ, ಗೀತಾ ರಮೇಶ ಕೋಳಂಬರ್, ಸೈನಿಕ ವಿಜಯಾನಂದ ನಾಯ್ಕ ತಾಯಿ ವಿದ್ಯಾ ಎಸ್.ನಾಯ್ಕ ಅವರಿಗೆ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ವಿಜು ಸ್ಯಾಮ್ಯುಯೆಲ್, ದೇಶ ಅಭಿವೃದ್ಧಿಯತ್ತ ಸಾಗಬೇಕಾದರೆ ಗಡಿಗಳನ್ನ ಭದ್ರಗೊಳಿಸಬೇಕಾದುದು ಅತ್ಯಗತ್ಯವಾಗಿದ್ದು, ದೇಶದ ಹೆಮ್ಮೆಯ ಸೈನಿಕರು ಈ ಕಾರ್ಯವನ್ನ ಯಶಸ್ವಿಯಾಗಿ ಮಾಡುತ್ತಿದ್ದಾರೆ. ಅವರ ಈ ಸೇವೆಯಿಂದಾಗಿ ನಾವು ಇಂದು ನೆಮ್ಮದಿಯಿಂದ ನಿದ್ರಿಸುವುದು ಸಾಧ್ಯವಾಗಿದ್ದು ಭದ್ರತೆ ಮತ್ತು ಅಭಿವೃದ್ಧಿ ಒಂದೇ ನಾಣ್ಯದ ಎರಡು ಮುಖಗಳಂತೆ ಒಂದಕ್ಕೊOದು ಪೂರಕವಾಗಿವೆ. ಭಾರತ ಸರ್ಕಾರದ ಆತ್ಮನಿರ್ಭರ ಭಾರತಕ್ಕೆ ನೀಡುತ್ತಿರುವ ಹೆಚ್ಚಿನ ಪ್ರಾಮುಖ್ಯತೆಗಳಿಂದಾಗಿ ರಕ್ಷಣಾ ಕ್ಷೇತ್ರದ ಉತ್ಪಾದನೆಗಳಲ್ಲಿ ಹೆಚ್ಚಿನವರಿಗೆ ಅವಕಾಶ ಸಿಗುವಂತಾಗಿದೆ ಎಂದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಮಾತನಾಡಿ, ಕೇವಲ ಯುದ್ಧವಷ್ಟೇ ಅಲ್ಲ ಇಂದು ಹೊಸ ಹೊಸ ಸವಾಲು ದೇಶದ ಮುಂದೆ ಇದೆ. ಇವುಗಳಲ್ಲಿ ಸೈಬರ್ ವಾರ್ ಮುಖ್ಯವಾಗಿದೆ. ಇದು ದೇಶದ ಜನತೆಗೆ ಆತಂಕದ ಸ್ಥಿತಿ ತಂದಿಡುವ ಸಾಧ್ಯತೆ ಇದೆ. ಯುವ ಜನ ಅದನ್ನು ಎದುರಿಸಲು ಸಿದ್ದವಾಗಿರಬೇಕು. ಶಿಸ್ತು ಎನ್ನುವುದು ಕೇವಲ ಸೈನಿಕರಿಗೆ ಮಾತ್ರವಲ್ಲ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳುವುದು ಮುಖ್ಯ. ಕೇವಲ ಯುದ್ಧದಲ್ಲಿ ಗೆದ್ದ ವಿಚಾರವನ್ನಷ್ಟೇ ಅಲ್ಲದೆ, ಬಾಂಗ್ಲಾ ಯುಮೋಚನೆ ವೇಳೆ ಶರಣಾಗತರಾದ ಬಾಂಗ್ಲಾ ಸೈನಿಕರಿಗೆ ಗೌರವ ನೀಡಿ ವಾಪಸ್ ಕಳಿಸಿದ್ದೇವೆ. ಇದು ನಮ್ಮ ಸಂಸ್ಕೃತಿಯಾಗಿದೆ. ಅದಕ್ಕೆ ನಾವು ಹೆಮ್ಮೆ ಪಡಬೇಕು ಎಂದರು.
ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿ, ಇಂಡೋ- ಪಾಕ್ ಯುದ್ಧದಲ್ಲಿ ಕಾರವಾರದವರು ಇದ್ದರು ಎನ್ನುವುದು ಹೆಮ್ಮೆಯ ಸಂಗತಿ. ಯುವಪೀಳಿಗೆ ಸೈನ್ಯಕ್ಕೆ ಸೇರಿ ದೇಶದ ಸೇವೆ ಮಾಡುವ ಕಾರ್ಯಕ್ಕೆ ಮುಂದಾಗಬೇಕು ಎಂದರು.
ನಿವೃತ್ತ ಸೇನಾಧಿಕಾರಿ ಎಸ್.ಎಫ್.ಗಾಂವಕರ್, ಸೈನಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಇಂದೂ ಪ್ರಭಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿ.ಪಂ ಸಿಇಒ ಈಶ್ವರಕುಮಾರ್ ಖಂಡೂ, ಎನ್‌ಸಿಸಿ ಕಮಾಂಡಿoಗ್ ಆಫೀಸರ್ ಸತ್ಯನಾಥ ಭೋಸ್ಲೆ ಇದ್ದರು.

300x250 AD
Share This
300x250 AD
300x250 AD
300x250 AD
Back to top