Slide
Slide
Slide
previous arrow
next arrow

ಶಾಂತಾರಾಮ ನಾಯಕರು ಅಂಕೋಲೆಯ ಇತಿಹಾಸವನ್ನು ಕಂಡು ಉಂಡು ಬರೆದವರು: ವಿಠ್ಠಲ ಗಾಂವಕರ

300x250 AD

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ 22ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವನ್ನ ಶಾಂತಾರಾಮ ನಾಯಕ ಹಿಚಕಡ ಇವರಿಗೆ ಸಂದಿರುವುದು ನಿಜಕ್ಕೂ ಜಿಲ್ಲೆಯ ಜನರು ಹೆಮ್ಮೆ ಪಡುವ ಆಯ್ಕೆಯಾಗಿದೆ. ನಾಯಕರ ಸಾಹಿತ್ಯ ಸೇವೆ ಗುರುತಿಸುವಂತಹದು. ಅದಕ್ಕೂ ಹೆಚ್ಚಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಾರ್ಡೋಲಿ ಎಂದು ಕರೆಸಿಕೊಂಡ ಅಂಕೋಲೆಯ ಸಂಗ್ರಾಮದ ಇತಿಹಾಸವನ್ನು ಕಂಡು ಉಂಡು ಬರೆದವರು ಎಂದು ಬಾರ್ಡೋಲಿ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ವಿಠ್ಠಲ ಗಾಂವಕರ ಹೇಳಿದರು.
ಶಾಂತಾರಾಮ ನಾಯಕರವರನ್ನು ಪ್ರತಿಷ್ಠಾನದಿಂದ ಅವರ ಮನೆಯಂಗಳದಲ್ಲಿ ಆತ್ಮೀಯವಾಗಿ ಗೌರವಿಸಿ ಮಾತನಾಡಿದ ಅವರು, ‘ಚರಿತ್ರೆಯಲ್ಲಿ ಮರೆತವರು’, ‘ಸ್ವಾತಂತ್ರ್ಯ ಸಂಗ್ರಾಮದ ಹೊರಳು ನೋಟ’, ‘ಸ್ವಾತಂತ್ರ್ಯ ಹೋರಾಟದಲ್ಲಿ ನಾಡವರು’, ‘ಸ್ವಾತಂತ್ರ್ಯ ಹೋರಾಟದಲ್ಲಿ ಅಂಕೋಲೆ’, ‘ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು’ ಈ ಐದು ಕೃತಿಗಳು ಸರ್ವಕಾಲದಲ್ಲೂ ಅಂಕೋಲೆಯ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುತ್ತವೆ. ಅಂಕೋಲೆಯ ಬಗ್ಗೆ ದೇಶದ ಜನರಲ್ಲಿ ಗೌರವ ಭಾವವನ್ನು ಮೂಡಿಸುತ್ತವೆ ಎಂದರು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಮಹಾಂತೇಶ ರೇವಡಿ, ರಮೇಶ ಗಾಂವಕಾರ, ಹಿರಿಯರಾದ ಮಹಾದೇವ ಮಾಸ್ತರ, ಮಾಧವ ಆರ್.ನಾಯಕ ಹಾಗೂ ಇತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top