Slide
Slide
Slide
previous arrow
next arrow

ಕೃಷಿಕರನ್ನು, ಕೃಷಿ‌ ಭೂಮಿಯನ್ನು ಉಳಿಸುವ ದೊಡ್ಡ‌ ಜವಾಬ್ದಾರಿ ಸಹಕಾರಿ ಸಂಘಗಳ ಮೇಲಿದೆ: ರಾಮಕೃಷ್ಣ ಹೆಗಡೆ‌ ಕಡವೆ

300x250 AD

ಶಿರಸಿ: ಸಹಕಾರ ಕ್ಷೇತ್ರ ವಿಸ್ತಾರಗೊಳ್ಳುವುದರೊಂದಿಗೆ ಇತ್ತೀಚೆಗೆ ಸಾಕಷ್ಟು ಸಮಸ್ಯೆಗಳನ್ನೂ ಎದುರಿಸುತ್ತಿದೆ. ಹೆಚ್ಚಿನ ಜನರು ಕೃಷಿಯಲ್ಲಿ ತೊಡಗುವಂತೆ ಮಾಡುವುದು ಹಾಗೂ ಕೃಷಿಕರು ತಮ್ಮ ಭೂಮಿಯನ್ನು ತಮ್ಮಲ್ಲಿಯೇ ಉಳಿಸಿಕೊಂಡು ಹೋಗುವಂತೆ ಕ್ರಮಕೈಗೊಳ್ಳುವುದು ಪ್ರಸ್ತುತ ಸಹಕಾರ ಸಂಘಗಳ ಮೇಲಿರುವ ಅತಿ ದೊಡ್ಡ ಜವಾಬ್ದಾರಿಯಾಗಿದೆ ಎಂದು ಉತ್ತರಕನ್ನಡ ಜಿಲ್ಲೆಯ ಕೃಷಿ, ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಹೇಳಿದರು.
ಅವರು ನಗರದ ಟಿಆರ್‌ಸಿ ಸಭಾಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ ಒಕ್ಕೂಟದ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿಯಲ್ಲಿ ಆಧುನಿಕತೆ ಅಳವಡಿಸಿ ಕೃಷಿಯನ್ನು ಲಾಭದಾಯಕ ಉದ್ಯಮವಾಗಿಸುವಂತೆ ಕಾರ್ಯವ್ಯವಹಾರ ಕೈಗೊಳ್ಳುವುದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆದ್ಯತೆಯಾಗಿದೆ. ಒಕ್ಕೂಟ ನಮ್ಮ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಗೆ ಹಾಗೂ ಅದರ ಸದಸ್ಯರ ಅನುಕೂಲತೆಗಾಗಿ ರಚಿತವಾಗಿದ್ದು, ಅವರ ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದೆ. ಇಂದಿನ ದಿನದಲ್ಲಿ ಸಂಘಟನಾತ್ಮಕ ಬೇಡಿಕೆ ಹಾಗೂ ಹೋರಾಟಕ್ಕೆ ಹೆಚ್ಚು ಮಹತ್ವ ಇರುವುದರಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಇಂತಹ ಒಕ್ಕೂಟಗಳ ರಚನೆಯಿಂದ ಸುಲಭ ಸಾಧ್ಯವಾಗಲಿದೆ ಎಂದರು.
ಒಕ್ಕೂಟವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹಾಗೂ ಸದಸ್ಯರಿಗೆ ಉಂಟಾಗುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಕ್ರಮಕ್ಕಾಗಿ ಪ್ರಯತ್ನಿಸುತ್ತಿದೆ. ಈಗಾಗಲೇ ಒಕ್ಕೂಟದ ವತಿಯಿಂದ ಸಲ್ಲಿಸಿದ ಅನೇಕ ಬೇಡಿಕೆಗಳಿಗೆ ಪರಿಹಾರ ದೊರಕಿದೆ. ಇದರಲ್ಲಿ ಯಶಸ್ವಿನೀ ವಿಮಾ ಯೋಜನೆ ಪುನ: ಜಾರಿಗೊಂಡಿರುವೂ ಸೇರಿದೆ ಎಂದು ಹೇಳಿದರು.

ಈ ಸಭೆಯಲ್ಲಿ‌ ಕೈಗೊಂಡ ಹಲವು ಪ್ರಮುಖ ನಿರ್ಣಯಗಳು:
• ದಿನಾಂಕ 10-07-2018ಕ್ಕೆ ಬಾಕಿ ಇರುವ ರೈತರ ಬೆಳೆಸಾಲದ ಪೈಕಿ ರೂ. 1 ಲಕ್ಷದ ವರೆಗಿನ ಹಣವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿ ಸರಿಸುಮಾರು 4 ವರ್ಷಗಳೇ ಕಳೆದರೂ ಸಹ ಇದುವರೆಗೂ ಕೆಲ ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಸೌಲಭ್ಯ ದೊರಕಿರುವುದಿಲ್ಲ. ಉತ್ತರಕನ್ನಡ ಜಿಲ್ಲೆಯಿಂದ 1,180 ಕೃಷಿಕರ ಹೆಸರು ಹಣ ಬಿಡುಗಡೆಯ ಗ್ರೀನ್ ಲೀಸ್ಟ್ಗೆ ಅರ್ಹತೆ ಹೊಂದಿ ಸುಮಾರು ರೂ.7.47 ಕೋಟಿ ಹಣ ಬಿಡುಗಡೆಗೆ  8 ತಿಂಗಳಿಂದ ಬಾಕಿ ಇದೆ. ಈ ಪೈಕಿ ಸುಮಾರು 774 ಅರ್ಹ ಫಲಾನುಭವಿಗಳು ಗ್ರೀನ್ ಲೀಸ್ಟ್ಗೆ ಬರಲು ಬಾಕಿ ಇದ್ದು ಇನ್ನೂ ಸಹ ಸುಮಾರು ರೂ. 5.07 ಕೋಟಿಯಷ್ಟು ಹಣ ಬಿಡುಗಡೆಗೊಂಡಿರುವುದಿಲ್ಲ. ಜನಪ್ರತಿನಿಧಿಗಳ ಹಾಗೂ ಇಲಾಖಾ ಮಟ್ಟದಲ್ಲಿ ಈ ಬಗ್ಗೆ ಸಾಕಷ್ಟು ಪತ್ರ ವ್ಯವಹಾರ ನಡೆಸಿದರೂ ಸಹ ಪ್ರಯೋಜನವಾಗಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಸರ್ಕಾರ ಮನ್ನಾ ಹಣ ಬಿಡುಗಡೆಗೊಳಿಸದಿದ್ದಲ್ಲಿ ಹೋರಾಟ ಕೈಗೊಳ್ಳಲು ನಿರ್ಣಯಿಸಲಾಯಿತು.
• ಸನ್ 2021-22ನೇ ಸಾಲಿನ ಪ್ರಧಾನಮಂತ್ರಿ ಹವಾಮಾನಾಧಾರಿತ ಬೆಳೆ ವಿಮಾ ಯೋಜನೆಯಡಿಯಲ್ಲಿ ರೈತರಿಗೆ ಅವೈಜ್ಞಾನಿಕವಾಗಿ ವಿಮಾ ಪರಿಹಾರ ದೊರಕಿದೆ. ಬೆಳೆ ವಿಮೆ ತುಂಬಿದ ಕೃಷಿಕರಿಗೆ ಹವಾಮಾನ ಮಾಹಿತಿಗಳನ್ನು ಸಮರ್ಪಕ ಹಾಗೂ ಪಾರದರ್ಶಕವಾಗಿ ಸಕಾಲಕ್ಕೆ ಕೆ.ಎಸ್.ಎನ್.ಡಿ.ಎಮ್.ಸಿ ಸಂಸ್ಥೆಯವರು ತಮ್ಮ ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಬೇಕು ಎನ್ನುವ ಹಕ್ಕೊತ್ತಾಯ ಕೈಗೊಳ್ಳಲಾಯಿತು.
• ಕೇಂದ್ರ ಸರ್ಕಾರವು ಕೃಷಿ ಪತ್ತಿನ ಸಹಕಾರ ಸಂಘಗಳ ಆದಯದ ಮೇಲೆ ಆದಾಯಕರ ಅನ್ವಯ ಮಾಡುತ್ತಿದ್ದು, ಈ ಆದಾಯಕರದ ಭಾರ ಸಹಕಾರ ಸಂಘಗಳ ಕಾರ್ಯಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಅಲ್ಲದೆ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನಲ್ಲಿ ಗುಂತಾಯಿಸಿದ ಠೇವಣಿÀ ಮೇಲಿನ ಬಡ್ಡಿಗೂ ಸಹ ಆದಾಯಕರ ಸೆಕ್ಷನ್ 80ಪಿ ಅಡಿಯಲ್ಲಿ ಆದಾಯಕರ ಆಕರಣೆ ಮಾಡಲಾಗುತ್ತಿದೆ. ಈ ಕ್ರಮ ಕೂಡಲೇ ಕೈಬಿಡುವಂತೆ ಒತ್ತಾಯಿಸಲಾಯಿತು.
• ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತಮ್ಮ ಸ್ವಂತ ಬಂಡವಾಳದಿAದ ರೈತರಿಗೆ ನೀಡುತ್ತಿರುವ ಕೃಷಿಯೇತರ ಸಾಲಗಳಿಗೆ ಕೃಷಿಕರ ಪಹಣಿಯಲ್ಲಿ ಬೋಜಾ ದಾಖಲಿಸುವ ಪದ್ದತಿಯನ್ನು ಕೃಷಿ ಸಾಲದ ಮಾದರಿಯಲ್ಲಿ ಫ್ರೂಟ್ಸ್ ತಂತ್ರಾAಶದಲ್ಲಿಯೇ ದಾಖಲಿಸಲು ಅವಕಾಶ ಮಾಡಿಕೊಡಲು ಕಂದಾಯ ಸಚಿವಾಲಯಕ್ಕೆ ವಿನಂತಿಸಲು ನಿರ್ಣಯ ಕೈಗೊಳ್ಳಲಾಯಿತು.

300x250 AD

ಈ ಸಂದರ್ಭದಲ್ಲಿ ತ್ಯಾಗಲಿ ಸೊಸೈಟಿ ಅಧ್ಯಕ್ಷ ಹಾಗೂ ಒಕ್ಕೂಟದ ಕಾರ್ಯದರ್ಶಿ ಎನ್.ಬಿ. ಹೆಗಡೆ, ಮತ್ತೀಹಳ್ಳಿ, ಮತ್ತಿಘಟ್ಟಾ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಬಿಸಲಕೊಪ್ಪ ಸೊಸೈಟಿ ಅಧ್ಯಕ್ಷ ಎಸ್.ಎನ್. ಭಟ್ಟ ಬಿಸಲಕೊಪ್ಪ, ಟಿಆರ್‌ಸಿ ನಿರ್ದೇಶಕ ಜಿ.ವಿ. ಜೋಶಿ, ಕಾಗೇರಿ ವೇದಿಕೆಯಲ್ಲಿದ್ದರು.
ಟಿಆರ್‌ಸಿ ಮಹಿಳಾ ಸಿಬ್ಬಂದಿ ಪ್ರಾರ್ಥಿಸಿದರು. ಜಿ.ಜಿ.ಹೆಗಡೆ ಕುರುವಣಿಗೆ ನಿರ್ವಹಿಸಿದರು. ನೆಲೆಮಾಂವ್ ಸೇವಾ ಸಹಕಾರಿ ಸಂಘದ ಕಾರ್ಯದರ್ಶಿ ವಿ.ಜಿ.ಹೆಗಡೆ ಮಠಗಾನ್ ವಂದಿಸಿದರು.

Share This
300x250 AD
300x250 AD
300x250 AD
Back to top