• Slide
    Slide
    Slide
    previous arrow
    next arrow
  • ಬಿ.ಜಿ.ಹೆಗಡೆ ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ್ದರು: ಶಾಂತಾರಾಮ ಸಿದ್ದಿ

    300x250 AD

    ಯಲ್ಲಾಪುರ: ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ರೀತಿಯಲ್ಲಿ ದಿವಂಗತ ಬಿ.ಜಿ.ಹೆಗಡೆ ಗೇರಾಳ ಅವರು ಹಲವಾರು ಕ್ಷೇತ್ರದಲ್ಲಿ ತಮ್ಮ ಚಾಪನ್ನು ಮೂಡಿಸಿದ್ದರು. ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನನ್ನು ಪ್ರಾಮಾಣಿಕವಾಗಿ ತೊಡಗಿಸಿಕೊಂಡು ನಿಸ್ವಾರ್ಥ ಮನಸ್ಸಿನಿಂದ ಕೆಲಸ ಮಾಡಿದ ತೀರಾ ಅಪರೂಪದ ವ್ಯಕ್ತಿಯಾಗಿದ್ದರು ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
    ಅವರು ಶನಿವಾರ ಪಟ್ಟಣದ ಅರಣ್ಯ ಇಲಾಖೆಯ ವಿಶ್ರಾಂತಿ ಗೃಹದಲ್ಲಿ ಹಮ್ಮಿಕೊಂಡಿದ್ದ ದಿವಂಗತ ಬಿ.ಜಿ.ಹೆಗಡೆ ಗೇರಾಳ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತಿದ್ದರು. ಯಾವ ವಿಷಯವನ್ನಾದರೂ ಪ್ರಖರವಾಗಿ ಪ್ರತಿಪಾದಿಸುವ ಸಾಮರ್ಥ್ಯವನ್ನು ಬಿ.ಜಿ.ಹೆಗಡೆಯವರು ಹೊಂದಿದ್ದರು. ಕೊಡುಗೈ ದಾನಿಯಾಗಿದ್ದು, ಕೈಗೊಂಡ ಕೆಲಸವನ್ನು ಸಮರ್ಪಕವಾಗಿ ಮುಗಿಸುವ ಶಕ್ತಿಯನ್ನು ಅವರು ಹೊಂದಿದ್ದರು. ಉತ್ತಮ ಕೃಷಿಕರಾಗಿ, ಪರಿಸರ ಪ್ರಿಯರಾಗಿ, ಸಹಕಾರಿ, ರಾಜಕಿಯ, ಧಾರ್ಮಿಕ, ಅಡಿಕೆ ವ್ಯವಹಾರ ಮತ್ತಿತರ ಹತ್ತು ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದರು. ಅವರ ಅಕಾಲಿಕ ಮರಣ ಸಮಾಜಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ ಎಂದರು.
    ಶಿರಸಿಯ ವೃಕ್ಷಲಕ್ಷ ಆಂದೋಲನದ ಪ್ರಮುಖ ಅನಂತ ಹೆಗಡೆ ಅಶೀಸರ ಮಾತನಾಡಿ, ಅರಣ್ಯ ಮತ್ತು ವೈವಿಧ್ಯ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಬಿ ಜಿ ಹೆಗಡೆಯವರು, ಸಮಾಜದಲ್ಲಿ ಆದರ್ಶಪ್ರಾಯ ವ್ಯಕ್ತಿಯಾಗಿದ್ದರು. ಅವರ ಹೆಸರಿನಲ್ಲಿ ಬಿಸಗೋಡ ಪ್ರದೇಶದಲ್ಲಿ ಒಂದು ವನ ನಿರ್ಮಿಸಬೇಕು. ಆಗಲೇ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
    ಟಿ.ಎಂ.ಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಪ್ರಮುಖರಾದ ನಾರಾಯಣ ಹೆಗಡೆ ಗಡಿಕೈ, ಎನ್.ಕೆ.ಭಟ್ಟ ಮೆಣಸುಪಾಲು, ಸಿ.ಜಿ.ಹೆಗಡೆ, ಜಿ.ಎಸ್.ಭಟ್ಟ ಕಾರೇಮನೆ, ಗೋಪಾಲಕೃಷ್ಣ ಗಾಂವ್ಕರ್, ಪಿ.ಜಿ.ಭಟ್ಟ ಬರಗದ್ದೆ, ಉಮೇಶ ಭಾಗ್ವತ, ವೆಂಕಟರಮಣ ಬೆಳ್ಳಿ, ಗಣಪತಿ ಮಾನಿಗದ್ದೆ, ನರಸಿಂಹ ಸಾತೊಡ್ಡಿ, ಕೆ.ಎಸ್.ಭಟ್ಟ, ಜಗದೀಶ ಕಮ್ಮಾರ, ಧೋಂಡು ಪಾಟೀಲ್ ನುಡಿನಮನ ಸಲ್ಲಿಸಿದರು.
    ಶಂಕರ ಭಟ್ಟ ತಾರೀಮಕ್ಕಿ, ಸಿ.ಎಸ್.ಹೆಗಡೆ, ಗಣಪತಿ ಬೊಳಗುಡ್ಡೆ, ವಲಯಾರಣ್ಯಾಧಿಕಾರಿ ಎಲ್.ವಿ.ಮಠ, ಮಹೇಶ ಗೌಳಿ, ಕೆ.ಟಿ.ಹೆಗಡೆ, ಮಾಧವ ಕೋಟೆಮನೆ, ಮತ್ತಿತರ ಪ್ರಮುಖರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ಸ್ಮರಣಾರ್ಥ ಪ್ರವಾಸಿ ಮಂದಿರದ ಆವಾರದಲ್ಲಿ ಸಂಪಿಗೆ ಗಿಡವನ್ನು ನೆಟ್ಟರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top