• Slide
  Slide
  Slide
  previous arrow
  next arrow
 • ಖ್ಯಾತ ಇತಿಹಾಸಕಾರ ಲಕ್ಷ್ಮೀಶ್ ಸೋಂದಾಗೆ ಡಾಕ್ಟರೇಟ್ ಪದವಿ

  300x250 AD

  ಶಿರಸಿ: ಇತಿಹಾಸಕಾರ ಲಕ್ಷ್ಮೀಶ್ ಹೆಗಡೆ ಸೋಂದಾ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ 31 ನೇ ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು.
  ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಇತಿಹಾಸದ ಕುರಿತು ಕಳೆದ 15 ವರ್ಷಗಳಿಂದ ನಿರಂತರ ಸಂಶೋಧನೆ ನಡೆಸಿ ಹದಿನೈದು ಕೃತಿಗಳನ್ನೂ ಸಾರಸ್ವತ ಲೋಕಕ್ಕೆ ನೀಡಿದ ಲಕ್ಷ್ಮೀಶ್, ಅವರು ಮೂಲತಃ ತಾಲೂಕಿನ ಸೋಂದಾ ಗ್ರಾಮದವರು. ಇತ್ತೀಚೆಗೆ ಇವರು ಕೇಂದ್ರ ಸರ್ಕಾರದ ನ್ಯಾಶನಲ್ ಫೆಲೋಶಿಪ್ ಸಮಿತಿಗೂ ಕರ್ನಾಟಕದಿಂದ ಆಯ್ಕೆಯಾದದ್ದು ಉಲ್ಲೇಖನೀಯ. ಡಾ.ಲಕ್ಷ್ಮೀಶ್ ಸೋಂದಾರವರು ಡಾ.ಅಮರೇಶ್ ಯತಗಲ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಸೋದೆ ಅರಸರ ಶಾಸನಗಳು ಮತ್ತು ಸ್ಮಾರಕಗಳು ಎಂಬ ವಿಷಯದ ಮೇಲೆ ಮಂಡಿಸಿದ ಮಹಾಪ್ರಬಂದಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿ ನೀಡಿದೆ ಎಂಬುದು ಉಲ್ಲೇಖನೀಯ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top