ಕಾರವಾರ: ನಗರದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ಹಲವಾರು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ಆನಂದಿ ಮೃತಪಟ್ಟಿದ್ದು, ಸಂಬಂಧಿಕರು ಇದ್ದರೆ ನಗರ ಪೊಲೀಸ್ ಠಾಣೆ ಸಂಪರ್ಕಿಲು ಕೋರಲಾಗಿದೆ.
2014ರ ಅಗಸ್ಟ್ನಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ಈಕೆಯನ್ನ ವಿಚಾರಿಸಲು ಇಲ್ಲಿಯವರೆಗೂ ಯಾವುದೇ ಪರಿಚಾರಕರು ಹಾಗೂ ಸಂಬಂಧಿಕರು ಬಂದಿಲ್ಲ. ಕಳೆದ ಕೆಲವು ದಿನದ ಹಿಂದೆಆರೋಗ್ಯ ಸ್ಥಿತಿ ಗಂಭೀರವಾದ್ದರಿoದ ರೋಗಿಯನ್ನು ಜಿಲ್ಲಾ ಆಸ್ಪತ್ರೆಯ ಮೆಡಿಕಲ್ ವಾರ್ಡ್ನಿಂದ ಐಸಿಯು ವಾರ್ಡ್ಗೆ ವರ್ಗಾಯಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮತಪಟ್ಟಿರುವುದಾಗಿ ಮತ್ತು ಮೃತದೇಹವನ್ನು ಕಾರವಾರ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುವ ಬಗ್ಗೆ ಜಿಲ್ಲಾ ಶಸ್ತ್ರ ಚಿಕಿತ್ಸಕರು ತಿಳಿಸಿದ್ದಾರೆ.
ಈಕೆಯ ಸಂಬಂಧಿಕರು, ಕುಟುಂಬಸ್ಥರು ಇದ್ದಲ್ಲಿ ನಗರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08382226333, ಪೊಲೀಸ್ ನಿರೀಕ್ಷಕರ ಮೊಬೈಲ್ ಸಂಖ್ಯೆ: 9480805230, ಪೊಲೀಸ್ ಉಪ ನಿರೀಕ್ಷಕರ ಮೊಬೈಲ್ ಸಂಖ್ಯೆ: 9480805245 ಗೆ ಸಂಪರ್ಕಿಸುವ0ತೆ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ರಿಮ್ಸ್’ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ಮೃತ: ಸಂಬಂಧಿಕರಿದ್ದರೆ ಸಂಪರ್ಕಿಸಲು ವಿನಂತಿ
