ದಾಂಡೇಲಿ: ಆಕಸ್ಮಿಕ ಅಗ್ನಿ ದುರಂತ ಸಂಭವಿಸಿ ಅಪಾರ ಪ್ರ‍್ರಮಾಣದಲ್ಲಿ ಕಟಾವಿಗೆ ನಿಂತಿದ್ದ ಕಬ್ಬಿನ ಬೆಳೆ ಸಂಪೂರ್ಣ ನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ಆಲೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಆಲೂರು ಗ್ರಾಮದ ಸಂಜು ಸೋಮಶೇಠ್, ದೇವೇಂದ್ರ ಬೇಕನಿ ಮತ್ತು ಗುರುನಾಥ ವಾಟ್ಲೇಕರ್ ಎಂಬವರಿಗೆ ಸೇರಿದ್ದೆನ್ನಲಾದ ಸರಿ ಸುಮಾರು ಹತ್ತರಿಂದ 12 ಎಕರೆ ಜಾಗದಲ್ಲಿ ಬೆಳೆದು ನಿಂತು ಕಟಾವಿಗೆ ಬಂದಿದ್ದ ಕಬ್ಬು ಬೆಂಕಿ ಅನಾಹುತಕ್ಕೆ ಸಂಪೂರ್ಣ ಸುಟ್ಟು ಹೋಗಿದೆ. ಬೆಂಕಿ ಅವಘಡ ಸಂಭವಿಸುತ್ತಿದ್ದoತೆಯೆ ಸ್ಥಳೀಯರು ಸೇರಿ ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.
ಇದಾದ ಸ್ವಲ್ಪ ಹೊತ್ತಿನಲ್ಲಿಯೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳ ಮತ್ತು ಹಳಿಯಾಳದ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿ, ಇನ್ನುಳಿದ ರೈತರ ಕಬ್ಬು ಬೆಳೆಗೆ ಅಗ್ನಿ ಅವಘಡವಾಗುವುದನ್ನು ತಪ್ಪಿಸಿದ್ದಾರೆ. ಮಾಹಿತಿಯ ಪ್ರಕಾರ ಹತ್ತರಿಂದ ಹನ್ನೆರಡು ಎಕರೆ ಜಾಗದಲ್ಲಿ ಬೆಳೆದು ನಿಂತಿದ್ದ ಕಬ್ಬು ಸಂಪೂರ್ಣ ಸುಟ್ಟು ಹೋಗಿದ್ದು, ಸರಿ ಸುಮಾರು 5 ರಿಂದ ರೂ.20 ಲಕ್ಷ ರೂ. ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ.