ಹೊನ್ನಾವರ: ಯಕ್ಷನಾದ ಕಲಾ ಪ್ರತಿಷ್ಠಾನ ಸಾಲ್ಕೋಡ್ ವತಿಯಿಂದ ಹಿರಿಯ ಕಲಾವಿದರ ನೆನಪು ಮತ್ತು ಯಕ್ಷಗಾನ ಕಾರ್ಯಕ್ರಮ ಯಕ್ಷಸಂಜೆಯನ್ನು ಡಿ.11ರಂದು ಸ್ಥಿತಿಗಾರ ಶಾಲಾ ಆವರಣದಲ್ಲಿ ಹಾಸ್ಯ ದಿಗ್ಗಜ ದಿ.ಗಣಪತಿ ಹೆಗಡೆ ವೇದಿಕೆಯಲ್ಲಿ ಆಯೋಜಿಸಲಾಗಿದೆ.
ಸಭಾ ಕಾರ್ಯಕ್ರಮದ ಉದ್ಘಾಟಕರಾಗಿ ಚಲನಚಿತ್ರ ನಿರ್ದೇಶಕ ಸುಬ್ರಾಯ ವಾಳ್ಕೆ ಆಗಮಿಸಲಿದ್ದು, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಂಕಣಕಾರರಾದ ನಾರಾಯಣ ಯಾಜಿ ಉಪಸ್ಥಿತರಿರುವರು. ನಂತರ ಕಲಾಧರ ಯಕ್ಷಗಾನ ಬಳಗದ ಮುಂದಾಳತ್ವದಲ್ಲಿ ವಿವಿಧ ಕಲಾವಿದರ ಕೂಡುವಿಕೆಯಲ್ಲಿ ‘ಮಾಗಧ ವಧೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.
ಡಿ.11ಕ್ಕೆ ಯಕ್ಷಸಂಜೆ- ಹಿರಿಯ ಕಲಾವಿದರ ನೆನಪು, ಯಕ್ಷಗಾನ ಕಾರ್ಯಕ್ರಮ
