Slide
Slide
Slide
previous arrow
next arrow

ರೋಲರ್ ಸ್ಕೇಟಿಂಗ್ ಯಾತ್ರಾ ತಂಡಕ್ಕೆ ಅದ್ಧೂರಿ ಸ್ವಾಗತ

300x250 AD

ಕುಮಟಾ: ಅಖಿಲ ಭಾರತ ಅತುಲ್ಯ ರೋಲರ್ ಸ್ಕೇಟಿಂಗ್ ಯಾತ್ರಾ ತಂಡವನ್ನು ಶಾಸಕ ದಿನಕರ ಶೆಟ್ಟಿ ಪಟ್ಟಣದ ಗಿಬ್ ವೃತ್ತದಲ್ಲಿ ಸ್ವಾಗತಿಸಿದರು.
ಅಖಿಲ ಭಾರತ ಗ್ರಾಹಕ ಪಂಚಾಯತಿಯ ಕಾರ್ಯಕರ್ತೆ ಕಾಶಿ ಪ್ರಾಂತ ಮಹಿಳಾ ಪ್ರಮುಖ್ ಸೋನಿ ಚೌರಸಿಯಾ ಅವರ ಸಾರಥ್ಯದಲ್ಲಿ 20 ಜನರ ರೋಲರ್ ಸ್ಕೇಟಿಂಗ್ ತಂಡ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸುಮಾರು 5 ಸಾವಿರ ಕಿ.ಮೀ. ಪ್ರಯಾಣ ಕ್ರಮಿಸಲಿದ್ದಾರೆ. 30 ರಾಜ್ಯಗಳ ನೂರು ನಗರಗಳು, ಸಾವಿರ ಹಳ್ಳಿಗಳು ಮತ್ತು ಪಟ್ಟಣಗಳು, ಧಾರ್ಮಿಕ, ಐತಿಹಾಸಿಕ, ಪರಂಪರೆಯ ಪ್ರವಾಸಿ ಸ್ಥಳಗಳನ್ನು ಹಾದು ಹೋಗಲಿದ್ದಾರೆ.ಪರಿಸರ ಉಳುಸಿ ಬಗ್ಗೆ ಪ್ರಸಾರ ಮತ್ತು ಪ್ರಮುಖ ಸ್ಥಳಗಳಲ್ಲಿ 1 ಲಕ್ಷ ಸಸಿಗಳನ್ನು ನೆಡಲಿದ್ದಾರೆ. ಗ್ರಾಹಕರ ರಕ್ಷಣೆ ಬಗ್ಗೆ ಅರಿವು ಮೂಡಿಸುವದು ಹಾಗೂ ರಕ್ತ ಹೀನತೆ ಮುಕ್ತ ಅಪೌಷ್ಟಿಕತೆ ಮುಕ್ತ ಭಾರತದ ಬಗ್ಗೆ ಜನರಿಗೆ ಅರಿವು ಮೂಡಿಸುವುದು. ಮಹಿಳಾ ಶಿಕ್ಷಣದತ್ತ ಜನರನ್ನು ಜಾಗೃತಿಗೊಳಿಸುವದು ಪರಿಕಲ್ಪನೆಯಾಗಿದೆ. ಕರ್ನಾಟಕ ಪ್ರಾಂತವನ್ನು ಡಿ.6ರಂದು ಗೋವಾದಿಂದ ಕಾರವಾರ ಪ್ರವೇಶಿಸಿದ ಈ ತಂಡ, ಬುಧವಾರ ಕುಮಟಾ ತಲುಪಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಈಗಾಗಲೆ ಸುಮಾರು 3900 ಕಿ.ಮೀ. ಕ್ರಮಿಸಿರುವ ಈ ತಂಡ ಅಸಾಧಾರಣ ಸಾಹಸಕ್ಕೆ ಮುಂದಾಗಿದೆ. ಭವಿಷ್ಯ ಜೀವನದ ಹಲವು ಕನಸುಗಳನ್ನು ಕಟ್ಟಬೇಕಾದ ಯುವಕ ಯುವತಿಯರು ದೇಶಾಭಿಮಾನ, ಪರಿಸರ ರಕ್ಷಣೆ, ಗ್ರಾಹಕರ ಹಿತ ರಕ್ಷಣೆಗೆ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸ್ಕೇಟಿಂಗ್ ಯಾತ್ರೆ ಹಮ್ಮಿಕೊಂಡಿರುವದು ಅಭಿಮಾನದ ಸಂಗತಿ ಎಂದರು.
ಈ ಸಂದರ್ಭದಲ್ಲಿ ಸ್ಕೇಟಿಂಗ್ ಯಾತ್ರಾ ತಂಡದ ಮುಖ್ಯಸ್ಥೆ ಸೋನಿ ಚೌರಸಿಯಾ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ, ತಾಲೂಕಾಧ್ಯಕ್ಷ ಹೇಮಂತ ಗಾಂವಕರ, ಬಿಜೆಪಿ ಪ್ರಮುಖರಾದ ಕಿಶನ ವಾಳ್ಕೆ, ಕುಮಾರ ಮಾರ್ಕಾಂಡೆ, ಸುರೇಶ ಭಟ್, ನವೀನ ನಾಯ್ಕ, ವಿಶ್ವನಾಥ ನಾಯ್ಕ, ಪುರಸಭೆ ಸದಸ್ಯರಾದ ಮೋಹಿನಿ ಗೌಡ, ಪಲ್ಲವಿ ಮಡಿವಾಳ ಇತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top