• Slide
    Slide
    Slide
    previous arrow
    next arrow
  • ಪೌರಾಣಿಕ ಮೌಲ್ಯಗಳ ಸಂಸ್ಕಾರವನ್ನು ಬಿತ್ತುವ ಶಕ್ತಿ ಯಕ್ಷಗಾನಕ್ಕಿದೆ: ಉಪೇಂದ್ರ ಪೈ

    300x250 AD

    ಸಿದ್ದಾಪುರ : ಯಕ್ಷಗಾನ ಕಲೆ ಮತ್ತು ಕಲಾವಿದರ ಕುರಿತಾಗಿ ನಾಡು ಹೊರನಾಡುಗಳಲ್ಲಿ ಗೌರವ ಭಾವನೆ ಇದೆ. ಪೌರಾಣಿಕ ಮೌಲ್ಯಗಳನ್ನು ಜನಸಾಮಾನ್ಯರಿಗೂ ತಲುಪಿಸಿ ಅವರಲ್ಲಿ ಸಂಸ್ಕಾರವನ್ನು ಬಿತ್ತುವ ಶಕ್ತಿ ಯಕ್ಷಗಾನಕ್ಕಿದೆ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.

    ಅವರು ತಾಲೂಕಿನ ಕಾಳೇನಲ್ಲಿ ಕ್ರಾಸ್ ಹತ್ತಿರದ ಶ್ರೀ ಮೃತ್ಯುಂಜಯ ದೇವಸ್ಥಾನದ ಆವರಣದಲ್ಲಿ ಶ್ರೀ ಸಿಗಂದೂರೆಶ್ವರಿ ಯಕ್ಷಗಾನ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು ಯಕ್ಷಗಾನದಲ್ಲಿ ಇಂದಿಗೂ ಜನಪದದ ಸೊಗಡು ಇದೆ. ಇದು ಆರಂಭದಲ್ಲಿ ಬುಡಕಟ್ಟು ಕಲೆಯಾಗಿದ್ದು,ಇದೀಗ ಸಾಂಸ್ಕೃತೀಕರಣಗೊಳಿಸಿದ ಕಲೆಯಾಗಿದೆ. ಕರ್ನಾಟಕದಲ್ಲಿ ಕನ್ನಡ ಅಸ್ಥಿತ್ವ ಉಳಿದಿದ್ದು ಯಕ್ಷಗಾನದಿಂದಲೇ. ಉಳಿದ ಕಲೆ ಕನ್ನಡವನ್ನು ನಾಶ ಮಾಡುತ್ತಿದೆ. ಅಲ್ಲದೇ ಈ ಕಲೆ ಸಾಂಸ್ಕ್ರತಿಕ ಸೊಗಡನ್ನು ಹೆಚ್ಚಿಸುತ್ತಿದ್ದು ಜಾಗತಿಕ ಮಟ್ಟದಲ್ಲಿಯೂ ಇದರ ಕಂಪನ್ನು ಪಸರಿಸಿದೆ. ಕಲೆ ಹಾಗೂ ಕಲಾವಿದರನ್ನು ಗೌರವಿಸೋಣ ಎಂದು ಹೇಳಿದರು . ಈ ಕಾರ್ಯಕ್ರಮದಲ್ಲಿ ಸಿಗಂದೂರು ಮೇಳದ ಪ್ರಧಾನ ಭಾಗ್ವತರಾದ ರಾಮಚಂದ್ರ ನಾಯ್ಕ ಹೆಮ್ಮನಬೈಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಇವರು ರಚಿಸಿದ ನಾಗ ಚೌಡೇಶ್ವರಿ ಯಕ್ಷಗಾನ ಕಥಾ ಭಾಗ ಬಹು ಮೆಚ್ಚುಗೆಯ ಪಾತ್ರದೊಂದಿಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಅನೇಕ ಭಾಗಗಳಲ್ಲಿ ಪ್ರಸಿದ್ಧವಾಗಿದೆ

    300x250 AD

    ಈ ಸಂದರ್ಭದಲ್ಲಿ ನಾಣಿಕಟ್ಟಾ ಸೊಸೈಟಿ ಅಧ್ಯಕ್ಷ ಎನ್ ಬಿ ಹೆಗಡೆ, ಸುಭಾಷ ನಾಯ್ಕ ಕಾನಸೂರು, ನಟರಾಜ್ ನಾಣಿಕಟ್ಟಾ, ರಮೇಶ್ ನಾಯ್ಕ ನಾಣಿಕಟ್ಟಾ, ಆದರ್ಶ ನಾಯ್ಕ, ಶ್ರವಣ ಕುಮಾರ್ ಹೊಸೂರು, ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು. 

    Share This
    300x250 AD
    300x250 AD
    300x250 AD
    Leaderboard Ad
    Back to top