Slide
Slide
Slide
previous arrow
next arrow

ಉಮ್ಮಚಗಿಯಲ್ಲಿ ಭಗವದ್ಗೀತಾಧಾರಿತ ಗೀತ- ಚಿತ್ರ- ವ್ಯಾಖ್ಯಾನ

300x250 AD

ಯಲ್ಲಾಪುರ: ಉಮ್ಮಚಗಿ ಶ್ರೀಮಾತಾ ಸಂಸ್ಕೃತ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಘಟಕ, ಉಮ್ಮಚಗಿ ಶ್ರೀಮಾತಾ ಸಂಸ್ಕೃತ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ‘ನವಪಲ್ಲವ ಭಗವದ್ಗೀತಾಧಾರಿತ ಗೀತ, ಚಿತ್ರ, ವ್ಯಾಖ್ಯಾನ’ ನಡೆಯಿತು.
ಶ್ರೀಮಾತಾ ಸಂಸ್ಕೃತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಟಿ.ವಿ.ಹೆಗಡೆ ಬೆದೆಹಕ್ಲು, ಉಮ್ಮಚ್ಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗು0ಡಿ, ವೈದಿಕ ಶಿಕ್ಷಣ ಸಂಸ್ಥೆಯ ಸದಸ್ಯರುಗಳಾದ ಎಲ್.ಜಿ.ಹೆಗಡೆ ಬೆಳಗುಂದ್ಲಿ, ಗಜಾನನ ಭಟ್ಟ ಹಿತ್ಲಳ್ಳಿ, ಸಂಸ್ಥೆಯ ಪ್ರಾಂಶುಪಾಲ ನಾಗೇಶ ಭಟ್ಟ ಮೊದಲಾದವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕವಯತ್ರಿ ಸುಜಾತಾ ಹೆಗಡೆ ಕಾಗಾರಕೊಡ್ಲ, ಗೀತೆಯ ಕೆಲವು ಶ್ಲೋಕಗಳನ್ನು ಕನ್ನಡಕ್ಕೆ ಕವಿತೆಯಾಗಿ ತರುವುದರ ಹಿಂದೆ ಮೂರು- ನಾಲ್ಕು ತಿಂಗಳುಗಳ ಪ್ರಯತ್ನವಿದೆ. ಇದರ ಹಿಂದೆ ಅನೇಕರ ಶ್ರಮವಿದೆ. ಇಂಥದ್ದೊ0ದು ಸಾಧ್ಯವಾಗುತ್ತಿರುವುದಕ್ಕೆ ಹೆಮ್ಮೆ ಮತ್ತು ಸಂತಸವಿದೆ ಎಂದು ಹೇಳಿದರು.
ನಂತರ ನಡೆದ ಭಗವದ್ಗೀತಾಧಾರಿತ ಗೀತ, ಚಿತ್ರ, ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಕವಯತ್ರಿ ಸುಜಾತಾ ಹೆಗಡೆ ಕಾಗಾರಕೊಡ್ಲು ಅವರ ಸಾಹಿತ್ಯಕ್ಕೆ ತಿಮ್ಮಪ್ಪ ಭಾಗವತ್ ಬಾಳೆಹದ್ದ ಸ್ವರ ಸಂಯೋಜಿಸಿ, ಹಾರ್ಮೋನಿಯಂ ನುಡಿಸಿದರಲ್ಲದೆ, ತಬಲಾದಲ್ಲಿ ಗಣೇಶ ಭಟ್ಟ ಗುಂಡ್ಕಲ್, ಕೊಳಲಿನಲ್ಲಿ ಸನತ್ಕುರ ಹೆಗಡೆ ದೋರಣಗಾರ, ವಾಣಿ ಯೋಗೀಶ ಭಟ್ಟ, ಸುಮಾ ಹೆಗಡೆ , ರಾಜೇಶ ಶಾಸ್ತ್ರಿ ಸುಶ್ರಾವ್ಯವಾಗಿ ಹಾಡಿದ ಎಂಟು ಹಾಡುಗಳಿಗೆ ಕಲಾವಿದ ಸತೀಶ್ ಯಲ್ಲಾಪುರ ಅವರು ಅತ್ಯಂತ ಸುಂದರವಾದ ಚಿತ್ರ ಬರೆದು, ಡಾ.ದತ್ತಾತ್ರೇಯ ಗಾಂವ್ಕರ್ ವ್ಯಾಖ್ಯಾನಿಸಿದ ಕಾರ್ಯಕ್ರಮ ಜನಮನ್ನಣೆಗೆ ಪಾತ್ರವಾಯಿತು. ವಿದ್ಯಾರ್ಥಿಗಳ ವೇದ ಘೋಷದೊಂದಿಗೆ ಶುರುವಾದ ಕಾರ್ಯಕ್ರಮದಲ್ಲಿ ಮಹೇಶ್ ಭಟ್ಟ ಸ್ವಾಗತಿಸಿ, ನಿರ್ವಹಿಸಿ, ವಂದನಾರ್ಪಣೆ ಸಲ್ಲಿಸಿದ್ದರು.

300x250 AD
Share This
300x250 AD
300x250 AD
300x250 AD
Back to top